ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಆತಂಕ ಇದೀಗ ಕಾರವಾರಕ್ಕೂ ಕಾಲಿಟ್ಟಿದೆ. ಜಪಾನಿನ ಡೈಮಂಡ್ ಕ್ರೂಸ್ ನಲ್ಲಿರುವ ಯುವಕನನ್ನು ರಕ್ಷಿಸುವಂತೆ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಕಾರವಾರ [ಫೆ.08]: ಚೀನಾದಲ್ಲಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿರುವ ಮಹಾಮಾರಿ ಕೊರೋನಾ ಭೀತಿ ಇದೀಗ ಕಾರವಾರಕ್ಕೂ ಕಾಲಿಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುವಕನಿಗೆ ಕೊರೋನಾ ವೈರಸ್ ತಗುಲಿರುವ ಆತಂಕ ಎದುರಾಗಿದೆ.
ಸಿಂಗಾಪುರದಿಂದ ವಾಪಸಾಗಿರುವ ಜಪಾನಿನ ಯುಕೋಮದಲ್ಲಿರುವ ಕ್ರೂಸ್ ಗೆ ಕರೋನಾ ಭೀತಿ ಎದುರಾಗಿರುವ ಇದರಲ್ಲಿ ಕಾರವಾರದ ಯುವಕ ಅಭಿಷೇಕ್ ಕಾರ್ಯನಿರ್ವಹಿಸುತ್ತಿದ್ದು, ಅವರ ರಕ್ಷಣೆಗಾಗಿ ಜಿಲ್ಲಾಧಿಕಾರಿಯಲ್ಲಿ ಕುಟುಂಬ ಮನವಿ ಮಾಡಿದೆ.
ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!..
ಕಳೆದ ಮೂರು ತಿಂಗಳಿನಿಂದ ಡೈಮಂಡ್ ಪ್ರಿನ್ಸಸ್ ಕ್ರೂಸ್ ನಲ್ಲಿ ಅಭಿಷೇಕ್ ಕಾರ್ಯನಿರ್ವಹಿಸುತ್ತಿದ್ದು, ಈ ಕ್ರೂಸ್ ನ್ನು ಸಮುದ್ರದ ಮಧ್ಯದಲ್ಲಿಯೇ ನಿಲ್ಲಿಸಲಾಗಿದೆ.
ಈಗಾಗಲೇ ಕ್ರೂಸ್ ನಲ್ಲಿರುವ 40 ಮಂದಿಗೆ ಕರೋನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದ್ದು ಇನ್ನಷ್ಟು ಮಂದಿಗೆ ವೈರಸ್ ಹರಡುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಮಗನನ್ನು ರಕ್ಷಿಸಿ ಕರೆತರುವಂತೆ ಅಭಿಷೇಕ್ ಕುಟುಂಬ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಕೊರೋನಾ ಬಗ್ಗೆ ಮೊದಲೇ ಎಚ್ಚರಿಸಿದ್ದ ವೈದ್ಯ ಬಲಿ?
ಶಿಪ್‌ನಲ್ಲಿದ್ದ 60 ಜನರನ್ನು ಈಗಾಗಲೇ ವೈದ್ಯಾಧಿಕಾರಿಗಳು ಕರೆದೊಯ್ದಿದ್ದು, ಪ್ರಥಮ ದಿನ 10 ಜನರಿಗೆ ಸೋಂಕು ಹಬ್ಬಿದ್ದು, ಬಳಿಕ ಸೋಂಕಿತರ ಸಂಖ್ಯೆ 60 ದಾಟಿದೆ.
ಕೊರೊನಾ ವೈರಸ್ ಭೀತಿಗೊಳಗಾದ ಕ್ರೂಸ್‌ನಲ್ಲಿ ಕಾರವಾರ ನಿವಾಸಿ ಅಭಿಷೇಕ್ ಈ ಹಿಂದೆ ಮಾಡಿದ ವೈದ್ಯಕೀಯ ಪರೀಕ್ಷೆಯಲ್ಲಿ ಅಭಿಷೇಕ್‌ಗೆ ಕೊರೆನಾ ಇಫೆಕ್ಟ್ ನೆಗೆಟಿವ್ ಬಂದಿತ್ತು. ಆದರೆ ಹಡಗಿನಲ್ಲೇ ಇರುವ ಕಾರಣ ಸೋಂಕು ತಗುಲುವ ಶಂಕೆ ಇದ್ದು ಕುಟುಂಬ ಆತಂಕಕ್ಕೆ ಈಡಾಗಿದೆ.