Chikkamagaluru: ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲಿ ಯುವಕರ ಮೋಜು ಮಸ್ತಿ

By Govindaraj S  |  First Published Apr 11, 2022, 1:42 PM IST

ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಪ್ರಾಣಿಗಳ ಆವಾಸ ಸ್ಥಾನ, ಅತ್ಯಮೂಲ್ಯವಾದಂತಹ ಸಸ್ಯಸಂಪತ್ತು, ಪ್ರಾಣಿಸಂಕುಲವನ್ನು ಹೊಂದಿರುವಂತಹ ಅಭಯಾರಣ್ಯ. ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಿಷೇಧ.


ವರದಿ: ಆಲ್ದೂರು ಕಿರಣ್, ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಏ.11): ಭದ್ರಾ ಹುಲಿ ಸಂರಕ್ಷಿತ ಪ್ರದೇಶ (Bhadra Wildlife Sanctuary) ಪ್ರಾಣಿಗಳ ಆವಾಸ ಸ್ಥಾನ, ಅತ್ಯಮೂಲ್ಯವಾದಂತಹ ಸಸ್ಯಸಂಪತ್ತು, ಪ್ರಾಣಿಸಂಕುಲವನ್ನು ಹೊಂದಿರುವಂತಹ ಅಭಯಾರಣ್ಯ. ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಿಷೇಧ. ಅನುಮತಿ ಪಡೆಯದೇ ಪ್ರವೇಶವೂ ಕೂಡ ಅಭಯಾರಣ್ಯದಲ್ಲಿ ನಿರ್ಬಂಧ. ಆದರೆ ಇತ್ತೀಚೆಗೆ ಭದ್ರಾ ಅಭಯಾರಣ್ಯದಲ್ಲಿ ಅರಣ್ಯೇತರ ಚಟುವಟಿಕೆಗಳು ಎಗ್ಗಿಲ್ಲದೆ ಸಾಗುತ್ತಿದೆ. ಜೆಸಿಬಿ ಮೂಲಕ ಕಾಡಾನೆಗೆ (Elephant) ಕಿರುಕುಳ ಕೊಟ್ಟ ಪ್ರಕರಣ ಮಾಸುವ ಮುನ್ನವೇ ಅಭಯಾರಣ್ಯದಲ್ಲಿ ಯುವಕರು ಮೋಜು ಮಸ್ತಿ ಮಾಡುವ ವಿಡಿಯೋ ಇದೀಗ ವೈರಲ್ (Viral) ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Tap to resize

Latest Videos

ಜೀಪ್‌ಗಳಲ್ಲಿ ಮೋಜು-ಮಸ್ತಿ ಮಾಡಿದ ಯುವಕರು: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿಸಂಕುಲಗಳು ಸೇರಿದಂತೆ ಅಪಾರವಾದಂತಹ ಸಸ್ಯ ಸಂಪತ್ತು ಹೊಂದಿರುವ ಅಭಯಾರಣ್ಯ. ಅಭಯಾರಣ್ಯದಲ್ಲಿ  ಒಳಗೆ ಪ್ರವೇಶ ಮಾಡಲು ಅನುಮತಿ ಕಡ್ಡಾಯ. ಜೊತೆಗೆ ಅರಣ್ಯ ತರ ಚಟುವಟಿಕೆಗಳು ಇಲ್ಲಿ ನಿಷೇಧವಿದ್ದು, ಅರಣ್ಯ ಇಲಾಖೆಯ ವಾಹನಗಳನ್ನು ಹೊರತುಪಡಿಸಿ ಅಭಯಾರಣ್ಯದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಇದರ ನಡುವೆ ಅಭಯಾರಣ್ಯದಲ್ಲಿ ಮೇಲಿಂದ ಮೇಲೆ ಕಾನೂನು ಉಲ್ಲಂಘನೆಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. 

Chikkamagaluru: ಕಾಫಿನಾಡಲ್ಲಿ ಅರಳಿನಿಂತ ಅಪರೂಪದ ಆಲ್ಮಂಡ ಕ್ಯಾಥರಿಟಿಕಾ ಹೂವು

ಇತ್ತೀಚೆಗಷ್ಟೇ ಅಭಯಾರಣ್ಯದಲ್ಲಿ ಕಾರ್ಮಿಕರ ಕೈಯಲ್ಲಿ ಮಾಡಿಸುವ ಕೆಲಸವನ್ನು ಜೆಸಿಬಿ ಯಂತ್ರಗಳ ಮೂಲಕ ಮಾಡಿಸಿ ನಿಮಯ ಉಲ್ಲಂಘನೆ ಮಾಡಲಾಗಿತ್ತು. ಅಲ್ಲದೆ‌ ಜೆಸಿಬಿ ಯಂತ್ರದ ಚಾಲಕ ಅಭಯಾರಣ್ಯದಲ್ಲಿದ್ದ  ಕಾಡಾನೆಗೆ ಕಿರುಕುಳ ಕೊಟ್ಟು ಪ್ರಕರಣ ಇನ್ನೂ ಜೀವಂತವಾಗಿದೆ. ಇದರ ನಡುವೆ ಇದೀಗ ಕೆಲ ಯುವಕರು ಖಾಸಗಿ ವಾಹನಗಳಲ್ಲಿ ಅಭಯಾರಣ್ಯದಲ್ಲಿ ಮೋಜುಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ಹೆಬ್ಬೆ, ಮುತ್ತೋಡಿ ವಲಯದಲ್ಲಿ ಕೆಲ ಯುವಕರು ತಮ್ಮ ಖಾಸಗಿ ಜೀಪಿಗಳಲ್ಲಿ ಕಾಡಿನ ಮದ್ಯೆ ಕೋರ್ ಝೋನ್ ಪ್ರದೇಶದಲ್ಲಿ ಬೇಕಾಬಿಟ್ಟಿ ವಾಹನದಲ್ಲಿ ಓಡಾಟ ನಡೆಸಿ ಪ್ರಾಣಿಗಳಿಗೆ ತೊಂದರೆ ಕೊಟ್ಟಿದ್ದಾರೆ.

