ಮಡಿಕೇರಿಯ ಶನಿವಾರಸಂತೆಯಲ್ಲಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಶುಕ್ರವಾರ ರಾತ್ರಿ ರೈತರ ಕಾಫಿ, ಬಾಳೆತೋಟ ಮತ್ತು ಗದ್ದೆಗೆ ನುಸುಳಿದ ಕಾಡಾನೆ ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳನ್ನು ತುಳಿದು ಧ್ವಂಸಗೊಳಿಸಿದೆ.
ಮಡಿಕೇರಿ(ಅ.20): ಶನಿವಾರಸಂತೆಯ ಮಾಲಂಬಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ರೈತರ ಕಾಫಿ, ಬಾಳೆತೋಟ ಮತ್ತು ಗದ್ದೆಗೆ ನುಸುಳಿದ ಕಾಡಾನೆ ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳನ್ನು ತುಳಿದು ಧ್ವಂಸಗೊಳಿಸಿದೆ.
ಮಾಲಂಬಿ- ಕೂಡುರಸ್ತೆ ಗ್ರಾಮದ ಪಕ್ಕದಲ್ಲಿರುವ ದೊಡ್ಡೇರೆ ಮೀಸಲು ಅರಣ್ಯದಿಂದ ಬಂದ ಒಂಟಿ ಸಲಗ ಗ್ರಾಮದ ಸಿ.ಕೆ. ಗಣೇಶ್ ಮತ್ತು ಅವರ ಸಹೋದರ ಸಿ.ಕೆ. ದುರ್ಗರಾಜು ಎಂಬುವರಿಗೆ ಸೇರಿದ ಕಾಫಿ, ಬಾಳೆಗಿಡ, ಸಿಹಿ ಗೆಣಸು ಹಾಗೂ ಗದ್ದೆಯಲ್ಲಿ ಫಸಲಿಗೆ ಬಂದಿದ್ದ ಬತ್ತದ ಪೈರನ್ನು ತುಳಿದು ಧ್ವಂಸಗೊಳಿಸಿದೆ.
undefined
ಕೊಡಗಿನಲ್ಲಿ 24ರ ವರೆಗೆ ಆರೆಂಜ್ ಅಲರ್ಟ್..
ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಅಳವಡಿಸಿದ್ದ ಪೈಪ್‌ಗಳನ್ನು ತುಳಿದು ಹಾನಿ ಮಾಡಿದೆ. ಕಾಡಾನೆ ದಾಳಿಯಿಂದ ಬೆಳೆದಿದ್ದ ಸುಮಾರು 35 ಸಾವಿರ ರು. ಮೌಲ್ಯದ ಕೃಷಿ ಬೆಳೆ ಫಸಲು ನಷ್ಟವಾಗಿರುವುದಾಗಿ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಲಂಬಿ ಭಾಗದಲ್ಲಿ ತಿಂಗಳಿಂದ ಒಂಟಿ ಸಲಗ ಓಡಾಡುತ್ತಿದೆ. ರಾತ್ರಿ ವೇಳೆ ಒಂಟಿ ಸಲಗ ರೈತರ ಜಮೀನಿಗೆ ನುಸುಳಿ ಫಸಲಿಗೆ ಬಂದಿರುವ ಕೃಷಿ ಬೆಳೆಯನ್ನು ತುಳಿದು ಧ್ವಂಸಗೊಳಿಸುತ್ತಿದೆ ಎಂದು ಈ ಭಾಗದ ರೈತರು ತಿಳಿಸಿದ್ದಾರೆ.
ಒತ್ತುವರಿಗೊಂಡ ಜಾಗ ತೆರವುಗೊಳಿಸಿ ರಸ್ತೆ ನಿರ್ಮಿಸಿದ ತಹಸೀಲ್ದಾರ್..!