Chikkamagaluru: ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿದ ವೈಎಸ್‌ವಿ ದತ್ತಾ!

By Suvarna News  |  First Published Mar 26, 2022, 12:06 AM IST

ಮಕ್ಕಳ ಪಾಲಿಗೆ ಗಣಿತ ಕಬ್ಬಿಣದ ಕಡಲೆ ಕಾಯಿ, ಗಣಿತದ ವಿಷಯವನ್ನು ಮಕ್ಕಳಿಗೆ  ಅರ್ಥ ಮಾಡಿಸುವುದರಲ್ಲಿ ದೇವೇಗೌಡರ ಮಾನಸಪುತ್ರ ವೈಎಸ್‌ವಿ ದತ್ತಾ ಎತ್ತಿದ ಕೈ.


ವರದಿ: ಆಲ್ದೂರು‌ ಕಿರಣ್, ಏಷ್ಯಾನೆಟ್ ಸುವರ್ಣ ‌ನ್ಯೂಸ್, ಚಿಕ್ಕಮಗಳೂರು ‌

ಚಿಕ್ಕಮಗಳೂರು (ಮಾ.26): ಮಕ್ಕಳ ಪಾಲಿಗೆ ಗಣಿತ ಕಬ್ಬಿಣದ ಕಡಲೆ ಕಾಯಿ, ಗಣಿತದ ವಿಷಯವನ್ನು ಮಕ್ಕಳಿಗೆ  ಅರ್ಥ ಮಾಡಿಸುವುದರಲ್ಲಿ ದೇವೇಗೌಡರ ಮಾನಸಪುತ್ರ ವೈಎಸ್‌ವಿ ದತ್ತಾ ಎತ್ತಿದ ಕೈ. ರಾಜಕೀಯ, ಮಕ್ಕಳಿಗೆ ಪಾಠ, ಕುಮಾರವ್ಯಾಸನ‌ ಪ್ರವಚನದ ಮೂಲಕ ಸಾಕಷ್ಟು ಹೆಸರುವಾಸಿಯಾಗಿರುವ ವೈಎಸ್‌ವಿ ದತ್ತಾ (YSV Datta) ಇದೀಗ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ ವ್ಯಾದ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಸೈ ಎನ್ನಸಿಕೊಂಡಿದ್ದಾರೆ.

Tap to resize

Latest Videos

ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿದ ದೇವೇಗೌಡರ ಮಾನಸಪುತ್ರ: ಚಿಕ್ಕಮಗಳೂರು ಜಿಲ್ಲೆಯ‌ ಕಡೂರು  ತಾಲ್ಲೂಕಿನ ಬಿದಿರೆ ಗ್ರಾಮದಲ್ಲಿ ಪ್ರತಿವರ್ಷ ಕರಾಳಮ್ಮ‌ದೇವಿ‌ ಜಾತ್ರಾ ‌ಮಹೋತ್ಸವ ನಡೆಯುತ್ತೆ. ಈ ವರ್ಷವೂ ಕೂಡ‌ ಗ್ರಾಮದಲ್ಲಿ ವಿಜ್ರಂಭಣೆಯಾಗಿ‌ ಜಾತ್ರಾ ಮಹೋತ್ಸವ ನಡೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ಕಡೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ  ದೇವೇಗೌಡರ ಮಾನಸಪುತ್ರ ವೈ ಎಸ್ ದತ್ತಾ ಪಾಲ್ಗೊಂಡಿದ್ದರು.ಈ ಹಿಂದೆ‌ ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಗಣಿತವನ್ನು ಪಾಠ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. 

ಜೊತೆಗೆ ಸ್ವಗ್ರಾಮ ಯುಗಟಿಯಲ್ಲಿ ಪ್ರತಿವರ್ಷವೂ ನಡೆಯುವ ಕುಮಾರವ್ಯಾಸನ ಜಯಂತಿ‌ ಸಮಯದಲ್ಲಿ ಪ್ರವಚನವನ್ನು ಮಾಡುವುದರಲ್ಲೂ ಪ್ರಸಿದ್ದಿ.ಇದೀಗ  ಬಿದಿರೆ ಗ್ರಾಮದಲ್ಲಿ ನಡೆದ ಕರಾಳಮ್ಮ‌ದೇವಿ ಜಾತ್ರೆಯಲ್ಲಿ ಹಳ್ಳಿ ವ್ಯಾದಕ್ಕೆ ಹೆಜ್ಜೆ ಹಾಕುವ ಮೂಲಕ ಕುಣಿತಕ್ಕೂ ಸೈ ಎನಿಸಿಕೊಂಡರು ವೈಎಸ್‌ವಿ ದತ್ತಾ. ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ನೃತ್ಯವಾದ ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಳ್ಳಿಗರೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ  ವೈಎಸ್‌ವಿ ದತ್ತಾ ಸೈ ಎನಿಸಿಕೊಂಡರು.

