ಚುನಾಯಿತ ಸರ್ಕಾರ ಐದು ವರ್ಷ ಆಡಳಿತ ಮಾಡಬೇಕು ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಯಾವುದೇ ಚುನಾಯಿತ ವಿಧಾನಸಭಾ ಸದಸ್ಯ ಹಾಗೂ ಸರ್ಕಾರ ಸಂಪೂರ್ಣವಾಗಿ ಐದು ವರ್ಷಗಳನ್ನು ಪೂರೈಸಬೇಕು. ಯಾರಿಗೂ ತೊಂದರೆ ಆಗಬಾರದು ಅನ್ನುವ ಅರ್ಥದಲ್ಲಿ ಮಾಜಿ ಸಿಎಂ ಮಾತನಾಡಿದ್ದಾರೆ.
ಮಡಿಕೇರಿ(ನ.02): ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಎಂಎಲ್‌ಸಿ ಆಗುವಾಗ ಒಂದು ರೀತಿ, ಗೆದ್ದಾದ ಮೇಲೆ ಇನ್ನೊಂದು ರೀತಿ ವರ್ತಿಸುವುದು ಸರಿಯಲ್ಲ ಎಂದು ಅತೃಪ್ತ ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ಕೊಡ್ಲಿಪೇಟೆಯಿಂದ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾಧ್ಯಮ ಪ್ರತಿನಿ ಗಳೊಂದಿಗೆ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಅಸಮಾಧಾನ ಇದ್ದರೆ ಅದನ್ನು ಎಲ್ಲಿ ಮಾತನಾಡಬೇಕು ಅಲ್ಲಿಯೇ ಮಾತನಾಡಬೇಕು. ಅದನ್ನು ಬಿಟ್ಟು ಸಂತೆಯಲ್ಲಿ ಹೋಗಿ ಚರ್ಚಿ ಮಾಡೋಕೆ ಆಗುತ್ತಾ? ಏನಾದರೂ ಸಮಸ್ಯೆಗಳಿದ್ದರೆ ಬನ್ನಿ ಮಾತನಾಡಿ ಬಗೆಹರಿಸಲು ಪ್ರಯತ್ನಿಸೋಣ ಎಂದು ಹೇಳಿದ್ದಾರೆ.
ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಪೆಷಲ್ ಟೀಮ್..!
ಪಠ್ಯ ಪುಸ್ತಕದಿಂದ ಟಿಪ್ಪು ಅಧ್ಯಾಯವನ್ನು ತೆಗೆದ ಮಾತ್ರಕ್ಕೆ ಇತಿಹಾಸ ಬದಲಾಗುತ್ತಾ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಥವಾ ಟಿಪ್ಪು ಹೀಗೆ ಯಾರೇ ಇರಬಹುದು ದೇಶದ ಸ್ವಾತಂತ್ರ್ಯಕ್ಕೆ ಒಂದೊಂದು ಕೊಡುಗೆ ನೀಡಿಯೇ ನೀಡಿದ್ದಾರೆ. ಇದೀಗ ಪಠ್ಯದಿಂದ ಟಿಪ್ಪು ಪಾಠ ತೆಗೆಯಲು ಹೊರಟಿರುವ ಬಿಜೆಪಿ ಸರ್ಕಾರದ್ದು ಒಂದು ಬಾಲಿಶ ನಡೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಂತಹ ಸಂದರ್ಭದಲ್ಲಿ ಅವರೇ ಟಿಪ್ಪು ಜಯಂತಿ ಆಚರಿಸಿ, ಸನ್ಮಾನ ಸ್ವೀಕರಿಸಿದ್ದರು. ಹಾಗಾದರೆ ಒಂದೊಂದು ಸರ್ಕಾರಗಳು ಬದಲಾದಂತೆ ಅಭಿಪ್ರಾಯಗಳು ಬೇರೆಯಾಗುತ್ತವೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕರ್ನಾಟಕದ ಮೀನುಗಾರರಿಗೆ 'ಮಹಾ' ಸಮಸ್ಯೆ..! ಸಮುದ್ರದಲ್ಲೂ ಶುರುವಾಯ್ತು ಗಡಿ ಪ್ರಾಬ್ಲಮ್
ಉಪ ಚುನಾವಣಾ ಫಲಿತಾಂಶದ ಬಳಿಕ ನಮ್ಮ ನಿಲುವು ಸ್ಪಷ್ಟವಾಗುತ್ತದೆ. ಯಾವುದೇ ಚುನಾಯಿತ ವಿಧಾನಸಭಾ ಸದಸ್ಯ ಹಾಗೂ ಸರ್ಕಾರ ಸಂಪೂರ್ಣವಾಗಿ ಐದು ವರ್ಷಗಳನ್ನು ಪೂರೈಸಬೇಕು. ಯಾರಿಗೂ ತೊಂದರೆ ಆಗಬಾರದು ಅನ್ನುವ ಅರ್ಥದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಆಡಳಿತದ ಬಗ್ಗೆ ಹೇಳಿಕೆ ನೀಡಿದ್ದಾರೆ. ನಾವಾಗಿಯೇ ಬಿಜೆಪಿ ಅವರನ್ನು ಬೆಂಬಲಿಸುತ್ತೇವೆ ಅಂತಾ ಎಲ್ಲೂ ಹೇಳಿಲ್ಲ ಎಂದಿದ್ದಾರೆ.