ಸಹೋದ್ಯೋಗಿಗೆ ಜಾತಿನಿಂದನೆ ಮಾಡಿದ ಇಬ್ಬರು ಯುವತಿಯರು! ದೂರು ಕೊಟ್ಟರೂ ಕ್ರಮ ಇಲ್ಲ!

By Naveen Kodase  |  First Published Dec 7, 2024, 3:48 PM IST

ಕೊಡಗಿನ ಕುಶಾಲನಗರದ ಕಿಯಾ ಶೋ ರೂಮ್‌ನ ಮಹಿಳಾ ಉದ್ಯೋಗಿಗಳಿಬ್ಬರು ತಮ್ಮ ಸಹೋದ್ಯೋಗಿ ಮೇಲೆಯೇ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. 


ಕುಶಾಲನಗರ: ಖಾಸಗಿ ಕಾರು ಶೋ ರೂಮ್ ಸಹೋದ್ಯೋಗಿ ಮೇಲೆಯೇ ಜಾತಿ ನಿಂದನೆ ಮಾಡಿದ್ದೂ ಅಲ್ಲದೇ ಆಕೆಯನ್ನು ಕೆಲಸದಿಂದ ಕಿತ್ತುಹಾಕಿರುವ ಘಟನೆ ಕೊಡುಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ. ಈ ಕುರಿತಂತೆ ಖಾಸಗಿ ಕಾರು ಶೋ ರೂಮ್‌ ಉದ್ಯೋಗಿಗಳ ಮೇಲೆ ಸಂತ್ರಸ್ಥೆ ದೂರು ದಾಖಲಿಸಿ 5 ದಿನಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ಥೆ ದೂರಿದ್ದಾರೆ.

ಹೌದು, ಇಲ್ಲಿನ ಕುಶಾಲನಗರದಲ್ಲಿರುವ ಕಿಯಾ ಕಾರು ಶೋ ರೂಮ್‌ನಲ್ಲಿ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಕಿಯಾ ಕಾರು ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಲೇಖನಾ ಅವರ ಮೇಲೆ ರಿಸೆಪ್ಯನಿಸ್ಟ್ ಮುತ್ತಮ್ಮ ಹಾಗೂ ಸಿಆರ್‌ಇ ಆಗಿರುವ ಹರ್ಷಿತಾ ಸೇರಿ ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಲೇಖನಾ ಕಿಯಾ ಶೋ ರೂಮ್‌ನಲ್ಲಿ ಕೆಲಸಕ್ಕೆ ಸೇರಿದ ಒಂದು ತಿಂಗಳಿನಿಂದಲೇ ಆಕೆಯ ಮೇಲೆ ಈ ಇಬ್ಬರು ನಿರಂತರವಾಗಿ ಜಾತಿ ನಿಂದನೆ ಮಾಡಿದ ಆರೋಪಿಸಲಾಗಿದೆ.

Tap to resize

Latest Videos

ಅನ್‌ಲೋಡ್ ಮಾಡುವಾಗ ಸಿಡಿದ ಲಾರಿ ಜಾಕ್, ಅವಘಡದಲ್ಲಿ ಚಾಲಕ ದುರಂತ ಅಂತ್ಯ!

ಲೇಖನಾ ಎನ್ನುವವರು ಕಳೆದ ಅಕ್ಟೋಬರ್ 21ರಂದು ಕಿಯಾ ಶೋ ರೂಮ್‌ಗೆ ಕೆಲಸಕ್ಕೆ ಸೇರಿದ್ದರು. ಲೇಖನಾ ಅವರ ಜಾತಿ ಗೊತ್ತಾಗುತ್ತಿದ್ದಂತೆಯೇ ಆಕೆಯ ಮೇಲೆ ವಿನಾಕಾರಣ ಕೀಳು ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸಂತ್ರಸ್ಥೆ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಜಾತಿ ಗೊತ್ತಾಗುತ್ತಿದ್ದಂತೆಯೇ ಅಲ್ಲಿ ಕುಳಿತುಕೊಳ್ಳಬೇಡ, ಇಲ್ಲಿ ಕುಳಿತುಕೊಳ್ಳಬೇಡ. ನೀನು ಎಸ್ಸಿ ಜಾತಿಗೆ ಸೇರಿದವಳು ನಮ್ಮ ಸರಿಸಮನಾಗಿ ಕುಳಿತುಕೊಳ್ಳಬೇಡ. ಜತೆಯಲ್ಲಿ ಟೀ ಕುಡಿಯಬೇಡ, ಊಟ ಮಾಡಬೇಡ ಎಂದು ಈ ಇಬ್ಬರು ಕಿರುಕುಳ ನೀಡಿರುವುದಾಗಿ ಲೇಖನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮುತ್ತಮ್ಮ ಹಾಗೂ ಹರ್ಷಿತಾ, ಎಚ್‌ ಆರ್‌ಗೆ ಹೇಳಿ ಲೇಖನಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದೆ. ಹೀಗಾಗಿ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಮುತ್ತಮ್ಮ ಹಾಗೂ ಹರ್ಷಿತಾ 
 

click me!