ಅನರ್ಹ ಶಾಸಕ ಎಚ್.ವಿಶ್ವನಾಥ್ ಹಿರಿಯ ರಾಜಕಾರಣಿ, ಶಾಸಕ ಸಾ.ರ.ಮಹೇಶ್ ಕೂಡಾ ಬುದ್ಧಿವಂತ ರಾಜಕಾರಣಿ. ಅವರ ವೈಯಕ್ತಿಕ ವಿಚಾರಗಳನ್ನು ಈ ರೀತಿ ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮಡಿಕೇರಿ(ಅ.19): ಅನರ್ಹ ಶಾಸಕ ಎಚ್.ವಿಶ್ವನಾಥ್ ಹಿರಿಯ ರಾಜಕಾರಣಿ, ಶಾಸಕ ಸಾ.ರ.ಮಹೇಶ್ ಕೂಡಾ ಬುದ್ಧಿವಂತ ರಾಜಕಾರಣಿ. ಅವರ ವೈಯಕ್ತಿಕ ವಿಚಾರಗಳನ್ನು ಈ ರೀತಿ ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು. ಈ ರೀತಿ ಆದಾಗ ಯಾರಿಗೂ ಗೌರವ ಮತ್ತು ಬೆಲೆ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ವಿರಾಜಪೇಟೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಇಬ್ಬರೂ ರಾಜಕಾರಣಿಗಳ ಆಣೆ ಪ್ರಮಾಣ ಪ್ರಹಸನದ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಕಾವೇರಿ ತವರು ತಲಕಾವೇರಿ ಜಾತ್ರಾ ಮಹೋತ್ಸವಕ್ಕೆ ಭಕ್ತರ ದಂಡು...
ತೋರ ಗ್ರಾಮದಲ್ಲಿ ಸಚಿವ ಸೋಮಣ್ಣ ಅವರು ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಹೊಗಳಿದ ವಿದ್ಯಮಾನವೂ ನಡೆಯಿತು. ಇಷ್ಟುವರ್ಷ ಆಯ್ತು. ಇಂಥ ಎಂ.ಎಲ….ಎ ಇದ್ದಾರೆ ಅಂತಾನೇ ನನಗೆ ಗೊತ್ತಿರಲಿಲ್ಲ. ಅವರು ಎಷ್ಟುಚೆನ್ನಾಗಿ ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಏನು ಮಾಡಿದರೆ ಏನಾಗುತ್ತದೆ ಎಂದು ಪ್ರತಿಯೊಂದು ಚಿಕ್ಕ ವಿಚಾರದ ಬಗ್ಗೆ, ಸ್ಥಳೀಯ ಜಾಗಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದಿದ್ದಾರೆ.
ಅಲ್ಲೇ ಇದ್ದ ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ, ಹೌದಮ್ಮಾ, ಇವರನ್ನು ಹೊಗಳಬೇಕು ಎಂದು ಹೊಗಳುತ್ತಿಲ್ಲ. ನಿಜವಾಗಿ ಇಂಥ ಎಂ.ಎಲ್ .ಎಯನ್ನು ನಾನು ನೋಡಿಲ್ಲ ಎಂದರು. ಕೆ.ಜಿ.ಬಿ. ಎಂದಿನಂತೆ ಹಸನ್ಮುಖಿಯಾಗಿದ್ದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಹಾಗೂ ಶಾಸಕ ಅಪ್ಪಚ್ಚು ರಂಜನ್ ಅವರನ್ನೂ ಶ್ಲಾಘಿಸಿದ ಸೋಮಣ್ಣ, ಇವರು ಮೂವರ ಟೀಮ್ ವರ್ಕ್ ತುಂಬಾ ಚೆನ್ನಾಗಿದೆ ಎಂದರು. ನಾನು, ಬೋಪಯ್ಯನವರನ್ನು ‘ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಹೆಂಗರೀ ನಗು ನಗುತ್ತಾ ಕೆಲಸ ಮಾಡುತ್ತೀರಿ?’ ಎಂದು ಕೇಳಿದ್ದೇನೆ. ಆಗ ಅವರು ‘ಇನ್ನೇನು ಮಾಡುವುದು ಮಾಡಬೇಕಲ್ವಾ?’ ಎಂದರು ಎಂದು ಸೋಮಣ್ಣ ಹೇಳಿದ್ದಾರೆ.
ಚುನಾವಣೆಗೆ ಅಗ್ರೆಸಿವ್ ಪ್ರಚಾರ ಮಾಡಿ ಎಂದ ಸಿದ್ದು