ಇತಿಹಾಸ ಬೋಧನೆಯು ಈಗ ಸವಾಲಿನ ಕೆಲಸ : ಡಾ. ಮಹದೇವಸ್ವಾಮಿ

By Kannadaprabha News  |  First Published Oct 5, 2023, 8:09 AM IST

ಇತಿಹಾಸ ಬೋಧನೆಯು ಈಗ ಸವಾಲಿನ ಕೆಲಸವಾಗಿದ್ದು, ಕತ್ತಿಯ ಅಲಗಿನ ಮೇಲೆ ನಡೆ ಉಪನ್ಯಾಸಕನದ್ದಾಗಿದೆ, ತುಸು ಎಚ್ಚರ ತಪ್ಪಿದರೂ ವಿದ್ಯಾಥಿ೯ಯ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂದು ಜೆಎಸ್ ಎಸ್ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಹದೇವಸ್ವಾಮಿ ಹೇಳಿದರು.


  ಮೈಸೂರು :  ಇತಿಹಾಸ ಬೋಧನೆಯು ಈಗ ಸವಾಲಿನ ಕೆಲಸವಾಗಿದ್ದು, ಕತ್ತಿಯ ಅಲಗಿನ ಮೇಲೆ ನಡೆ ಉಪನ್ಯಾಸಕನದ್ದಾಗಿದೆ, ತುಸು ಎಚ್ಚರ ತಪ್ಪಿದರೂ ವಿದ್ಯಾಥಿ೯ಯ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂದು ಜೆಎಸ್ ಎಸ್ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಹದೇವಸ್ವಾಮಿ ಹೇಳಿದರು.

ಮಹಾರಾಜ ಸಕಾ೯ರಿ ಪದವಿ ಪೂವ೯ ಕಾಲೇಜಿನಲ್ಲಿ ನಡೆದ ಮೈಸೂರು ಜಿಲ್ಲಾ ಇತಿಹಾಸ ಉಪನ್ಯಾಸಕರ ಕಾಯಾ೯ಗಾರದಲ್ಲಿ ಅವರು ಮಾತನಾಡಿದರು. ಇತಿಹಾಸದ ಪ್ರತಿ ಘಟನೆಗಳು ಮತ್ತು ವ್ಯಕ್ತಿಯ ಬಗ್ಗೆ ಪಾಠ ಹೇಳುವಾಗ ಕಾಲಘಟ್ಟಕ್ಕೆ ಹೋಲಿಸಿ ಹೊಂದಿಸಿ ಬೋಧಿಸ ಬೇಕಾಗುತ್ತದೆ. ಉಪನ್ಯಾಸಕನಾದವನು ಇತಿಹಾಸದ ಒಳಸುಳಿಗಳನ್ನು ಚೆನ್ನಾಗಿ ಅಥ೯ ಮಾಡಿಕೊಂಡು ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರದಂತೆ ಹೇಳಬೇಕೆಂದರು.

Tap to resize

Latest Videos

ಪ್ರಾಚೀನ, ಮಧ್ಯಕಾಲೀನ, ಆಧುನಿಕ ಕಾಲದ ಹಲವು ಘಟನೆಗಳನ್ನು ಇವತ್ತಿನ ಕಾಲಘಟ್ಟಕ್ಕೆ ಒರೆಹಚ್ಚುವ ಬಗೆ ಹೇಗೆಂದು ತಿಳಿಸಿಕೊಟ್ಟರು.

ಡಿಡಿಪಿಯು ಮರಿಸ್ವಾಮಿ ಕಾಯಾ೯ಗಾರ ಉದ್ಘಾಟಿಸಿ ಶುಭ ಕೋರಿದರು. ಪ್ರಾಂಶುಪಾಲ ಉದಯಶಂಕರ್, ಶಿವಮಲ್ಲು, ಶಂಕರನಾರಾಯಣ, ಇತಿಹಾಸ ವೇದಿಕೆ ಕಾಯಾ೯ಧ್ಯಕ್ಷ ಎ.ಎಲ್. ಉಮೇಶ್, ಅಧ್ಯಕ್ಷ ಎಚ್.ಬಿ. ವಾಸು ಇದ್ದರು. ಮಧ್ಯಾಹ್ನದ ಎರಡನೇ ಅಧಿವೇಶನವನ್ನು ಅಂತರಸಂತೆ ಪದವಿ ಪೂವ೯ ಕಾಲೇಜಿನ ಉಪನ್ಯಾಸಕ ಎಸ್. ಗಣೇಶ್ ನಡೆಸಿಕೊಟ್ಟರು.

