ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ: ವ್ಯವಸ್ಥಾಪನ ಸಮಿತಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

By Govindaraj S  |  First Published Aug 20, 2023, 8:38 PM IST

ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾಗಿರುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಬಿಜೆಪಿ ಸರ್ಕಾರದ ನೇಮಿಸಿದ್ದ ದತ್ತಪೀಠ ಆಡಳಿತ ವ್ಯವಸ್ಥಾಪನ ಸಮಿತಿಯನ್ನ ವಜಾ ಮಾಡಬೇಕೆಂದು ಸಯೈದ್ ಹುಸೇನ್ ಶಾ ಖಾದ್ರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.20): ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾಗಿರುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಬಿಜೆಪಿ ಸರ್ಕಾರದ ನೇಮಿಸಿದ್ದ ದತ್ತಪೀಠ ಆಡಳಿತ ವ್ಯವಸ್ಥಾಪನ ಸಮಿತಿಯನ್ನ ವಜಾ ಮಾಡಬೇಕೆಂದು ಸಯೈದ್ ಹುಸೇನ್ ಶಾ ಖಾದ್ರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಹಲವು ವಿರೋಧದ ಮಧ್ಯೆಯೂ ದತ್ತಪೀಠಕ್ಕೆ ವ್ಯವಸ್ಥಾಪನ ಸಮಿತಿಯನ್ನ ರಚನೆ ಮಾಡಿತ್ತು.ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ವ್ಯವಸ್ಥಾಪನ ಸಮಿತಿಯನ್ನು ವಜಾಗೊಳಿಸಬೇಕೆಂದು  ಸೈಯದ್  ಬುಡೇನ್ ಶಾ ಖಾದ್ರಿ ಟ್ರಸ್ಟ್ ನ ಸದಸ್ಯರು ಒತ್ತಾಯಿಸಿದ್ದಾರೆ.

Tap to resize

Latest Videos

undefined

ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ: ಸಮಿತಿಯಲ್ಲಿ‌ 8 ಜನ ಸದಸ್ಯರಿದ್ದು, ಆದ್ರೆ  ಎರಡು ಸಮುದಾಯದ ಇಬ್ಬರು ಮಹಿಳೆಯರು ಸೇರಿ ಸಮಿತಿ ರಚನೆಯಾಗಬೇಕಿತ್ತು. ಆದರೆ, ಒಂದೇ ಸಮುದಾಯದ ಏಳು ಜನ ಹಾಗೂ ಬಿಜೆಪಿ ಕಟ್ಟಾ ಕಾರ್ಯಕರ್ತ ಬಾಷಾ ಎಂಬುವರನ್ನ ಸೇರಿಸಿಕೊಂಡು ಎಂಟು ಜನರ ಸಮಿತಿ ರಚಿಸಿದೆ. ಯಾವುದೇ ಮಾನದಂಡದಿಂದ ನೋಡಿದರೂ ಈ ಸಮಿತಿ ಕ್ರಮಬದ್ಧವಾಗಿಲ್ಲ.

ಸಚಿವ ಎಂ.ಸಿ.ಸುಧಾಕರ್‌ ಅಭಿವೃದ್ದಿಯ ಹರಿಕಾರ: ಸಂಸದ ಮುನಿಸ್ವಾಮಿ

ದತ್ತಜಯಂತಿ ವೇಳೆ ಹೊರಗಡೆ ಪೂಜೆ ಮಾಡಲು ಎರಡು ದಿನದ ಮಟ್ಟಿಗೆ ಅರ್ಚಕರ ನೇಮಕಾತಿಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಆದರೆ, ನ್ಯಾಯಾಲಯದ ಯಾವುದೇ ಅನುಮತಿ ಇಲ್ಲದಿದ್ದರೂ ಇಂದಿಗೂ ಅರ್ಚಕರಿಂದ ಪೂಜೆ ಮುಂದುವರೆಸಿದ್ದಾರೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದೆ ಎಂದು ಸರ್ಕಾರಕ್ಕೆ ಟ್ರಸ್ಟ್ ನ ಸದಸ್ಯರು  ಮನವಿ ಮಾಡಿದ್ದಾರೆ.

ಉರೂಸ್ ಆಚರಣೆ ಕ್ರಮ ಬದ್ದವಾಗಿ ನಡೆದಿಲ್ಲ: ವ್ಯವಸ್ಥಾಪಕನ ಸಮಿತಿ ದರ್ಗಾದಲ್ಲಿ ಕಳೆದ ವರ್ಷ ನಡೆದ ಉರೂಸ್ ಸಂದರ್ಭ ದರ್ಗಾದ ಆವರಣದಲ್ಲಿರುವ ಗೋರಿಗಳ ಮೇಲೆ ಹಸಿರು ಹೊದಿಕೆ ಹಾಕಿಲ್ಲ ,ಸೂಫಿ ಪದ್ಧತಿಯ ಆಚರಣೆಯಂತೆ ಉರೂಸ್ ಆಚರಣೆ ಮಾಡಿಲ್ಲ ಎಂದು ಟ್ರಸ್ಟ್ ನ ಸದಸ್ಯರು ಆರೋಪಿಸಿದ್ದಾರೆ.  ಅಲ್ಲದೇ ಸಜ್ಜಾದ್ ನಶಿನ್ ಮತ್ತು ಶಾಖಾದ್ರಿ ಅವರಿಗೆ ಯಾವುದೇ ವಿಧಿ ವಿಧಾನಗಳನ್ನು ಅನುಸರಿಸಲು ಅವಕಾಶ ನೀಡಿಲ್ಲ. 

ಟೊಮೆಟೋ ಆಯ್ತು, ಈಗ ದಾಳಿಂಬೆ ಕಾವಲಿಗೆ ಬಂದೂಕು ಹಿಡಿದ ರೈತರು

ಈ ಸಮಿತಿ ಒಂದು ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಮತ್ತೊಂದು ಸಮುದಾಯ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಮಾನ ಪ್ರಾತಿನಿಧ್ಯ ಇಲ್ಲದ ವ್ಯವಸ್ಥಾಪನ ಸಮಿತಿಯನ್ನು ರದ್ದು ಮಾಡಿ, ಎರಡೂ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಇರುವ ನೂತನ ಸಮಿತಿಯನ್ನು ರಚಿಸಿಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಸಲೀಮ್ ಮಲಿಕ್ ಮುಹಮ್ಮದ್ ಶರೀಫ್ ಶಾ ಖಾದ್ರಿ, ಅಹ್ಮದ್ ಆಲಿ ಶಾ ಖಾದ್ರಿ ಉಪಸ್ಥಿತರಿದ್ದರು.

click me!