ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್‌ ತರಬೇತಿ

By Web Desk  |  First Published Oct 9, 2019, 11:44 AM IST

ವಿದೇಶಿ ಆಟಗಾರ ಹಾಗೂ ತರಬೇತುದಾರ ಇಯಾನ್‌ ಷೆಲಿ ಅವರು ಫುಟ್ಬಾಲ್‌ನ್ನು ಮಕ್ಕಳೊಂದಿಗೆ ಆಟವಾಡುವ ಮೂಲಕ ಅವರಲ್ಲಿ ಕ್ರೀಡಾಸ್ಫೂರ್ತಿ ತುಂಬಿದರು| ಎಲ್ಲ ವಯೋಮಾನದ ಮಕ್ಕಳಿಗೆ ಫುಟ್ಬಾಲ್‌ ಆಟದ ಟಿಫ್ಸ್‌ಗಳನ್ನು ಹೇಳಿಕೊಟ್ಟರು| ಕ್ರೀಡಾಪಟುಗಳು ಉತ್ತಮವಾದ ದೇಹದಾರ್ಡ್ಯವನ್ನು ಹೊಂದಿ ಕಠಿಣ ಪರಿಶ್ರಮದ ಮೂಲಕ ಆಟದಲ್ಲಿ ಉನ್ನತ ಹಂತವನ್ನು ಸಾಧಿಸಬೇಕು ಎಂದ ಇಯಾನ್‌ ಷೆಲಿ| 


ಸುಂಟಿಕೊಪ್ಪ(ಅ.9): ವಿದೇಶಿ ಆಟಗಾರ ಹಾಗೂ ತರಬೇತುದಾರ ಇಯಾನ್‌ ಷೆಲಿ ಅವರು ಇಲ್ಲಿನ ಗದ್ದೆಹಳ್ಳದ ಆಮೆಟ್ಟಿಯೂತ್‌ ಕ್ಲಬ್‌ ವತಿಯಿಂದ ಮೈದಾನದಲ್ಲಿ ಆಯೋಜಿಸಲಾಗಿದ್ದ ಫುಟ್ಬಾಲ್‌ನ್ನು ಮಕ್ಕಳೊಂದಿಗೆ ಆಟವಾಡುವ ಮೂಲಕ ಅವರಲ್ಲಿ ಕ್ರೀಡಾಸ್ಫೂರ್ತಿ ತುಂಬಿದರು. ಅಲ್ಲದೆ ಎಲ್ಲ ವಯೋಮಾನದ ಮಕ್ಕಳಿಗೆ ಫುಟ್ಬಾಲ್‌ ಆಟದ ಟಿಫ್ಸ್‌ಗಳನ್ನು ಹೇಳಿಕೊಟ್ಟರು.

ಗದ್ದೆಹಳ್ಳದ ಆಮ್ಮೆಟ್ಟಿಯೂತ್‌ ಕ್ಲಬ್‌ ವತಿಯಿಂದ ಇಲ್ಲಿನ ಮೈದಾನದಲ್ಲಿ ನಡೆದ ಸಂದರ್ಭ ಮಾತನಾಡಿದ ಇಯಾನ್‌ ಷೆಲಿ, ಕ್ರೀಡಾಪಟುಗಳು ಉತ್ತಮವಾದ ದೇಹದಾರ್ಡ್ಯವನ್ನು ಹೊಂದಿ ಕಠಿಣ ಪರಿಶ್ರಮದ ಮೂಲಕ ಆಟದಲ್ಲಿ ಉನ್ನತ ಹಂತವನ್ನು ಸಾಧಿಸಬೇಕೆಂದು ಕಿವಿಮಾತು ಹೇಳಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುಡ್ಡೆಹೊಸೂರಿನ ಐಎನ್‌ಎಸ್‌ ಸ್ಪೋರ್ಟ್ಸ್ ಅಕಾಡಮಿ ವತಿಯಿಂದ ಕ್ರೀಡಾಕೂಟ ಪ್ರಾಯೋಜಿಸಲಾಗಿತ್ತು. ಅಕಾಡೆಮಿಯ ಪೊನ್ನಪ್ಪ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಉಪಾಧ್ಯಕ್ಷ ಪಿ.ಕೆ. ಜಗದೀಶ್‌ ರೈ, ಕೊಡಗು ಜಿಲ್ಲಾ ಮಾಜಿ ಕಾರ್ಯದರ್ಶಿ ಬಿ.ಸಿ. ದಿನೇಶ್‌, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವೇಣುಗೋಪಾಲ್‌ ಇದ್ದರು. ಶಾಲಾ ಮಕ್ಕಳು, ಯುವಕರು ಫುಟ್ಬಾಲ್‌ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
 

click me!