ಚಾಮರಾಜನಗರ (ಅ.17): ಬೇಟೆಯಾಡಲು ಹೋದ ಯುವಕ ಅಕ್ರಮ ವಿದ್ಯುತ್ ಗೆ ( electrocution) ಬಲಿಯಾಗಿದ್ದು, ಚಾಮರಾಜನಗರ (chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಂಡೀಪುರದಲ್ಲಿಂದು ನಡೆದಿದೆ.
ಶಿವಪುರ ಗ್ರಾಮದ ಕುಮಾರ್ (22) ವಿದ್ಯುತ್ (Electricity) ತಗುಲಿ ಸಾವನ್ನಪ್ಪಿದ್ದಾನೆ. ಬೆಳೆ ರಕ್ಷಣೆಗೆ ಹಾಕಿದ್ದ ತಂತಿಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.
undefined
ಜಮೀನು ಮಾಲಿಕ ಹುಂಡಿಪುರದ ಕುಮಾರ್ ಪೊಲೀಸರಿಗೆ (Police) ಶರಣಾಗಿದ್ದಾನೆ. ಮೊಲ ಬೇಟೆಯಾಡಲು ಮತ್ತಿಬ್ಬರು ಸ್ನೇಹಿತರೊಡನೆ ತೆರಳಿದ್ದ ಆದರೆ ಶಿವಪುರದ ಕುಮಾರ್ ಸ್ನೇಹಿತರು ಪ್ರಾಣಾಯದಿಂದ ಪಾರಾಗಿದ್ದಾರೆ.
ಉತ್ತರ ಕನ್ನಡ: ಸಾಂಬಾರ್ ಸರಿಯಾಗಿಲ್ಲವೆಂದು ತಾಯಿ, ತಂಗಿಯನ್ನೇ ಕೊಂದ ಕುಡುಕ..!
ಸ್ಥಳದಲ್ಲಿ ಬೇಟೆಯಾಡಿದ್ದ ಎರಡು ಮೊಲಗಳು (rabbit) ಪತ್ತೆಯಾಗಿವೆ. ಗುಂಡ್ಲು ಪೇಟೆ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲು ಮಾಡಲಾಗಿದೆ.
ನದಿಗೆ ಬಿದ್ದ ಮಹಿಳೆ :
ಮಂಡ್ಯ: ಸೆಲ್ಫಿ ತೆಗೆವ ವೇಳೆ ಮಹಿಳೆಯೋರ್ವರು ಸೇತುವೆ (Bridge) ಮೇಲಿಂದ ನದಿಗೆ ಬಿದ್ದಿದ್ದು KRSನ ಕೆಳ ಸೇತುವೆ ಬಳಿ ಘಟನೆ ನಡೆದಿದೆ. ಮೈಸೂರು (Mysuru) ಬಳಿಯ ಕೂರ್ಗಳ್ಳಿ ನಿವಾಸಿ ಆಶಾ ನದಿಗೆ ಬಿದ್ದ ಮಹಿಳೆ.
ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ
ಈಕೆಯ ಪತಿ ಗಣೇಶ್ ಜೊತೆಗೆ ಡ್ಯಾಂ (Dam) ವೀಕ್ಷಣೆಗೆ ಆಗಮಿಸಿದ್ದ ಆಶಾ ವೀಕ್ಷಣೆ ಮಾಡಿ ವಾಪಸ್ ತೆರಳುವ ವೇಳೆ ಸೆಲ್ಫಿ ತೆಗೆಯಲು ಹೋಗಿ ನದಿಗೆ(River) ಬಿದ್ದಿದ್ದಾರೆ.
ಪತ್ನಿಯನ್ನ (Wife) ರಕ್ಷಿಸಲು ಪತಿ (Husband) ಗಣೇಶ್ ಕೂಡ ಜೊತೆಯಲ್ಲೇ ಬಿದ್ದಿದ್ದು ಈ ವೇಳೆ ಇಬ್ಬರನ್ನೂ ರಕ್ಷಿಸಲಾಗಿದೆ. ಮೀನುಗಾರರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಸುಮಾರು 50 ಅಡಿ ಕೆಳಗೆ ಬಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, KRS ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.