ಕೊಡಗಿನ ಅಡುಗೆ ಮನೆಯೊಂದರಲ್ಲಿ ಅಡಗಿತ್ತು ಬೃಹತ್ ಗಾತ್ರದ ನಾಗ

By Web Desk  |  First Published Oct 22, 2019, 3:59 PM IST

ಕೊಡಗು ಜಿಲ್ಲೆಯಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣಿಗಳು ತತ್ತರಿಸಿವೆ. ಮಡಿಕೇರಿಯ ಕ್ಯಾಂಟಿನ್ ಅಡುಗೆ ಮನೆಗೆ ನಾಗರ ಹಾವೊಂದು ನುಗ್ಗಿ ಬೆಚ್ಚಗೆ ಅಡಗಿ ಕುಳಿತಿದ್ದು, ರಕ್ಷಣೆ ಮಾಡಲಾಗಿದೆ.


ಕೊಡಗು [ಅ.22] : ಸದ್ಯ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ಪ್ರಾಣಿ, ಪಕ್ಷಿಗಳು ಕೂಡ ಸಮಸ್ಯೆ ಎದುರಿಸುತ್ತಿವೆ.  ಕೊಡಗಿನ ಕ್ಯಾಂಟಿನ್ ಒಂದರ ಅಡುಗೆ ಮನೆಯಲ್ಲಿ ನುಗ್ಗಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ರಕ್ಷಿಸಲಾಗಿದೆ.  

ಜಿಲ್ಲೆಯ ಮಡಿಕೇರಿ ನಗರದ ಹೊರ ವಲಯದ ಕ್ಲಬ್ ಮಹಿಂದ್ರ ಎದುರಿನ ಕ್ಯಾಂಟೀನ್ ರಾಜೇಶ್ವರಿಯ ಅಡುಗೆ ಕೋಣೆಗೆ ಸೇರಿಕೊಂಡಿದ್ದ ನಾಗರ ಹಾವನ್ನು ರಕ್ಷಣೆ ಮಾಡಲಾಗಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೊಡಗು ಜಿಲ್ಲೆಯಲ್ಲಿ ಸದ್ಯ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನೇರವಾಗಿ ಬಂದು ಹಾವು ಅಡುಗೆ ಮನೆಗೆ ನುಗ್ಗಿ ಬೆಚ್ಚಗೆ ಮಲಗಿತ್ತು.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?...

ಸ್ನೇಕ್ ಪ್ರವೀಣ್ ಶೆಟ್ಟಿ ಎನ್ನುವವರು ಸುರಕ್ಷಿತವಾಗಿ ಹಾವನ್ನು ರಕ್ಷಿಸಿ ಮಡಿಕೇರಿ ಹೊರವಲಯದ ಅರಣ್ಯಕ್ಕೆ ಬಿಟ್ಟಿದ್ದಾರೆ.

click me!