ಅನೈತಿಕ ಸಂಬಂಧಗಳನ್ನು ಬೆಳೆಸಿ ಅವುಗಳು ದುರಂತ ಅಂತ್ಯ ಕಾಣುವ ಘಟನೆಗಳೂ ನಡೆಯುತ್ತಲೇ ಇರುತ್ತವೆ. ಮಡಿಕೇರಿಯಲ್ಲಿ ಕಾಫಿತೋಟದಲ್ಲಿ ಸಿಕ್ಕ ಶವ ಜಾಡು ಹಿಡಿದ ಪೊಲೀಸರಿಗೆ ಇಂತಹದೇ ಒಂದು ಅನೈತಿಕ ಸಂಬಂಧದ ಕುರಿತು ವಿಷಯ ತಿಳಿದಿದೆ. ಅನೈತಿಕ ಸಂಬಂಧ ಹೇಗೆ ಕೊಲೆಯಲ್ಲಿ ಕೊನೆಯಾಯ್ತು ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.
ಮಡಿಕೇರಿ(ಅ.15): ಅನೈತಿಕ ಸಂಬಂಧಗಳನ್ನು ಬೆಳೆಸಿ ಅವುಗಳು ದುರಂತ ಅಂತ್ಯ ಕಾಣುವ ಘಟನೆಗಳೂ ನಡೆಯುತ್ತಲೇ ಇರುತ್ತವೆ. ಮಡಿಕೇರಿಯಲ್ಲಿ ಕಾಫಿತೋಟದಲ್ಲಿ ಸಿಕ್ಕ ಶವ ಜಾಡು ಹಿಡಿದ ಪೊಲೀಸರಿಗೆ ಇಂತಹದೇ ಒಂದು ಅನೈತಿಕ ಸಂಬಂಧದ ಕುರಿತು ವಿಷಯ ತಿಳಿದಿದೆ.
ಇಬ್ಬರು ಅಣ್ಣಂದಿರಿಂದಲೇ ಸೋದರನ ಬರ್ಬರ ಹತ್ಯೆ ನಡೆದಿದೆ. ಕಾಫಿ ತೋಟದಲ್ಲಿ ಸಿಕ್ಕ ಶವದ ಜಾಡು ಹಿಡಿದ ಪೊಲೀಸರಿಗೆ ಆರೋಪಿಗಳು ಮೃತನ ಸಹೋದರರು ಎಂಬುದು ತನಿಖೆ ಸಂದರ್ಭ ಬಯಲಾಗಿದೆ. ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಜಂಬೂರುವಿನಲ್ಲಿ ಘಟನೆ ನಡೆದಿದೆ.
ಅನುಮಾನಾಸ್ಪದ ಸ್ಥಿತಿಯಲ್ಲಿ ಶವ ಪತ್ತೆ:
ಅ.8 ರಂದು ಜಂಬೂರಿನ ಕಾಫಿ ತೋಟದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಬಿಹಾರ ಮೂಲದ ದೀಪಕ್ ಕುಮಾರ್(23) ಕೊಲೆಯಾದ ಯುವಕ. ನಿರಾಶ್ರಿತರಿಗೆಂದು ನಿರ್ಮಾಣವಾಗುತ್ತಿದ ಲೈನ್ ಮನೆ ಕೆಲಸಕ್ಕೆಂದು ಬಿಹಾರದಿಂದ ಕೊಡಗಿಗೆ ಬಂದಿದ್ದ. ಕೊಲೆಯಾದ ದೀಪಕ್ ಮಾತ್ರ ಬಿಹಾರದಿಂದ ಬಂದಿರಲಿಲ್ಲ. ಮೂವರು ಸಹೋದರರು ಬಿಹಾರದಿಂದ ಕೆಲಸಕ್ಕಾಗಿಯೇ ಬಂದಿದ್ದರು.
