ಯುವಜನೋತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ

Published : Sep 28, 2019, 10:21 AM IST
ಯುವಜನೋತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ

ಸಾರಾಂಶ

ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಡೊಳ್ಳುಕುಣಿತ| ಯುವಜನೋತ್ಸವ ನಾಡಿನ ಭವ್ಯ ಸಂಸ್ಕೃತಿ ಬಿಂಬಿಸುವ ಹಬ್ಬ-ಡಾ. ನಾರಾಯಣಸ್ವಾಮಿ| ನಾಡಿನ ಸಂಸ್ಕೃತಿಯ ಕಲೆಗಳನ್ನು ಬಿಂಬಿಸುವ ಈ ಸಾಂಸ್ಕೃತಿಕ ಹಬ್ಬ ನಮ್ಮ ನಾಡಿನ ತುಂಬ ಪಸರಿಸಲಿ|  ಇಂದಿನ ಆಧುನಿಕ ಜಗತ್ತಿನಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮದಿಂದ ಮಾಡುವ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತ| ಸಾಂಸ್ಕೃತಿಕ ಕಲೆಗಳನ್ನು ಜೀವಂತಗೊಳಿಸಲು ಇಂತಹ ಅಭೂತಪೂರ್ವ ಕಾರ್ಯಕ್ರಮಗಳು ಅವಶ್ಯ| 

ಹಿರೇಕೆರೂರು:(ಸೆ.28) ಪಟ್ಟಣದ ಸಿಇಎಸ್‌ ಸಂಸ್ಥೆ ಆವರಣದಲ್ಲಿ ಬಿ.ಆರ್‌. ತಂಬಾಕದ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ 2019ನೇ ಸಾಲಿನ ವಲಯ ಮಟ್ಟದ ಅಂತರ ಕಾಲೇಜುಗಳ ಯುವಜನೋತ್ಸವದ 2ನೇ ದಿನದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದವು.

ನಾಡಿನ ಪಾರಂಪರಿಕ ಕಲೆಗಳಾದ ನಾಟಕ, ಬಯಲಾಟ, ಭಜನೆ, ದೊಡ್ಡಾಟ, ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ವೀರಗಾಸೆ, ಡೊಳ್ಳುಕುಣಿತ, ಬುಡಕಟ್ಟು ಲಂಬಾಣಿ ನೃತ್ಯಗಳು, ಜನಪದ ನೃತ್ಯಗಳು ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರನ್ನು ರೋಮಾಂಚನಗೊಳಿಸಿದವು. ಸಿಇಎಸ್‌ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರ ಬುಡಕಟ್ಟು ಲಂಬಾಣಿ ನೃತ್ಯ ಹಾಗೂ ಹಾನಗಲ್‌ನ ಕುಮಾರೇಶ್ವರ ಕಾಲೇಜಿನ ವಿದ್ಯಾರ್ಥಿಗಳ ವೀರಗಾಸೆ ನೃತ್ಯ ಹೆಚ್ಚು ಮೆಚ್ಚುಗೆಗೆ ಪಾತ್ರವಾದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಾರಾಯಣಸ್ವಾಮಿ ಸಿ ಅವರು, ನಾಡಿನ ಸಂಸ್ಕೃತಿಯ ಕಲೆಗಳನ್ನು ಬಿಂಬಿಸುವ ಈ ಸಾಂಸ್ಕೃತಿಕ ಹಬ್ಬ ನಮ್ಮ ನಾಡಿನ ತುಂಬ ಪಸರಿಸಲಿ, ಇಂದಿನ ಆಧುನಿಕ ಜಗತ್ತಿನಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮದಿಂದ ಮಾಡುವ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತವಾಗಿದೆ. ಆದ್ದರಿಂದ ಸಾಂಸ್ಕೃತಿಕ ಕಲೆಗಳನ್ನು ಜೀವಂತಗೊಳಿಸಲು ಇಂತಹ ಅಭೂತಪೂರ್ವ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಹೇಳಿದ್ದಾರೆ. 

ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವವು ನಾಡಿನ ಭವ್ಯ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಈ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇಂದಿನ ಯುವ ಪೀಳಿಗೆಯ ಮುಖಾಂತರ ಮುಂದಿನ ತಲೆಮಾರಿನ ವರೆಗೂ ಕೊಂಡೊಯ್ಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಹಾಗೂ ಬಿ.ಆರ್‌. ತಂಬಾಕದ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ 40 ಕಾಲೇಜುಗಳು ಪಾಲ್ಗೊಂಡು ಸಾಹಿತ್ಯ ಹಾಗೂ ರಂಗಭೂಮಿ ಕಲೆಗಳನ್ನು ಉಳಿಸುವಲ್ಲಿ ತಮ್ಮ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಕಾರ್ಯದರ್ಶಿ ಎಸ್‌.ಎಸ್‌. ಪಾಟೀಲ, ಪ್ರಾಚಾರ್ಯ ಡಾ. ಎಸ್‌.ಬಿ. ಚನ್ನಗೌಡರ, ಲಿಂಗರಾಜ ಚಪ್ಪರದಳ್ಳಿ, ಮಹೇಂದ್ರ ಬಡಳ್ಳಿ, ಎಂ.ಎಸ್‌. ಕೋರಿಗೌಡರ, ಎಸ್‌. ವೀರಭದ್ರಯ್ಯ, ಏಕೇಶ ಬಣಕಾರ, ಕೆ.ಎಂ. ಮರಡಿಬಣಕಾರ, ನಾಗರಾಜ ಎಚ್‌.ಪಿ., ಪ್ರದೀಪ ಕೊರಡೇಕರ, ಪಿ.ಎಚ್‌. ಗೊಪ್ಪಕಳ್ಳಿ, ಪ್ರವೀಣ ಕರವತ್ತೇರ ಇದ್ದರು.
 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!