ಗೃಹ ಜ್ಯೋತಿ: ಹೆಸ್ಕಾಂ ವ್ಯಾಪ್ತಿಯಲ್ಲಿ 28 ಲಕ್ಷ ಕುಟುಂಬಗಳಿಗೆ ಮೊದಲ ತಿಂಗಳು ಶೂನ್ಯ ಬಿಲ್‌..!

By Kannadaprabha News  |  First Published Aug 20, 2023, 9:01 PM IST

ಆರು ಜಿಲ್ಲೆಗಳ ವ್ಯಾಪ್ತಿಯ 31,80,566 ಗ್ರಾಹಕರು ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್‌ಗೆ ಶೂನ್ಯ ಬಿಲ್‌ ವಿತರಿಸಲಾಗುತ್ತಿದೆ. ಈ ವರೆಗೆ ಅಂದರೆ ಆ. 16ರ ವರೆಗೆ ಬಿಲ್‌ ಜನರೇಟ್‌ ಮಾಡಲಾಗಿದೆ. ಅಂದರೆ ಆ. 16ರ ವರೆಗೆ ಒಟ್ಟು 33,84,665 ಗೃಹಬಳಕೆದಾರ ಬಿಲ್‌ ಜನರೇಟ್‌ ಮಾಡಲಾಗಿದೆ. ಇದರಲ್ಲಿ 28,04,540 ಗೃಹಬಳಕೆದಾರರು ಗೃಹಜ್ಯೋತಿ ವ್ಯಾಪ್ತಿಯಲ್ಲಿರುವವರು. ಇವರಿಗೆ ಶೂನ್ಯ ಬಿಲ್‌ ವಿತರಿಸಲಾಗಿದೆ.


ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.20):  ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿ 28 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಶೂನ್ಯ ಬಿಲ್‌ ಬಂದಿವೆ. ಈ 28 ಲಕ್ಷಕ್ಕೂ ಅಧಿಕ ಕುಟುಂಬಗಳು 85 ಕೋಟಿ ವಿದ್ಯುತ್‌ ಬಳಕೆ ಮಾಡಿವೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಸರ್ಕಾರ ಕೂಡ ಈ ವಿಷಯದಲ್ಲಿ 83.48 ಕೋಟಿ ಸಹಾಯಧನವನ್ನೂ ಬಿಡುಗಡೆ ಮಾಡಿದೆ. ಈ ಮೂಲಕ ಗೃಹಜ್ಯೋತಿಯ ಮೊದಲ ತಿಂಗಳ ಕಂತನ್ನು ಹೆಸ್ಕಾಂಗೆ ಪಾವತಿಸಿದಂತಾಗಿದೆ.

Tap to resize

Latest Videos

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಹೆಸ್ಕಾಂ ಒಳಗೊಂಡಿದೆ. ಬರೋಬ್ಬರಿ 35,90,841 ಗೃಹಬಳಕೆ ಗ್ರಾಹಕರು ಇಲ್ಲಿದ್ದಾರೆ. ಈ ಪೈಕಿ ಗೃಹಜ್ಯೋತಿ ಯೋಜನೆಯಡಿ 31,80,566 ಗೃಹಬಳಕೆದಾರರು ನೋಂದಣಿ ಮಾಡಿಸಿದ್ದಾರೆ. ಇನ್ನುಳಿದ 4,10,275 ಗೃಹಬಳಕೆದಾರರು ಮಾತ್ರ ಗೃಹಜ್ಯೋತಿಯಿಂದ ಹೊರಗಿದ್ದಾರೆ.

ಜನರಿಗೆ ಶಾಕ್ ಕೊಟ್ಟ ಗೃಹಜ್ಯೋತಿ ಯೋಜನೆ: ಸಿಕ್ಕಿಲ್ಲ ಉಚಿತ ಬಿಲ್.. ಹಣ ಕಟ್ಟಿ ಎಂದ ಬೆಸ್ಕಾಂ..!

ಮೊದಲ ತಿಂಗಳೆಷ್ಟು?

ಆರು ಜಿಲ್ಲೆಗಳ ವ್ಯಾಪ್ತಿಯ 31,80,566 ಗ್ರಾಹಕರು ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್‌ಗೆ ಶೂನ್ಯ ಬಿಲ್‌ ವಿತರಿಸಲಾಗುತ್ತಿದೆ. ಈ ವರೆಗೆ ಅಂದರೆ ಆ. 16ರ ವರೆಗೆ ಬಿಲ್‌ ಜನರೇಟ್‌ ಮಾಡಲಾಗಿದೆ. ಅಂದರೆ ಆ. 16ರ ವರೆಗೆ ಒಟ್ಟು 33,84,665 ಗೃಹಬಳಕೆದಾರ ಬಿಲ್‌ ಜನರೇಟ್‌ ಮಾಡಲಾಗಿದೆ. ಇದರಲ್ಲಿ 28,04,540 ಗೃಹಬಳಕೆದಾರರು ಗೃಹಜ್ಯೋತಿ ವ್ಯಾಪ್ತಿಯಲ್ಲಿರುವವರು. ಇವರಿಗೆ ಶೂನ್ಯ ಬಿಲ್‌ ವಿತರಿಸಲಾಗಿದೆ.

