ಕೊಡಗಿನ ವಿರಾಜಪೇಟೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿರಾಜಪೇಟೆಯಿಂದ ಬರುತ್ತಿದ್ದ ಬಸ್ ವೃದ್ಧೆ ಮೇಲೆ ಹರಿದಿದೆ.
ಕೊಡಗು(ನ.13): ಸ್ಪೀಡ್ ಲಿಮಿಟ್, ರಸ್ತೆ ನಿಯಮಗಳು ಎಷ್ಟೇ ಬಲಪಡಿಸಿದ್ರೂ ರಸ್ತೆ ಅಪಘಾತಗಳ ಸಂಖ್ಯೆ ಮತ್ರ ಕಡಿಮೆಯಾಗುತ್ತಿಲ್ಲ. ಮಡಿಕೇರಿಯ ವಿರಾಜಪೇಟೆಯಲ್ಲಿ ಸರ್ಕಾರಿ ಬಸ್ ರಸ್ತೆ ದಾಟುತ್ತಿದ್ದ ವೃದ್ಧೆಗೆ ಡಿಕ್ಕಿಯಾಗಿದೆ.
ಕೊಡಗಿನ ವಿರಾಜಪೇಟೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿರಾಜಪೇಟೆಯಿಂದ ಬರುತ್ತಿದ್ದ ಬಸ್ ವೃದ್ಧೆ ಮೇಲೆ ಹರಿದಿದೆ. ರಸ್ತೆ ದಾಟುತ್ತಿದ್ದ ವೃದ್ದೆ ಮೇಲೆ ಬಸ್ ಹರಿದಿದೆ. ವೃದ್ದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿರಾಜಪೇಟೆ ತಾಲೂಕಿನ ಹಾತೂರು ನಿವಾಸಿ ತಂಗಮ್ಮ(76) ಮೃತಪಟ್ಟ ವೃದ್ಧೆ.
ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ರಸ್ತೆ ದಾಟುತ್ತಿದ್ದ ವೃದ್ಧೆಗೆ ಡಿಕ್ಕಿಯಾಗಿದೆ. ರಸ್ತೆ ದಾಟುವ ವೇಳೆ ಬಂದ ಯಮ ಸ್ವರೂಪಿಯಾಗಿ ಬಂದ ಬಸ್ ವೃದ್ಧೆಯ ಸಾವಿಗೆ ಕಾರಣವಾಗಿದೆ.
ಬಸ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.