Hijab Row ಶಿಕ್ಷಕನಾಗಿ, ಜನಪ್ರತಿನಿಧಿಯಾಗಿ ಹಿಜಾಬ್ ವಿವಾದದ ಬಗ್ಗೆ ದತ್ತಾ ನೇರ ಮಾತು

ಮಣೇವು ಕುಣಿತ ಆರಂಭ ಸಂಪನ್ನದ ವೇಳೆಯಲ್ಲಿ ದೇವರಿಗೆ ನಮಸ್ಕರಿಸಿದ ದತ್ತಾ: ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಜಾತ್ರೆ ಮಹೋತ್ಸವಗಳು ನಡೆಯುವ ಸಮಯದಲ್ಲಿ ಗ್ರಾಮದಲ್ಲಿ ದೇವರ ಮೂರ್ತಿಗಳ ಮೆರವಣಿಗೆ ನಡೆಯುತ್ತದೆ. ಆ ವೇಳೆಯಲ್ಲಿ ದೇವರ ಮೂರ್ತಿಗಳ ಅಡ್ಡೆ ಮುಂದೆ ಮಣೇವು ಕುಣಿತವನ್ನು ಕುಣಿಯುವ ಪದ್ಧತಿ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಅದೇ ರೀತಿ ಬಿದಿರೆ ಗ್ರಾಮದಲ್ಲಿ ಕರಾಳಮ್ಮ ದೇವಿಯ ಅಡ್ಡೆಯ ಮುಂದೆ  ವೈಎಸ್‌ವಿ  ದತ್ತಾ ಮಣೇವು ಕುಣಿತಕ್ಕೆ ಹೆಜ್ಜೆ ಹಾಕಿದ್ದಾರೆ. ಮಣೇವು  ಕುಣಿತ ಆರಂಭ ಸಂಪನ್ನದ ಮುನ್ನ‌ ದೇವರ ಅಡ್ಡೆಗೆ ದತ್ತಾ ನಮ್ಮಸ್ಕರಿಸಿದರು. ಪ್ರತಿವರ್ಷ ನಡೆಯುವಂತಹ ಜಾತ್ರಾ ಮಹೋತ್ಸವದಲ್ಲಿ ವೈಎಸ್‌ವಿ ದತ್ತಾ ಪಾಲ್ಗೊಂಡು ಮಣೇವು ಕುಣಿತಕ್ಕೆ ಹೆಜ್ಜೆ ಹಾಕುವುದು ರೂಢಿಯಲ್ಲಿದೆ.

ದೇವೇಗೌಡ ಕ್ಲಿಯರ್ ಕಟ್, ಹೆಚ್‌ಡಿಕೆ ಬಗ್ಗೆ ಕೇಳಬೇಡಿ ಎಂದ ವೈಎಸ್‌ವಿ ದತ್ತ: ಜೆಡಿಎಸ್‌ ಪಕ್ಷದ ನಿಲುವಿನ ಬಗ್ಗೆ ಸ್ವಪಕ್ಷದವರಿಂದಲೇ ಆಕ್ಷೇಪ ವ್ಯಕ್ತವಾಗಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ ಮತ್ತು ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ ಎಂಬ ಅಭಿಪ್ರಾಯ ಇದೆ ಎಂದು ಪಕ್ಷದ ಹಿರಿಯ ಮುಖಂಡ ವೈ.ಎಸ್‌.ವಿ.ದತ್ತ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾತ್ಯತೀತ ವಿಚಾರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕ್ಲಿಯರ್‌ ಕಟ್‌ ಇದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ಕೇಳಬೇಡಿ ಎಂದು ದತ್ತ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ನಿಲುವು ಶಿಥಿಲವಾಗುತ್ತಿದೆ ಎಂಬ ಅಭಿಪ್ರಾಯವು ಅಲ್ಪಸಂಖ್ಯಾತ, ಹಿಂದುಳಿದವರಲ್ಲಿದೆ. ಬಿಜೆಪಿ ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಅವರ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ಬದಲಾವಣೆಯಾಗಬಾರದು.  ನನಗೆ ಈಗ 69 ವರ್ಷ ಆಗಿದೆ. ದೇವೇಗೌಡರ ಜತೆ ಹೆಚ್ಚು ಸಂಪರ್ಕದಲ್ಲಿದ್ದೇನೆ. ಅವರು ಏನು ಎಂಬುದು ಸ್ಪಷ್ಟವಾಗಿ ಗೊತ್ತಿದೆ. 

ಕುಮಾರಸ್ವಾಮಿ ನಡೆಗೆ ದತ್ತಾ ಅಸಮಾಧಾನ, ಜೆಡಿಎಸ್‌ಗೆ ಗುಡ್‌ ಬೈ ಹೇಳ್ತಾರಾ ದೇವೇಗೌಡ್ರ ಮಾನಸ ಪುತ್ರ

ಆದರೆ, ಸೈದ್ಧಾಂತಿಕ ನಿಲುವು ಬೇಕು. ಅದು ಕಾಲಕಾಲಕ್ಕೆ ಬದಲಾಗಬಾರದು. ಇದನ್ನು ಪಕ್ಷದ ಒಳಗೂ, ಹೊರಗೂ ಹೇಳಿದ್ದೇನೆ. ಪಕ್ಷದಲ್ಲಿ ನಿರಂತರತೆ, ಸ್ಪಷ್ಟವಾದ ನಿಲುವು ಇರಬೇಕು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಎರಡನ್ನೂ ಸಮಾನ ದೂರದಲ್ಲಿಟ್ಟು, ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕು. ಜಾತ್ಯತೀತ, ಸಾಮಾಜಿಕ ನ್ಯಾಯ ನಿಲುವು ಇರಬೇಕು ಎಂಬ ಕಾರಣಕ್ಕೆ ಪಕ್ಷದಲ್ಲಿ ಹಲವು ವರ್ಷಗಳಿಂದ ಇದ್ದೇನೆ. ಆದರೆ, ಈ ನಿಲುವು ಪಕ್ಷದಲ್ಲಿ ಶಿಥಿಲವಾಗುತ್ತಿದೆ ಎಂಬ ಗೊಂದಲ ಮತದಾರರಲ್ಲಿ ಉಂಟಾಗಿದೆ ಎಂದರು.

click me!