ಈ 28,04,540 ಗೃಹ ಬಳಕೆದಾರರು .85 ಕೋಟಿ ವರೆಗಿನ ವಿದ್ಯುತ್‌ ಬಳಕೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು 3 ಲಕ್ಷಕ್ಕೂ ಅಧಿಕ ಗೃಹ ಬಳಕೆದಾರರಿಗೆ ಗೃಹಜ್ಯೋತಿ ಬಿಲ್‌ ನೀಡುವುದು ಬಾಕಿಯಿದೆ. ಸದ್ಯ ಇದು ಅಂದಾಜು ಲೆಕ್ಕವಷ್ಟೇ. ಈ ತಿಂಗಳ ಕೊನೆಯಲ್ಲಿ ನಿಖರವಾದ ಅಂಕಿ-ಸಂಖ್ಯೆಗಳು ಗೊತ್ತಾಗಲಿವೆ ಎಂದು ಹೆಸ್ಕಾಂ ಅಧಿಕಾರಿ ವರ್ಗ ತಿಳಿಸುತ್ತದೆ.

ಗೃಹ ಜ್ಯೋತಿ ಯೋಜನೆಯಿಂದ ಫಲಾನುಭವಿಗಳು ವಂಚಿತ

ಸಹಾಯಧನ ಬಿಡುಗಡೆ:

ಇನ್ನು ಸರ್ಕಾರ ಕೂಡ ಆಗಸ್ಟ್‌ ಮೊದಲನೆಯ ವಾರದಲ್ಲಿ .83.48 ಕೋಟಿ ಸಹಾಯಧನವನ್ನು ಈಗಾಗಲೇ ಹೆಸ್ಕಾಂಗೆ ಪಾವತಿಸಿದೆ. ಇದರಿಂದಾಗಿ ಮೊದಲ ತಿಂಗಳು ಗೃಹಜ್ಯೋತಿ ಗ್ರಾಹಕರು ಬಳಸಿದ ವಿದ್ಯುತ್‌ಗೆ ಸರ್ಕಾರದಿಂದ ಕೊಡಬೇಕಾದ ಸಹಾಯಧನವನ್ನು ಆಗಲೇ ಕೊಟ್ಟಂತಾಗಿದೆ. ಇನ್ನು ಸ್ವಲ್ಪ ಅನುದಾನ ಕೊಡುವುದಾಗಬಹುದು. ಆದರೂ ಮೊದಲ ಕಂತನ್ನು ಆಗಲೇ ಬಿಡುಗಡೆ ಮಾಡಿರುವುದು ಹೆಸ್ಕಾಂನಲ್ಲಿ ಖುಷಿಯನ್ನುಂಟು ಮಾಡಿದೆ. ಆದರೂ ಸರಿಯಾದ ಲೆಕ್ಕ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ ಎಂದು ಅಧಿಕಾರಿ ವರ್ಗದ ಅಂಬೋಣ.

ಈಗಲೂ ನೋಂದಣಿ:

ಗೃಹಜ್ಯೋತಿ ಯೋಜನೆಯಡಿ ಕಳೆದ ತಿಂಗಳಿನ ವರೆಗೆ 31,80,566 ಗೃಹಬಳಕೆದಾರರು ನೋಂದಣಿ ಮಾಡಿಸಿದ್ದರು. ಇನ್ನು 4.10 ಲಕ್ಷ ಗೃಹಬಳಕೆದಾರರು ನೋಂದಣಿ ಮಾಡಿಸಬೇಕಿತ್ತು. ಅವರು ಈ ತಿಂಗಳು ನೋಂದಣಿ ಮಾಡಿಸುತ್ತಿದ್ದಾರೆ. ಇದೀಗ ಬಿಲ್‌ ಶೂನ್ಯ ಬರುತ್ತಿರುವುದನ್ನು ನೋಡಿ ಮುಂದಿನ ತಿಂಗಳಿನಿಂದಾದರೂ ತಮಗೂ ಶೂನ್ಯ ಬಿಲ್‌ ಬರಲಿ ಎಂದುಕೊಂಡು ನೋಂದಣಿ ಮಾಡಿಸುತ್ತಿದ್ದಾರೆ.

click me!