ಕಾವೇರಿ ತವರು ತಲಕಾವೇರಿ ಜಾತ್ರಾ ಮಹೋತ್ಸವಕ್ಕೆ ಭಕ್ತರ ದಂಡು

By Kannadaprabha News  |  First Published Oct 18, 2019, 2:26 PM IST

ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲ ದೇವತೆ ಕಾವೇರಿ ತಾಯಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಭಕ್ತರ ದಂಡು ಹರಿದುಬಂತು. ಹಬ್ಬದ ಹಿನ್ನೆಲೆಯಲ್ಲಿ ತಲಕಾವೇರಿಗೆ ಆಗಮಿಸಿದ ಭಕ್ತರು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.


ಮಡಿಕೇರಿ(ಅ.18): ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲ ದೇವತೆ ಕಾವೇರಿ ತಾಯಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಗುರುವಾರ ಬೆಳಗ್ಗೆ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು.

ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲ ದೇವತೆ ಕಾವೇರಿ ತಾಯಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಗುರುವಾರ ಬೆಳಗ್ಗೆ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು.

Latest Videos

undefined

ಹುಣಸೂರಲ್ಲಿ ಅನರ್ಹ ಶಾಸಕ ಹೇಳಿದ್ದೇ ಫೈನಲ್ ಎಂದ್ರು ಸೋಮಣ್ಣ

ಸಂಜೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ ಕಂಡುಬಂತು. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಭಾರಿ ಮಳೆಯಿಂದಾಗಿ ಭಕ್ತರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.

ಮಡಿಕೇರಿ: 17,18ರಂದು ಏಕಮುಖ ಸಂಚಾರ

ಹಬ್ಬದ ಹಿನ್ನೆಲೆಯಲ್ಲಿ ತಲಕಾವೇರಿಗೆ ಆಗಮಿಸಿದ ಭಕ್ತರು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಕ್ಷೇತ್ರದಲ್ಲಿ ಮಂಡ್ಯ, ತಮಿಳುನಾಡು, ಕೇರಳ ಭಾಗದ ಭಕ್ತರು ಕಂಡುಬಂದರು. ಶುಕ್ರವಾರ ಮುಂಜಾನೆ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಸೇರಿದ ಯಾತ್ರಾರ್ಥಿಗಳು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಸಿಕೊಳ್ಳಲು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಭಾರಿ ವರ್ಷಧಾರೆ:

ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಗುರುವಾರ ಬೆಳಗ್ಗೆ ಬಿರು ಬಿಸಿಲಿನ ವಾತಾವರಣವಿತ್ತಾದರೂ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣದೊಂದಿಗೆ ಕೆಲ ಕಾಲ ಭಾರಿ ಮಳೆಯಾಯಿತು. ಮತ್ತೆ ಸಂಜೆ 4.30ರ ನಂತರ ಸತತವಾಗಿ ಭಾರಿ ಮಳೆಯಾಯಿತು. ಇದರಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಪರದಾಡುವಂತಾಯಿತು.

ತುಮಕೂರು: ಚಿರತೆ ದಾಳಿಗೆ ವೃದ್ಧೆ ಬಲಿ.

ತಲಕಾವೇರಿಯಲ್ಲಿ ದಟ್ಟವಾದ ಮಂಜು ಮುಸುಕಿದ ವಾತಾವರಣ ಎದುರಾಗಿತ್ತು. ಹಬ್ಬದ ಅಂಗವಾಗಿ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವಿವಿಧ ಅಂಗಡಿ ಮಳಿಗೆಗಳನ್ನು ತೆರೆಯಲಾಗಿತ್ತು. ಆದರೆ ಮಳೆಯಿಂದಾಗಿ ಭಕ್ತರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ವ್ಯಾಪಾರ ಇಳಿಮುಖವಾಗುವಂತಾಯಿತು. ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರೆ ನಡೆಲಿದ್ದು, ಭಕ್ತರು ಆಗಮಿಸಲಿದ್ದಾರೆ.

ಬಸ್‌ ಇಲ್ಲದೆ ಪರದಾಟ:

ಜಾತ್ರೆಯ ಹಿನ್ನೆಲೆಯಲ್ಲಿ ಕೆಎಎಸ್‌ಆರ್‌ಟಿಸಿಯಿಂದ ಮಡಿಕೇರಿಯಿಂದ ಭಾಗಮಂಡಲಕ್ಕೆ ಜಾತ್ರೆಯ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿತ್ತಾದರೂ ಸಂಜೆಯ ವರೆಗೂ ಭಾಗಮಂಡಲದಿಂದ ತಲಕಾವೇರಿಗೆ ಒಂದೇ ಒಂದು ಸರ್ಕಾರಿ ಬಸ್‌ ವ್ಯವಸ್ಥೆ ಇರಲಿಲ್ಲ. ಒಂದು ಖಾಸಗಿ ಬಸ್‌ ಕೂಡಾ ಸಂಚರಿಸುತ್ತಿತ್ತು. ಇದರಿಂದಾಗಿ ಭಕ್ತರು ತಲಕಾವೇರಿಗೆ ತೆರಳಲು ಪರದಾಡಿದರು. ಕೆಲವು ಭಕ್ತರು ಭಾಗಮಂಡಲದಲ್ಲೇ ಉಳಿದುಕೊಳ್ಳುವಂತಾಯಿತು. ಕೆಲವರು ಆಟೋ ರಿಕ್ಷಾ ಅವಲಂಬಿಸಿ ತಲಕಾವೇರಿ ತಲುಪಿದರು.

