ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

By Suvarna News  |  First Published Feb 5, 2020, 11:36 AM IST

ಕಾಮತೃಷೆ ಈಡೇರಿಕೆಗೆ ಸಹಕರಿಸಲಿಲ್ಲ ಎಂದು, ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಚಿಕ್ಕಮ್ಮನನ್ನು ಉಸಿರುಗಟ್ಟಿಸಿ ಕೊಂದ ದಾರುಣ ಘಟನೆ ಬನ್ನೇರುಗಟ್ಟಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿಯಲ್ಲಿ ನಡೆದಿದೆ.


ಆನೇಕಲ್‌(ಫೆ.06): ಕಾಮತೃಷೆ ಈಡೇರಿಕೆಗೆ ಸಹಕರಿಸಲಿಲ್ಲ ಎಂದು, ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಚಿಕ್ಕಮ್ಮನನ್ನು ಉಸಿರುಗಟ್ಟಿಸಿ ಕೊಂದ ದಾರುಣ ಘಟನೆ ಬನ್ನೇರುಗಟ್ಟಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿಯಲ್ಲಿ ನಡೆದಿದೆ.

ಪೋರ್ನ್‌ ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟಿ ಬಿಚ್ಚಿಟ್ಟ ರಿಯಲ್‌ ಸ್ಟೋರಿಗೆ ಫ್ಯಾನ್ಸ್‌ ಶಾಕ್‌!

Tap to resize

Latest Videos

undefined

ಬೆಂಗಳೂರು ದಕ್ಷಿಣ ಕರಿಯಪ್ಪನಹಳ್ಳಿ ನಿವಾಸಿ ವಿಜಯ್‌ (22) ತನ್ನ ಚಿಕ್ಕಮ್ಮ ಚಿಕ್ಕಮ್ಮ ಯಶೋಧಾ (40) ಕೊಲೆಯಾದವರು. ಚಟಗಳ ದಾಸನಾಗಿದ್ದ ವಿಜಯ್‌ ಆಗಾಗ ಯಶೋಧಾ ಮನೆಗೆ ಬರುತ್ತಿದ್ದ. ಫೆ.3ರಂದು ಎಂದಿನಂತೆ ಬಂದ ವಿಜಯ್‌ ಚಿಕ್ಕಮ್ಮ, ಅಜ್ಜಿ ಚಂದ್ರಮ್ಮ ಜೊತೆ ಮದ್ಯ ಸೇವನೆ ಮಾಡಿದ್ದಾನೆ. ರಾತ್ರಿ 7ರ ಸುಮಾರಿಗೆ ಎಣ್ಣೆ ನಶೆಯಲ್ಲಿ ಚಿಕ್ಕಮ್ಮ ನಿದ್ದೆ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಅಜ್ಜಿ ಚಂದ್ರಮ್ಮಗೆ ಊಟ ತರಲು ಕಳುಹಿಸಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾನೆ. ಯಶೋಧಾ ಒಪ್ಪದ ಕಾರಣ ಮತ್ತಿನಲ್ಲಿ ಉಸಿರು ಗಟ್ಟಿಸಿ ಕೊಂದಿದ್ದಾನೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !

ಅಜ್ಜಿ ಊಟ ತೆಗೆದುಕೊಂಡು ಬರುವ ಹೊತ್ತಿಗೆ ಯಶೋಧಾ ಪಕ್ಕದ ಕೊಠಡಿಯಲ್ಲಿ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಬನ್ನೇರುಘಟ್ಟಪೊಲೀಸರು ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕುಡಿದ ಅಮಲಿನಲ್ಲಿ ತಾನೇ ಅತ್ಯಾಚಾರಕ್ಕೆ ಯತ್ನಿಸಿದೆ. ಎಚ್ಚರಗೊಂಡ ಚಿಕ್ಕಮ್ಮ ಕಿರುಚಾಡಿದಾಗ ಭಯಕ್ಕೆ ಉಸಿರುಗಟ್ಟಿಸಿ ಕೊಂದು ಬಿಟ್ಟೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ

click me!