ಲಂಚ ಸ್ವೀಕರಿಸುತ್ತಿದ್ದ ತಹಸೀಲ್ದಾರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಭೂ ಪರಿವರ್ತನೆ ಮಾಡಲು ಅರ್ಜಿದಾರನಿಂದ 2000 ರುಪಾಯಿ ಲಂಚ ಸ್ವೀಕರಿಸುತ್ತಿದ್ದ ವಿರಾಜಪೇಟೆಯ ತಾಲೂಕು ದಂಡಾಧಿಕಾರಿ ಕೆ.ಕೆ. ಪುರಂದರ ಅವರನ್ನು ಎಸಿಬಿ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಮಡಿಕೇರಿ(ಅ.12): ಭೂ ಪರಿವರ್ತನೆ ಮಾಡಲು ಅರ್ಜಿದಾರನಿಂದ 2000 ರುಪಾಯಿ ಲಂಚ ಸ್ವೀಕರಿಸುತ್ತಿದ್ದ ವಿರಾಜಪೇಟೆಯ ತಾಲೂಕು ದಂಡಾಧಿಕಾರಿ ಕೆ.ಕೆ. ಪುರಂದರ ಅವರನ್ನು ಎಸಿಬಿ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಶುಕ್ರವಾರ ವಿರಾಜಪೇಟೆಯ ತಮ್ಮ ಕಚೇರಿಯಲ್ಲಿ 11.30ರ ಹೊತ್ತಿಗೆ ಪೊನ್ನಂಪೇಟೆ ಸಮೀಪದ ತೂಚಮಕೇರಿಯ ನರೇಂದ್ರ ಅವರಿಂದ ಭೂ ಪರಿವರ್ತನೆ ಮಾಡಲು 2 ಸಾವಿರ ರು. ಹಣ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ದಾಳಿ ನಡೆಸಿ ನಗದು ಸಮೇತ ತಹಸೀಲ್ದಾರರನ್ನು ವಶಕ್ಕೆ ಪಡೆದಿದ್ದಾರೆ.
undefined
ಮಡಿಕೇರಿ: ಶಾಸಕರ ಕೈತೋಟದಿಂದಲೇ ಕಳವು
ಜೊತೆಗೆ ಈ ವ್ಯವಾಹರದಲ್ಲಿ ಮಧ್ಯವರ್ತಿಯಾಗಿದ್ದ ದ್ವೀತಿಯ ದರ್ಜೆ ಗುಮಾಸ್ತ ಸಿಬ್ಬಂದಿ ಜಾಗೃತ್ (ಸದಾ) ಅವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನು ಬಂಧಿಸಿರುವ ಅಧಿಕಾರಿಗಳು ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತೂಚಮಕೇರಿಯ ಎಂ.ಎನ್. ನರೇಂದ್ರ ಅವರು ತಮ್ಮ 20 ಸೆಂಟ್ಸ್ ಭೂಮಿ ದಾಖಲಾತಿ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದರು. ಈ ಕಡತ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದ ಬಳಿಕ ಮುಂದಿನ ಪ್ರಕ್ರಿಯೆಗಾಗಿ ತಾಲೂಕು ತಹಸೀಲ್ದಾರ್ ಕೆ. ಪುರಂದರ ಅವರ ಬಳಿ ಬಂದಿತ್ತು. ಪ್ರಕ್ರಿಯೆ ನಡೆಸಲು ನರೇಂದ್ರ ಅವರಿಂದ 15 ಸಾವಿರ ರು. ಹಣಕ್ಕೆ ತಹಸೀಲ್ದಾರ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮಡಿಕೇರಿಯಲ್ಲಿ ಖೋಟಾ ನೋಟು ಜಾಲ, ಮೂವರ ಬಂಧನ
ಮಾತುಕತೆ ಬಳಿಕ 9,000 ರುಪಾಯಿಗೆ ಒಪ್ಪಂದವಾಗಿತ್ತು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ನರೇಂದ್ರ ಮೊದಲೇ ಎಸಿಬಿಗೆ ದೂರು ನೀಡಿದ್ದರು. ಅದರಂತೆ ಈಗಾಗಲೇ 7 ಸಾವಿರ ರುಪಾಯಿ ಹಣವನ್ನೂ ನೀಡಲಾಗಿತ್ತು. ಬಾಕಿಯಿದ್ದ 2 ಸಾವಿರ ರು.ನ್ನು ಶುಕ್ರವಾರ ತಹಸೀಲ್ದಾರ್‌ಗೆ ನರೇಂದ್ರ ಅವರು ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್ ತರಬೇತಿ
ಹಾಸನ ಕೊಡಗು ಉಸ್ತುವಾರಿ ಡಿವೈಎಸ್‌ಪಿ ಪೂರ್ಣಚಂದ್ರತೇಜಸ್ವಿ ಹಾಗೂ ಕೊಡಗು ವಿಭಾಗದ ವೃತ್ತ ನಿರೀಕ್ಷಕರಾದ ಶ್ರೀಧರ್, ಮಹೇಶ್ ನೇತೃತ್ವದಲ್ಲಿ ಮುಖ್ಯ ಪೇದೆಗಳಾದ ರಾಜೇಶ್, ದಿನೇಶ್, ಸುರೇಶ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಹಣ ಸಮೇತ ತಹಸೀಲ್ದಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪುರಂದರ ಅವರು ಕೆಲವು ತಿಂಗಳ ಹಿಂದೆ ಚಾಮರಾಜನಗರದಿಂದ ವಿರಾಜಪೇಟೆಗೆ ವರ್ಗವಾಗಿ ಬಂದಿದ್ದರು. ನಿವೃತ್ತಿಗೆ ಎರಡು ವರ್ಷ ಬಾಕಿ ಇತ್ತು ಎಂದು ತಿಳಿದು ಬಂದಿದೆ.
ದಸರಾ ಪ್ರವಾಸಿಗರ ಮೊಬೈಲ್, ಹಣ ಸುಲಿಗೆ