ಶಿವಪ್ರಕಾಶ್‌ ಮಾತನಾಡಿದರು. ಮಹದೇವಯ್ಯ ಸ್ವಾಗತಿಸಿದರು. ಉಪನ್ಯಾಸಕಿ ಅನು ವಂದಿಸಿದರು, ಉಪನ್ಯಾಸಕರಾದ ಪೂಣ೯ಚಂದ್ರ, ಡಾ. ಉಮೇಶ್, ಡಾ. ರಂಗನಾಥ್, ಪಿ. ಮಹೇಶ್ ಇದ್ದರು.

ಕಾವೇರಿ ವಿವಾದದ ಇತಿಹಾಸ

ಬೆಂಗಳೂರು (ಸೆ.26): ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ನದಿ ನೀರಿಗಾಗಿ ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಹಾದಿಬೀದಿ ಜಗಳಗಳನ್ನೂ ಮಾಡಿಕೊಂಡಿದೆ. ಎರಡೂ ರಾಜ್ಯಗಳು ಬೆಂಕಿಯ ಕೆನ್ನಾಲಗೆಗೆ ಬಿದ್ದಿವೆ. ಪ್ರತಿಭಟನೆ ಹೆಸರಲ್ಲಿ ನಡೆದಿರುವ ಹಿಂಸಾಚಾರಗಳು ಲೆಕ್ಕಕ್ಕಿಲ್ಲ. ಇದನ್ನುಕಂಡು ಕಂಡು ಸುಪ್ರೀಂ ಕೋರ್ಟ್‌, ಕಾವೇರಿ ನದಿ ನೀರು ಪ್ರಾಧಿಕಾರ ರಚನೆ ಮಾಡಿದರೂ, ಅದರಿಂದ ಲಾಭವಾದಂತೆ ಕಾಣುತ್ತಿಲ್ಲ. ಪ್ರಾಧಿಕಾರ ರಚನೆ ಆದ ಬಳಿಕ ಇನ್ನು ಕಾವೇರಿ ಗಲಾಟೆ ಇರೋದಿಲ್ಲ ಅಂದುಕೊಂಡವರಿಗೆ, ಕಾವೇರಿ ಗಲಾಟೆ ಎನ್ನುವುದು ಮುಗಿಯದ ಯುದ್ಧ ಎನ್ನುವುದು ಈಗ ಅರ್ಥವಾಗಿದೆ. ಇದರ ಹಿನ್ನಲೆಯಲ್ಲಿ ಕಾವೇರಿಯ ಬಗ್ಗೆ ಕನ್ನಡದ ಪ್ರಸಿದ್ಧ ಲೇಖಕ ಹಾಗೂ ಪರಿಸರವಾದಿ ಪೂರ್ಣಚಂದ್ರ ತೇಜಸ್ವಿ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ.  ಪೂರ್ಣಚಂದ್ರ ತೇಜಸ್ವಿ ಅವರು ನಿಧನರಾಗಿ 16 ವರ್ಷಗಳಾಗಿವೆ. ಹಾಗಿದ್ದರೂ ಕಾವೇರಿ ವಿಚಾರದ ಬಗ್ಗೆ ಅವರು ಆಡಿರುವ ಮಾತುಗಳು ಇಂದಿಗೂ ಪ್ರಸ್ತುತ ಎನಿಸಿವೆ. 

ಕಾವೇರಿ ಯಾರದ್ದು? ಕರ್ನಾಟಕದ್ದೂ ತಮಿಳುನಾಡಿನದ್ದೂ? ತೇಜಸ್ವಿ ಹೇಳಿದ ಮಾತುಗಳು

'ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳು ಇರುತ್ತವೆ. ಅಲ್ಲಿನ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯ ಮೇಲಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ'

ಹೋರಾಟಕ್ಕೆ ಯಾವ ರಾಜಕೀಯ ಪಕ್ಷಗಳು ಉತ್ತಮ? ತೇಜಸ್ವಿ ಮಾತುಗಳು

'ಪ್ರಾದೇಶಿಕ ಪಕ್ಷ ನಮ್ಮ ರಾಜಕೀಯ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಬರೇ ಕಾವೇರಿ ಒಂದೇ ಕಾರಣ ಅಲ್ಲ. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳು ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕುಸಿದು ಸಣ್ಣ ಸಣ್ಣ ರಾಷ್ಟ್ರಗಳಾಗಿ ಇಲ್ಲವೇ ಒಕ್ಕೂಟಗಳಾಗಿ ರೂಪುಗೊಳ್ಳುತ್ತಿವೆ. ಈಗಿನ ರೀತಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಾಕಲು ಹಿಂದುಳಿದ ದೇಶಗಳಿಗೆ ಸಾಧ್ಯವೇ ಇಲ್ಲ'

click me!