ಬೆಳಗಾವಿ: ಸೂರ್ಯಗ್ರಹಣದಂದು ಬಾಡೂಟ ಸೇವಿಸಿ ಮೌಢ್ಯಕ್ಕೆ ಸಡ್ಡು ಹೊಡೆದರು..!

Kannadaprabha News   | Asianet News
Published : Jun 22, 2020, 10:14 AM ISTUpdated : Jun 22, 2020, 10:17 AM IST
ಬೆಳಗಾವಿ: ಸೂರ್ಯಗ್ರಹಣದಂದು ಬಾಡೂಟ ಸೇವಿಸಿ ಮೌಢ್ಯಕ್ಕೆ ಸಡ್ಡು ಹೊಡೆದರು..!

ಸಾರಾಂಶ

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದು ಬಾಡೂಟ ಸವಿದ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು| ಚಂದ್ರ ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ| ಮಳೆಗಾಲ, ಚಳಿಗಾಲ ರೀತಿಯಲ್ಲಿ ಅವುಗಳು ಸಹ ಗೋಚರ| ಆದ್ರೆ ಅವುಗಳಿಗೆ ಮೌಢ್ಯದ ಆಚರಣೆ ಮೂಲಕ ಜನರ ಭಯಗೊಳಿಸಲಾಗುತ್ತಿದೆ|  

ಬೆಳಗಾವಿ(ಜೂ.22): ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಸಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ ಸೇವಿಸಿದ್ದಾರೆ. 

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ನೇತೃತ್ವದಲ್ಲಿ ವೇದಿಕೆಯ ಸಂಚಾಲಕರು, ಪ್ರಗತಿಪರರು, ಮುಂತಾದವರು ಭಾಗಿಯಾಗಿ ಊಟ ಸವಿದರು. ಯುವಕರು ಮೌಢ್ಯದಿಂದ ಹೊರಬರಬೇಕು. ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳನ್ನು ಕಣ್ಣು ತುಂಬಿಕೊಳ್ಳಬೇಕು. ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದೆ. ಮಳೆಗಾಲ, ಚಳಿಗಾಲ ರೀತಿಯಲ್ಲಿ ಅವುಗಳು ಸಹ ಗೋಚರಿಸುತ್ತಿವೆ. ಆದ್ರೆ ಅವುಗಳಿಗೆ ಮೌಢ್ಯದ ಆಚರಣೆ ಮೂಲಕ ಜನರ ಭಯಗೊಳಿಸಲಾಗುತ್ತಿದೆ. ಜನರು ಮೌಢ್ಯಗಳ ಆಚರಣೆಯಿಂದ ಹೊರ ಬರಬೇಕು. ಅಲ್ಲಿಯವರೆಗೂ ಮಾನವ ಬಂಧುತ್ವ ವೇದಿಕೆ ಹೋರಾಟ ಮುಂದುವರೆಸುತ್ತದೆ ಎಂದು ರಾಜ ಸಂಚಾಲಕ ರವೀಂದ್ರ ನಾಯ್ಕರ ಹೇಳಿದರು.

ಬೆಳಗಾವಿ: SSLC ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೂ ಕೊರೋನಾ ಸೋಂಕು!

ಇನ್ನು ಇದಕ್ಕೂ ಮೊದಲು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತನೊಬ್ಬನ ಜನುಮ ದಿನ ಆಚರಿಸುವ ಮೂಲಕ ಅಲ್ಪೋಪಹಾರ ಸವಿದರು. ಈ ಸಂದರ್ಭದಲ್ಲಿ ಯುವರಾಜ ತಳವಾರ, ರಾಮಕೃಷ್ಣ ಪಾನಬುಡೆ, ಪತ್ರಕರ್ತ ಮುನ್ನಾ ಬಾಗವಾನ, ಪ್ರಶಾಂತ ಪೂಜಾರಿ, ಸುಭಾಷ ಹೊನಮನಿ, ಚಿದು ಬೆಟಸೂರ, ಮಿಲಿಂದ ಕಾಂಬಳೆ, ಪ್ರಕಾಶ ಬಮ್ಮನವರ, ಬಸವರಾಜ ನಾಯಕ, ಪ್ರವೀಣ , ಬಾಲಕೃಷ್ಣ ನಾಯಕ, ಶಿವಾನಂದ ಕೋಳಿ, ಮನಿಷಾ ನಾಯಕ, ಉಶಾ ನಾಯಕ, ನೇಮಿಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.
 

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು