Yuva Dasara 2026: ಇಂದು ಯುವ ದಸರಾಕ್ಕೆ ನಟ ಪ್ರಭುದೇವರಿಂದ ಉದ್ಘಾಟನೆ, ಇಂದಿನ ಕಾರ್ಯಕ್ರಮ, ಸಮಯ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ

Published : Oct 13, 2026, 08:20 AM ISTUpdated : Oct 13, 2026, 08:49 AM IST
Yuva Dasara 2026 inauguration by Actor Prabhu Deva today

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಇಂದಿನಿಂದ 'ಯುವ ದಸರಾ' ಕಾರ್ಯಕ್ರಮಗಳು ನಡೆಯಲಿದ್ದು, ಬಹುಭಾಷಾ ನಟ ಪ್ರಭುದೇವ ಇಂದು ಯುವ ದಸರಾ ಉದ್ಘಾಟಿಸಲಿದ್ದಾರೆ. ಇಂದು ಸಂಜೆ ಆರು ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮಗಳ ವಿವರ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ.

ಮೈಸೂರು (ಅ.13): ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಇಂದಿನಿಂದ 'ಯುವ ದಸರಾ' ಕಾರ್ಯಕ್ರಮಗಳು ನಡೆಯಲಿದ್ದು, ಬಹುಭಾಷಾ ನಟ ಪ್ರಭುದೇವ ಇಂದು ಯುವ ದಸರಾ ಉದ್ಘಾಟಿಸಲಿದ್ದಾರೆ.

ಮೈಸೂರಿನ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಜ್ವಾಲಾಮುಖಿ ದೇವಸ್ಥಾನದ ಬಳಿ ಇಂದು ಸಂಜೆ 6 ಗಂಟೆಯಿಂದ ಯುವ ದಸರಾ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಲಾವಿದರು, ಗಣ್ಯರಿಗೆ ಪ್ರತ್ಯೇಕ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಐದು ದಿನಗಳ ಕಾಲ ನಡೆಯಲಿರುವ ಯುವ ದಸರಾ ಕಾರ್ಯಕ್ರಮಕ್ಕೆ ಸಮಾರು 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮ ನಡೆಯಲಿರುವ ಸ್ಥಳದ ಸುತ್ತಮುತ್ತ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ತಿಂಡಿಪ್ರಿಯರಿಗೆ ಭರ್ಜರಿ ವ್ಯವಸ್ಥೆ. ಕಾರ್ಯಕ್ರಮ ನೋಡುತ್ತಲೇ ಬಯಸಿದ್ದೆಲ್ಲ ಸವಿಯಲು ಯುವಕರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ದಸರಾ ವೇದಿಕೆ ಸ್ಥಳದಲ್ಲೇ ಫುಡ್ ಸ್ಟಾಲ್ ತೆರೆಯಲಾಗಿದೆ. ಎಲ್ಲ ಬಗೆಯ ತಿಂಡಿಗಳು ಸಿಗಲಿದೆ.

ಯುವ ದಸರಾ 2026ಕ್ಕೆ 25 ಬಸ್ ವ್ಯವಸ್ಥೆ

ಯುವ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಆಗಮಿಸಲಿರುವ ಹಿನ್ನೆಲೆ ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ವಿಶೇಷವಾಗಿ ಯುವಕ-ಯುವತಿಯರಿಗೆ 15 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಗಾಯಕರು, ನಟ-ನಟಿಯರು ಆಗಮಿಸುತ್ತಿದ್ದು, ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ಸಾಧ್ಯತೆಯಿದೆ. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಬರಲು, ತೆರಳಲು ಸುಮಾರು 25ಕ್ಕೂ ಹೆಚ್ಚು ಸಾರಿಗೆ ಬಸ್ ವ್ಯವಸ್ಥೆಯನ್ನ ಮಾಡಲಾಗಿದೆ. ಕಾರ್ಯಕ್ರಮ ಅದ್ದೂರಿಯಾಗಿರುವುದರಿಂದ ಯುವ ದಸರಾಗೆ ಸುಮಾರು 13ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ. ಸುರಕ್ಷತಾ ದೃಷ್ಟಿಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಯುವ ದಸರಾ ಉಪ ಸಮಿತಿ ವಿಶೇಷಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

ಯುವಾ ದಸರಾಗೆ ಆಹ್ವಾನ ಬಂದ ತಕ್ಷಣ ಒಪ್ಪಿಕೊಂಡುಬಿಟ್ಟೆ!

ಈ ಬಾರಿಯ ಯುವ ದಸರಾ ಕಾರ್ಯಕ್ರಮವನ್ನು ಬಹುಭಾಷಾ ನಟ ಪ್ರಭುದೇವ ಉದ್ಘಾಟಿಸಲಿದ್ದು, ಅವರಿಗೆ ಆಹ್ವಾನ ನೀಡಿದ್ದರ ಬಗ್ಗೆ ದಸರಾ ಹಬ್ಬದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಅನುಭವ ಹಂಚಿಕೊಂಡಿದ್ದಾರೆ.

ನಾನು ಇಲ್ಲಿಯವರೆಗೆ ಕಣ್ಣಾರೆ ದಸರಾ ನೋಡೇ ಇಲ್ಲ. ಐದಾರು ವರ್ಷಗಳಿಂದ ದಸರಾ ತುಂಬಾ ಮಿಸ್ ಮಾಡಿಕೊಳ್ತಿದ್ದೆ. ಆದರೆ ಈ ಬಾರಿ ಯುವ ದಸರಾ ಉದ್ಘಾಟನೆಗೆ ನನಗೆ ಆಹ್ವಾನ ಬಂತು. ಆಹ್ವಾನ ಬಂದ ತಕ್ಷಣ ಒಪ್ಪಿಕೊಂಡುಬಿಟ್ಟೆ. ನನಗೆ ಬಹಳ ಸಂತೋಷ ಆಗ್ತಿದೆ. ದಸರಾದಲ್ಲೂ ಇಷ್ಟೊಂದು ಕಾರ್ಯಕ್ರಮ ಇರುತ್ತೆ ಅಂತಾ ಗೊತ್ತೇ ಇರಲಿಲ್ಲ.

ನಮ್ಮ ತಾಯಿ ಊರು ದೂರ, ನಮ್ಮ ತಂದೆ ಊರು ಮೂಗೂರು. ತಂದೆ-ತಾಯಿ ಊರಿಂದಲೂ ದೂರ ಇದ್ದಿದ್ರಿಂದ ಚಿಕ್ಕಂದಿನಲ್ಲೇ ನಾವು ಮೈಸೂರು ಎಷ್ಟು ದೂರ ಇದೆ ಅಂದ್ಕೊಳ್ತಿದ್ದೆ. ನಾನು ಚಿಕ್ಕವಯಸ್ಸಿನಲ್ಲಿ ಏಪ್ರಿಲ್ ತಿಂಗಳಲ್ಲಿ ರಜೆ ಇದ್ದಾಗ ಬರ್ತಿದ್ದೆ. ಆದ್ರೆ ಅಕ್ಟೋಬರ್ ನಲ್ಲಿ ದಸರಾ ನಡೆಯುತ್ತಿದ್ದರಿಂದ ದಸರಾ ನೋಡುವ ಅವಕಾಶವೇ ಸಿಗ್ತಿರಲಿಲ್ಲ. ಈ ಜಂಬೂ ಸವಾರಿ ಅಂದ್ರೆ ಆನೆ ಮೇಲೆ ರಾಜರು ಕೂರುತ್ತಾರಲ್ಲಾ ಅದಲ್ವಾ? ಹೀಗೆಲ್ಲ ಕೇಳ್ತಿದ್ದೆ. ಆದರೆ ನನ್ನ ತಾಯಿ ಕಣ್ಣಾರೆ ದಸರಾ ನೋಡಿ ಎಂಜಾಯ್ ಮಾಡಿದ್ದಾರೆ. ನಾನೀಗ ಯುವದಸರಾ ಉದ್ಘಾಟನೆ ಮಾಡ್ತಿರೋದು ಕೇಳಿ ಅಪ್ಪ-ಅಮ್ಮ ತುಂಬಾ ಖುಷಿ ಪಟ್ಟಿದ್ದಾರೆ ಎಂದು ಮೈಸೂರಿನಲ್ಲಿ ಪ್ರಭುದೇವ ಸಂತಸ ವ್ಯಕ್ತಪಡಿಸಿದರು.

ಆರಮನೆ ಆವರಣದಲ್ಲಿ ರಂಗೋಲಿ ಸ್ಪರ್ಧೆ

ದಸರಾ ಮೂರನೇ ದಿನವಾದ ಇಂದು ಅರಮನೆ ಆವರಣದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ರಂಗೋಲಿ ಬಿಡಿಸಲು ಮೂಲಕ ಶಾಸಕ ಟಿ.ಎಸ್. ಶ್ರೀವತ್ಸ ಅವರು ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದರಿಂದ ಅರಮನೆ ಆವರಣ ತುಂಬಾ ಬಣ್ಣ ಬಣ್ಣ ರಂಗೋಲಿ ಬಿಡಿಸುವ ಮೂಲಕ ಮೈಸೂರಿನ ನಾರಿಯರು ಖುಷಿಪಟ್ಟರು.

ಮೈಸೂರು ದಸರಾ 2026: ಇಂದಿನ ಕಾರ್ಯಕ್ರಮಗಳೇನು?

ಬೆಳಗ್ಗೆ 8ಕ್ಕೆ ರಂಗೋಲಿ ಸ್ಪರ್ಧೆ ಆಯೋಜನೆ

ಮೈಸೂರು ಅರಮನೆ ಆವರಣದಲ್ಲಿ ಕಾರ್ಯಕ್ರಮ.

ಬೆಳಗ್ಗೆ 10 ಗಂಟೆಗೆ ದಸರಾ ಕವಿಗೋಷ್ಠಿ ಉದ್ಘಾಟನೆ.

ಬಿ.ಎಂ. ಶ್ರೀ ಸಭಾಂಗಣ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮ.

ಬೆಳಗ್ಗೆ 11 ಗಂಟೆಗೆ ಮಹಿಳಾ ದಸರಾ ಉದ್ಘಾಟನೆ.

ಜೆ.ಕೆ. ಗ್ರೌಂಡ್‌ನಲ್ಲಿ ಯತೀಂದ್ರ ಸಿದ್ದರಾಮಯ್ಯ ಉದ್ಘಾಟನೆ

ಬೆಳಗ್ಗೆ 11 ಗಂಟೆಗೆ ಹಾಸ್ಯ ಚುಟುಕು ಕವಿಗೋಷ್ಠಿ.

ಸಂಜೆ 6 ಗಂಟೆಗೆ ಯುವದಸರ ಉದ್ಘಾಟನೆ.

ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಸಮೀಪ ಉತ್ತನಹಳ್ಳಿ.

ಪ್ರಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಉದ್ಘಾಟನೆ.

ರಾತ್ರಿ 7 ಗಂಟೆಗೆ ಸ್ವರಯಾನ ಕಾರ್ಯಕ್ರಮ.

ಮೈಸೂರು ಅರಮನೆ ವೇದಿಕೆ

PREV
Read more Articles on
click me!

Recommended Stories

ಅಂಬಾರಿ ಹೊರಲು ಹಿಂದೇಟು ಹಾಕಿದ ಮಹೇಂದ್ರ? ಆನೆಯ ಮೂಲಕ ಚಾಮುಂಡೇಶ್ವರಿ ನೀಡುತ್ತಿರುವ ಸೂಚನೆಯೇನು?
ದೆಹಲಿ ಚಲೋ ವೇಳೆ ಸಿಎಂ ಡಿಕೆ ಶಿವಕುಮಾರ್‌ ಕಾಲರ್‌ ಹಿಡಿದು ಹಿಂದೆ ತಳ್ಳಿದ ರಾಹುಲ್‌ ಗಾಂಧಿ, ವಿಡಿಯೋ ವೈರಲ್‌