ಅಭಯಾರಣ್ಯ ಹಳ್ಳದ ಜೀಪ್ ರ್ಯಾಲಿ: ತಡಬೇ ಹಳ್ಳದಲ್ಲಿ ನೀರಿನ ಮದ್ಯೆ ಜೀಪ್ ರಾಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ.  ಹುಲಿ ಸಂರಕ್ಷಿತ ಪ್ರದೇಶಕ್ಕೆ ಜನರಿಗೆ ನಿರ್ಬಂಧ ಇದ್ದರೂ ಈ ಯುವಕರು ಹೇಗೆ ಪ್ರವೇಶ ಮಾಡಿದ್ದಾರೆ ಎನ್ನುವ ಪ್ರಶ್ನೆ ಇದೀಗ ಉದ್ಭವವಾಗಿದೆ. ಅಭಯಾರಣ್ಯ ವ್ಯಾಪ್ತಿಯ ಬಫರ್ ಝೋನ್ ಪ್ರದೇಶದಲ್ಲಿ ಯುವಕರು  ಕೂಗಾಟ ಕಿರುಚಾಟ ನಡೆಸಿ ವಾಹನಗಳನ್ನು  ಬೇಕಾಬಿಟ್ಟಿಯಾಗಿ ಓಡಿಸಿರುವುದು ಚರ್ಚೆಗೆ  ಕಾರಣವಾಗಿದೆ

ಸೂಕ್ತ ಕ್ರಮಕ್ಕೆ ಒತ್ತಾಯ: ಅಕ್ರಮವಾಗಿ ಸಾರ್ವಜನಿಕರು ಇಲ್ಲಿ ಪ್ರವೇಶಿಸಿದರೆ ಕೇಸ್ ದಾಖಲಿಸುವ ಅಧಿಕಾರಿಗಳು ಇವರನ್ನು  ಹೇಗೆ ಒಳಗೆ ಬಿಟ್ಟಿದ್ದಾರೆ  ಎಂದು ಪರಿಸರವಾದಿ ವಿರೇಶ್ ಪ್ರಶ್ನೆ ಮಾಡಿದ್ದಾರೆ. ಯುವಕರು ಅಕ್ರಮವಾಗಿ ಅರಣ್ಯದ ಒಳಗೆ ಪ್ರವೇಶ ಮಾಡಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲೆ‌ ಅನುಮಾನ ಬರುವಂತೆ ಮಾಡಿದೆ. ಇತ್ತೀಚೆಗೆ ಜೆಸಿಬಿ ವಾಹನದಲ್ಲಿ ಆನೆ ಮತ್ತು ಮರಿಗಳನ್ನು ಬೆದರಿಸಿದ ವಿಡಿಯೋ ವೈರಲ್ ಆಗಿತ್ತು. ಮತ್ತೆ ಈಗ ಯುವಕರು ಖಾಸಗಿ  ವಾಹನದಲ್ಲಿ ಮೋಜು ಮಸ್ತಿ ಮಾಡುವ ವಿಡಿಯೋ ವೈರಲ್ ಆಗಿದ್ದರೂ ಯುವಕರ ಮೇಲೆ ಅಧಿಕಾರಿಗಳು ಈವರೆಗೂ ಕೇಸು  ದಾಖಲು ಮಾಡಿಲ್ಲ. 

Chikkamagaluru: ಶೋಕಿಲಾಲ ಅಧ್ಯಕ್ಷ: ಖಾಸಗಿ ವಾಹನಕ್ಕೆ ಸರ್ಕಾರಿ ನಾಮಫಲಕ

ಅಲ್ಲದೆ  ಜೀಪ್ ಮೇಲೆ ಕೂತು ಯುವಕರು ಧೂಮಪಾನ ಮದ್ಯಪಾನ ಮಾಡಿ, ತಡಬೇ ಹಳ್ಳದಲ್ಲಿ ಜೀಪ್ ರ್ಯಾಲಿ, ಮಾಡಿದ್ದಾರೆ. ಹಳ್ಳದಲ್ಲಿ ವಾಹನ ಚಲಿಸಿ , ಹಿಪ್ಪಲ, ಮಾಡ್ಲ ಭಾಗದ ಕೋರ್ ಝೋನ್ ಪ್ರದೇಶದಲ್ಲಿ  ಸುತ್ತಾಟ ನಡೆಸಿದ್ದಾರೆ. ಈ ಸಂಬಂಧ ನಿರ್ಲಕ್ಷ ವಹಿಸಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.ಆ ಯುವಕರು ಯಾರು ಎನ್ನುವುದುವರೆಗೂ ಪತ್ತೆಯಾಗಿಲ್ಲ. ಬೆಂಗಳೂರು ಮೂಲದ ರಾಜಕಾರಣಿ ಮಕ್ಕಳು ಎನ್ನುವುದು ವದಂತಿ ಹಬ್ಬಿದೆ. ಈ ಬಗ್ಗೆ ಇಲಾಖೆ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಟ್ಟಾರೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಅರಣ್ಯೇತರ ಚಟುವಟಿಕೆ ಬಗ್ಗೆ ಇಲಾಖೆ ತನಿಖೆ ನಡೆಸುವ ಅವಶ್ಯಕತೆ ಇದೆ.

click me!