ತಮ್ಮನನ್ನೇ ಕೊಂದ ಅಣ್ಣಂದಿರು:
ಮೃತ ದೀಪಕ್ ಕುಮಾರ್‌ನ ಅಣ್ಣಂದಿರಿಂದಲೇ ತಮ್ಮನ ಕೊಲೆಯಾಗಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಿಶೋರ್ ಕುಮಾರ್ ( 27), ನೀರಜ್ ಕುಮಾರ್ (24) ಎಂಬವರು ಕಿರಿಯ ಸಹೋದರ ದೀಪಕ್‌ನನ್ನು ಕೊಲೆ ಮಾಡಿದ್ದಾರೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ:
ಮೊದಲ ಅಣ್ಣ ಕಿಶೋರ್ ಕುಮಾರ್ ಪತ್ನಿಯೊಂದಿಗೆ ನೀರಜ್ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದ. ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ವಿಚಾರ ಕೊಲೆಯಾದ ದೀಪಕ್‌ಗೆ ತಿಳಿದುಬಿಟ್ಟಿತ್ತು. ಹಾಗಾಗಿಯೇ ಹಿರಿಯ ಅಣ್ಣ ಕಿಶೋರ್ ಕುಮಾರ್‌ಗೆ ಅನೈತಿಕ ಸಂಬಂಧ ವಿಚಾರ ಹೇಳುತ್ತೇನೆ ಎಂದು ದೀಪಕ್ ಕುಮಾರ್ ಹೇಳಿದ್ದ.
ಅನೈತಿಕ ಸಂಬಂಧ ಮುಚ್ಚಿಡಲು ತಮ್ಮನಿದುರಾಗಿ ಫಿಟ್ಟಿಂಗ್:
ತನ್ನ ಹಾಗೂ ಅತ್ತಿಗೆ ನಡುವಿನ ಸಂಬಂಧವನ್ನು ತಮ್ಮ ದೀಪಕ್ ಎಲ್ಲಿ ಅಣ್ಣನಿಗೆ ಹೇಳಿ ಬಿಡುತ್ತಾನೋ ಎಂಬ ಭಯ ನೀರಜ್ ಕುಮಾರ್‌ನ್ನು ಕಾಡಿತ್ತು. ಇದರಿಂದ ಕೋಪಗೊಂಡು ಅತ್ತಿಗೆ ಮೇಲೆ ತಮ್ಮ ದೀಪಕ್ ಕಣ್ಣು ಹಾಕಿದ್ದಾನೆ ಎಂದು ಅಣ್ಣ ಕಿಶೋರ್‌ಗೆ ಸುಳ್ಳು ಹೇಳಿದ್ದ.
ಮಂಡ್ಯ: ಆತ್ಮಹತ್ಯೆಗೆ ಯತ್ನಿಸಿದ್ದ dysp ವಿರುದ್ಧವೇ ದೂರು ದಾಖಲು
ಕಿರಿಯ ಸಹೋದರ ದೀಪಕ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ತಿಳಿದು ಅಣ್ಣ ಕಿಶೋರ್, ಇನ್ನೋರ್ವ ಸಹೋದರ ನೀರಜ್ ಜೊತೆ ಸೇರಿ ಕೊಲೆಗೆ ಸ್ಕೆಚ್ ಮಾಡಿದ್ದ. ಅನೈತಿಕ ಸಂಬಂಧದ ಸತ್ಯ ಮುಚ್ಚಿಡಲು ಪ್ಲಾನ್ ಮಾಡಿದ ನೀರಜ್ ಅಣ್ಣನ ಜೊತೆ ಸೇರಿ ತಮ್ಮನ ಕೊಲೆ ಮಾಡಿದ್ದಾನೆ.
ಕೊಲೆ ಮಾಡಲು ಸಹೋದರರಿಗೆ ರಾಹುಲ್ (23) ಎಂಬಾತ ಸಹಾಯ ಮಾಡಿದ್ದ. ಆತನನ್ನೂ ಪೊಲೀಸರು ಬಂಧಿಸಿದ್ದಾರೆ.
ಸ್ತನ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದ 25 ವರ್ಷದ ಪಾಪ್ ಸ್ಟಾರ್ ಆತ್ಮಹತ್ಯೆ