ಹದಿಹರೆಯದ ವಯಸ್ಸಿನಲ್ಲಿ: ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಿ

By Kannadaprabha News  |  First Published Oct 5, 2023, 8:26 AM IST

ವಿದ್ಯಾರ್ಥಿನಿಯರು ಹದಿಹರೆಯದ ವಯಸ್ಸಿನಲ್ಲಿ ತಮ್ಮ ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡು ಮುನ್ನಡೆದಾಗ ಯಾವ ಅಪಾಯಗಳು ಸಹ ತಲೆದೂರುವುದಿಲ್ಲ ಎಂದು ವೈದ್ಯೆ ಡಾ. ಸಿಂಚನಾ ಹೇಳಿದರು.


 ರಾವಂದೂರು :  ವಿದ್ಯಾರ್ಥಿನಿಯರು ಹದಿಹರೆಯದ ವಯಸ್ಸಿನಲ್ಲಿ ತಮ್ಮ ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡು ಮುನ್ನಡೆದಾಗ ಯಾವ ಅಪಾಯಗಳು ಸಹ ತಲೆದೂರುವುದಿಲ್ಲ ಎಂದು ವೈದ್ಯೆ ಡಾ. ಸಿಂಚನಾ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿವು ಸೈನಿಕ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಹದಿಹರೆಯದ ಯುವತಿಯರ ಚಿತ್ತಸ್ವಾಸ್ತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

ಗ್ರಾಮೀಣ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಮನಸ್ಸಿನ ಸ್ಥಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಿದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ, ಹೆಣ್ಣು ಮಕ್ಕಳು ಈ ಹಂತದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು, ಇತ್ತೀಚಿನ ದಿನಗಳಲ್ಲಿ ಯುವತಿಯರು ಮಾಹಿತಿ ತಂತ್ರಜ್ಞಾನಗಳು ಹೆಚ್ಚಾಗಿದ್ದು, ಅವುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಆದರ್ಶ ಪ್ರಜೆಗಳಾಗಲು ಸಾಧ್ಯ. ಮೊಬೈಲ್ ಬಳಕೆ ಮಾಡುವಾಗ ಸರಿಯಾದ ರೀತಿಯಲ್ಲಿ ಬಳಸುವುದು ಹಾಗೆಯೇ ತಮ್ಮ ಜೀವನದಲ್ಲಿ ಮುಂದಿನ ಜೀವನದ ಬಗ್ಗೆ ಹೆಚ್ಚಿನ ಉತ್ತಮ ಗುರಿಯನ್ನು ಹೊಂದಿದ್ದು, ಆ ಗುರಿಯನ್ನು ಸಾಧಿಸುವ ಹಂಬಲದ ಕಡೆ ನಿಮ್ಮ ಮನಸ್ಸನ್ನು ತೊಡಗಿಸಿಕೊಂಡಾಗ ನಿಮ್ಮ ಮನಸ್ಸು ಹಾದಿ ತಪ್ಪುವ ಯಾವುದೇ ಅವಕಾಶಗಳಿರುವುದಿಲ್ಲ. ಹಾಗಾಗಿ ಎಲ್ಲರೂ ಈ ವಯಸ್ಸಿನಲ್ಲಿ ದುಡುಕಿ ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ಬಿಟ್ಟು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿ ನಿಮ್ಮ ಕಾಲೇಜು ಹಾಗೂ ತಾಲೂಕಿಗೆ ಮಾದರಿ ಪ್ರಜೆಗಳಾಗಿ ಎಂದು ತಿಳಿಸಿದರು.

ಪ್ರಾಂಶುಪಾಲ ಕೆ.ಎನ್. ಶಿವಶಂಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಹಾಗೂ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಸ್ಥಿತಿ ಸ್ಥಿಮಿತವಿಲ್ಲದೇ ತಪ್ಪು ನಿರ್ಧಾರದಿಂದ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ತಮ್ಮ ಮನಸ್ಸನ್ನು ಹರಿಬಿಡದೆ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು ಅಲ್ಲದೇ ಯಾವುದೇ ಕೆಟ್ಟ ಚಟಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.

ಶಿವು ಸೈನಿಕ ಅಕಾಡೆಮಿಯ ಸಂಸ್ಥಾಪಕ ಶಿವು, ಉಪನ್ಯಾಸಕರಾದ ರವಿ, ಲಕ್ಷ್ಮಿಕಾಂತ್, ಗಣೇಶ್, ಗಂಗಾಧರ್, ಪ್ರಮೋದ್, ಶಶಿಕಿರಣ್, ನಂದಿನಿ, ಶ್ವೇತಾ, ಪತ್ರಕರ್ತ ಮುಕುಂದ ಇದ್ದರು.

ಮಾನಸಿಕ ಸ್ಥಿತಿ 

ನಕಾರಾತ್ಮಕ ಚಿಂತನೆಯಿಂದ ತಾವು ನರಳುವುದಲ್ಲದೆ, ಮತ್ತೊಬ್ಬರನ್ನೂ ನರಳಿಸುವವರಿದ್ದಾರೆ. ನಕಾರಾತ್ಮಕ ಚಿಂತನೆಯ ಸಂಗಾತಿ ದೊರೆತರಂತೂ ಜೀವನ ಹೈರಾಣವಾಗುತ್ತದೆ. ಆದರೂ ಕೆಲವರು ತಮ್ಮಲ್ಲಿರುವ ನಕಾರಾತ್ಮಕ ಚಿಂತನೆಯನ್ನು ಸಾಕಷ್ಟು ಕಾಳಜಿ ವಹಿಸಿ, ಪರಿಶ್ರಮದಿಂದ ದೂರ ಮಾಡಿಕೊಳ್ಳುತ್ತಾರೆ. ಪೂರ್ತಿ ದೂರಮಾಡಲು ಸಾಧ್ಯವಾಗದಿದ್ದರೂ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ನಕಾರಾತ್ಮಕ ಯೋಚನೆ ಮಾಡುವ ಮಂದಿ ಕೆಲವು ವಿಚಾರಗಳಲ್ಲಿ ಒಂದೇ ರೀತಿಯಲ್ಲಿ ವರ್ತಿಸುತ್ತಾರೆ. ತಮ್ಮ ಚಿಂತನೆಗಳ ಮೂಲಕವೇ ಅವರು ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಮೊದಲೇ ಹೇಳಿದಂತೆ ತಮ್ಮ ಸಮೀಪದವರು ಸುಖವಾಗಿರಲೂ ಅವರು ಬಿಡುವುದಿಲ್ಲ. ನೀವೂ ಸಹ ಕೆಲವು ನಕಾರಾತ್ಮಕ ಚಿಂತನೆ ಹೊಂದಿದ್ದರೆ ಅವುಗಳನ್ನು ಬಿಟ್ಟುಬಿಡಿ. ಜೀವನದಲ್ಲಿ ಕೆಲವು ಪದ್ಧತಿ, ವರ್ತನೆ, ಧೋರಣೆಗಳನ್ನು ಎಂದಿಗೂ ರೂಢಿಸಿಕೊಳ್ಳಬಾರದು. ಅವುಗಳಿಂದ ಜೀವನ ಸರ್ವನಾಶವಾಗುವುದು ನಿಶ್ಚಿತ. ಹೀಗಾಗಿ, ಅಂತಹ ಗುಣಗಳು ನಿಮ್ಮಲ್ಲೂ ಇದ್ದರೆ ಅವುಗಳನ್ನು ದೂರಮಾಡಿಕೊಳ್ಳಿ. 

•    ಆರೋಗ್ಯವನ್ನು ನಿರ್ಲಕ್ಷಿಸುವ (Avoid Health) ಪರಿಪಾಠ
ನಿಮ್ಮ ಆರೋಗ್ಯವನ್ನು ನೀವೇ ನಿರ್ಲಕ್ಷಿಸಿದರೆ ಬೇರೆ ಯಾರು ಗಮನ ನೀಡಲು ಸಾಧ್ಯ? ಆರೋಗ್ಯ ಅತ್ಯಂತ ಮೌಲ್ಯಯುತವಾದ (Valuable) ಆಸ್ತಿ (Asset). ಅದನ್ನು ಅಲಕ್ಷ್ಯ ಮಾಡಿದರೆ ಜೀವನ (Life) ಸುಖಮಯವಾಗಿರುವುದಿಲ್ಲ. ನಿಮ್ಮ ಬಗ್ಗೆ ಮೊದಲು ನೀವು ಕಾಳಜಿ (Care) ವಹಿಸಿ. 

ಮಲಕ್ಕೊಂಡು ಎಷ್ಟ್‌ ಹೊತ್ತಾದ್ರೂ ನಿದ್ದೆ ಬರಲ್ವಾ, ಈ ಟ್ರಿಕ್ ಯೂಸ್ ಮಾಡಿ

•    ಕೆಟ್ಟ ಜನರ ಸಹವಾಸವಿದೆಯೇ?
ಎಂದಿಗೂ ಕೆಟ್ಟ ಜನರ (Bad People) ಸಹವಾಸದಲ್ಲಿರಬೇಡಿ. ವಿಷಕಾರಿ ಜನರು ನಿಮ್ಮನ್ನು ನೋವಿಗೆ ದೂಡುತ್ತಾರೆ. ಭಾವನಾತ್ಮಕವಾಗಿ, ಮಾನಸಿಕವಾಗಿ, ಹಣಕಾಸಿನ ದೃಷ್ಟಿಯಿಂದ ನಿಮ್ಮನ್ನು ಸಮಸ್ಯೆಗೆ (Problems) ದೂಡುತ್ತಲೇ ಇರುತ್ತಾರೆ. ಅಂಥವರ ಸಹವಾಸದಿಂದ ದೂರವಿರುವುದು ಶ್ರೇಯಸ್ಕರ. ಯಾರು ನಿಮ್ಮಲ್ಲಿ ಸ್ಫೂರ್ತಿ (Inspire) ತುಂಬುತ್ತಾರೋ, ಯಾರು ಧನಾತ್ಮಕ ಚಿಂತನೆಗಳಿಂದ ನಿಮ್ಮನ್ನು ಮೇಲಕ್ಕೆ ಎತ್ತುತ್ತಾರೋ, ನಿಮಗಾಗಿ ಯಾರು ನಿಜವಾದ ಕಾಳಜಿ, ಪ್ರೀತಿ (Love) ಹೊಂದಿರುತ್ತಾರೋ ಅವರ ಸಹವಾಸ ಮಾಡಿ.

•    ಕಾಲಹರಣ (Procrastination) ಮಾಡುತ್ತೀರಾ?
ಸುಮ್ಮನೆ ಕಾಲಹರಣ ಮಾಡುವುದೂ ಒಂದು ವಿಷಕಾರಿ ವರ್ತನೆ. ಕೆಲಸವನ್ನು ಮುಂದೂಡುವ ಪ್ರವೃತ್ತಿ ಪಲಾಯನವಾದವನ್ನು ಸೂಚಿಸುತ್ತದೆ. ಇದು ನಿಮ್ಮನ್ನು ಕ್ರಿಯಾಶೀಲತೆಯಿಂದ (Creativity) ದೂರವಿರಿಸುತ್ತದೆ. ಖುಷಿಯನ್ನು (Happiness) ಕಿತ್ತುಕೊಳ್ಳುತ್ತದೆ. ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಈ ವರ್ತನೆ ನಿಮ್ಮ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬೇಡಿ. ಧೈರ್ಯವಾಗಿ, ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ. 

•    ಪೀಪಲ್‌ ಪ್ಲೀಸರ್‌ (People Pleasar) ಆಗಿದ್ದೀರಾ?
ಜನರನ್ನು ಖುಷಿಯಾಗಿರಿಸುವ ಏಕೈಕ ಉದ್ದೇಶ ನಿಮಗಿದ್ದರೆ ಅದನ್ನು ಈಗಲೇ ದೂರಮಾಡಿ. ಈ ಗುಣ ನಿಮ್ಮನ್ನು ಖಂಡಿತವಾಗಿ ನಾಶಗೊಳಿಸುತ್ತದೆ. ಜೀವನದಲ್ಲಿ ಏಕಕಾಲದಲ್ಲಿ ಎಲ್ಲರನ್ನೂ ಸಂತುಷ್ಟಗೊಳಿಸಲು ಸಾಧ್ಯವಿಲ್ಲ. ಈ ಗುಣ ನಿಮ್ಮತನವನ್ನು ಮರೆಸಿಬಿಡುತ್ತದೆ. ನಿಮ್ಮತನವನ್ನು (Yourself) ಅಳವಡಿಸಿಕೊಂಡು ಮುನ್ನಡೆಯಿರಿ. 

Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

•    ನಿಮ್ಮ ಬಗ್ಗೆಯೇ ಕಠೋರತೆ (Hard on Yourself)
ಜೀವನದಲ್ಲಿ ಏರಿಳಿತಗಳು (Up and Downs) ಸಹಜ. ಸಂಘರ್ಷಗಳು, ಹೋರಾಟಗಳು ಎಲ್ಲ ಕಾಲಕ್ಕೂ ಇರುವಂಥವು. ಅಲ್ಲಿ ನಿಮ್ಮ ತಪ್ಪುಗಳೂ ಇರಬಹುದು. ಆದರೆ, ಅವುಗಳನ್ನೇ ನೆನಪಿಸಿಕೊಂಡು ತಪ್ಪನ್ನು ಹಳಿಯುತ್ತ ಕೂರುವುದು, ನಿಮ್ಮ ಬಗ್ಗೆಯೇ ಕಠೋರತೆ ತಾಳುವುದು ಒಳ್ಳೆಯದಲ್ಲ. ತಪ್ಪನ್ನು (Mistakes) ಸರಿಪಡಿಸಿಕೊಂಡು ನಿಮ್ಮನ್ನೂ ಕ್ಷಮಿಸಿಕೊಂಡು ಮುಂದೆ ಸಾಗಬೇಕು.

click me!