
ಕೊಡಗು [ಅ.19]: ಕಾವೇರಿ ತೀರ್ಥೋದ್ಭವಕ್ಕೆ ಶುಭ ಕೋರ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಎಲ್ಲಿದಿಯಪ್ಪಾ ಎಂದು ವೈರಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರ ಹಾಕುತ್ತಿದ್ದು, ಕಾವೇರಿ ತೀರ್ಥೋದ್ಭವಕ್ಕೆ ಬಾರದ ಅವರಿಗೆ ಶುಭ ಕೋರಲೂ ಸಮಯ ಇಲ್ಲವಾಯಿತೇ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಕ್ಟೋಬರ್ 18 ರಂದು ಕೊಡಗಿನಲ್ಲಾದ ತೀರ್ಥೋದ್ವಭವಕ್ಕೆ ಗೈರಾದ ಹಿನ್ನೆಲೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹರನ್ನು ಪ್ರಶ್ನೆ ಮಾಡಿದ್ದಾರೆ.
ಸಿಂಹ ಅವರಯ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ GPPI CPR ಎಕಾನಾಮಿಕ್ ಆಫೇರ್ ಪ್ರೋಗ್ರಾಮ್ ನಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕಿಗೆ ತೆರಳಿದ್ದು, ತಮ್ಮ ಕ್ಷೇತ್ರದ ಕಾರ್ಯಕ್ರಮಕ್ಕೆ ಬಾರದ ಹಿನ್ನೆಲೆ ಅಸಮಾಧಾನ ಹೊರಹಾಕಲಾಗಿದೆ.