ಮಡಿಕೇರಿಯಲ್ಲಿ ಮೂರು ದಿನ ಮದ್ಯ ಸಿಗಲ್ಲ..!

By Kannadaprabha NewsFirst Published Oct 16, 2019, 8:48 AM IST
Highlights

ಅ.16 ರಿಂದ ಅನ್ವಯಿಸುವಂತೆ ಬುಧವಾರದಿಂದ ಮೂರು ದಿನ ಮಡಿಕೇರಿಯಲ್ಲಿ ಮದ್ಯ ದೊರೆಯುವುದಿಲ್ಲ. ಎಲ್ಲ ಮದ್ಯದಂಗಡಿಗಳಲ್ಲಿಯೂ ಮದ್ಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ.

ಮಡಿಕೇರಿ(ಅ.16): ಅ.16 ರಿಂದ ಅನ್ವಯಿಸುವಂತೆ ಬುಧವಾರದಿಂದ ಮೂರು ದಿನ ಮಡಿಕೇರಿಯಲ್ಲಿ ಮದ್ಯ ದೊರೆಯುವುದಿಲ್ಲ. ಎಲ್ಲ ಮದ್ಯದಂಗಡಿಗಳಲ್ಲಿಯೂ ಮದ್ಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ.

ತಲಕಾವೇರಿಯಲ್ಲಿ 17,18ರಂದು ನಡೆಯಲಿರುವ ಶ್ರೀ ತಲಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಹಾಗೂ ಜಾತ್ರೆಯ ಸಂದರ್ಭ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆ.

ಅನೈತಿಕ ಸಂಬಂಧ ಮುಚ್ಚಿಡಲು ಅಮಾಯಕ ತಮ್ಮನನ್ನೇ ಕೊಂದ ಅಣ್ಣಂದಿರು..!

ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಅ. 16 ರ ಮಧ್ಯರಾತ್ರಿ 12 ಗಂಟೆಯಿಂದ 19ರಂದು ಬೆಳಗ್ಗೆ 6 ಗಂಟೆಯವರೆಗೆ ಭಾಗಮಂಡಲ ಠಾಣಾ ಸರಹದ್ದಿನ 20 ಕಿ. ಮೀ. ವ್ಯಾಪ್ತಿಯಲ್ಲಿ (ಭಾಗಮಂಡಲ ಮತ್ತು ಚೇರಂಬಾಣೆ ಸೇರಿದಂತೆ) ಇರುವ ಎಲ್ಲ ರೀತಿಯ ಮದ್ಯದ ಅಂಗಡಿ, ಬಾರ್‌, ಹೊಟೇಲ್‌ ಮತ್ತು ಕ್ಲಬ್‌ಗಳಲ್ಲಿ ಎಲ್ಲ ವಿಧದ ಮದ್ಯ ಮಾರಾಟವನ್ನು ಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಆದೇಶ ಹೊರಡಿಸಿದ್ದಾರೆ.

FB, ವಾಟ್ಸಾಪ್‌ನಲ್ಲಿ ಚಿಕಿತ್ಸೆಗೆ ನೆರವಾಗೋಕೆ ಹೋದ್ರೆ ಮೋಸ ಹೋಗ್ತೀರಾ..! ರೋಗಿಗಳ ಹೆಸರಲ್ಲಿ ವಂಚನೆ ಮಾಫಿಯಾ

click me!