ಸಂಗಮದಲ್ಲಿ ಪಿಂಡ ಪ್ರದಾನ

ಮೃತರಾದ ಹಿರಿಯರಿಗೆ ತೀರ್ಥೋದ್ಭವ ಸಂದರ್ಭ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿದರೆ ಅವರ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಕುಟುಂಬಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹಿರಿಯ ಗೌರವಾರ್ಥ ಕೇಶಮುಂಡನ ಮಾಡಿ ನಂತರ ಪಿಂಡ ಪ್ರದಾನ ಮಾಡಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.

ಅನ್ನಪ್ರಸಾದ ಸ್ವೀಕರಿಸಿದ ಭಕ್ತರು

ಜಾತ್ರೆಯ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಕಡಿಮೆ ಸಂಖ್ಯೆಯಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಭಕ್ತರು ಆಗಮಿಸಿದ್ದರು. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಮಧ್ಯಾಹ್ನ ಸಾವಿರಾರು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು. ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಕೊಡಗು ಏಕೀಕರಣ ರಂಗದಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದೆಡೆ ಮಂಡ್ಯದ ಭಕ್ತ ವತ್ಸಲ ತಂಡದಿಂದ ಗುರುವಾರ ಹಾಗೂ ಬುಧವಾರ ಅನ್ನದಾನ ಮಾಡಲಾಗುತ್ತಿದೆ.

ಪೊಲೀಸರಿಂದ ಬಂದೋಬಸ್ತು

ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್‌್ತ ಮಾಡಲಾಯಿತು. ಭಾಗಮಂಡಲದಲ್ಲಿ ಡಿವೈಎಸ್‌ಪಿ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ಟ್ರಾಫಿಕ್‌ ಪೊಲೀಸರು, ಪೊಲೀಸರು, ಹೋಂಗಾರ್ಡ್‌ಗಳನ್ನು ಬಂದೋಬಸ್‌್ತಗೆ ನಿಯೋಜನೆ ಮಾಡಲಾಯಿತು.

ಭಿಕ್ಷಾಟಣೆಯಲ್ಲಿ ಪುಟಾಣಿಗಳು!

ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಪುಟಾಣಿಗಳು ಕೂಡ ಭಿಕ್ಷಾಟನೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂತು. ಸಂಗಮಕ್ಕೆ ಭೇಟಿ ನೀಡಿದ ಭಕ್ತರು ಭಿಕ್ಷೆ ನೀಡಿದರು. ಜಾತ್ರಾ ಸಂದರ್ಭ ಭಿಕ್ಷೆ ನೀಡಿದರೆ ಹೆಚ್ಚಿನ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ರಾಜ್ಯದ ನಾನಾ ಕಡೆಗಳಲ್ಲಿ ಭಿಕ್ಷುಕರ ಆಗಮಿಸುತ್ತಾರೆ. ಭಕ್ತರು ಅಕ್ಕಿ ಹಾಗೂ ಹಣವನ್ನು ದಾನವಾಗಿ ನೀಡುತ್ತಾರೆ.

ವಿವಿಧ ಇಲಾಖೆಗಳ ಮಳಿಗೆ

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ವಿವಿಧ ಇಲಾಖೆಗಳಿಂದ ಮಾಹಿತಿ ನೀಡುವ ಸಲುವಾಗಿ ಪ್ರದರ್ಶನ ಮಳಿಗೆಗಳನ್ನು ಆರಂಭಿಸಲಾಗಿತ್ತು. ಕೃಷಿ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಹೋಬಳಿಗಳ ಮಣ್ಣಿನ ಮಾದರಿ, ವಿವಿಧ ಬತ್ತದ ತಳಿಗಳ ಮಾದರಿ, ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಸೌಲಭ್ಯಗಳ ಮಾಹಿತಿಗಳ ಪ್ರದರ್ಶನ ಇತ್ತು. ತೋಟಗಾರಿಕೆ ಇಲಾಖೆಯಿಂದ ವಿವಿಧ ತೋಟಗಾರಿಕಾ ಬೆಳೆಗಳು, ಜೇನು ಕೃಷಿ ಸೇರಿದಂತೆ ತೋಟಗಾರಿಗೆ ಸಂಬಂಧಿಸಿದ ಮಾಹಿತಿ ಪ್ರದರ್ಶನ ಮಾಡಲಾಯಿತು. ಸಾರ್ವಜನಿಕರಿಗೆ ಸರ್ಕಾರಿಂದ ನೀಡಲಾಗುವ ಸೌಲಭ್ಯದ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿಯ ಮಳಿಗೆ ತೆರೆಯಲಾಗಿತ್ತು.

-ವಿಘ್ನೇಶ್‌ ಎಂ. ಭೂತನಕಾಡು

click me!