ಹುಬ್ಬಳ್ಳಿ: ಕ್ರೈಸ್ತ ಸಮುದಾಯದದಿಂದ ಮತಾಂತರ, ಚರ್ಚ್‌ಗೆ ನುಗ್ಗಿದ ಹಿಂದೂ ಕಾರ್ಯಕರ್ತರು

Suvarna News   | Asianet News
Published : Oct 17, 2021, 03:26 PM IST
ಹುಬ್ಬಳ್ಳಿ: ಕ್ರೈಸ್ತ ಸಮುದಾಯದದಿಂದ ಮತಾಂತರ, ಚರ್ಚ್‌ಗೆ ನುಗ್ಗಿದ ಹಿಂದೂ ಕಾರ್ಯಕರ್ತರು

ಸಾರಾಂಶ

*  'ಆಲ್ ಅಸೆಂಬ್ಲಿ ಆಫ್ ಗಾಡ್' ಚರ್ಚ್‌ನಲ್ಲಿ ಗಲಾಟೆ *  ಪ್ರಾರ್ಥನೆ ಹೆಸರಲ್ಲಿ ಹಿಂದೂಗಳನ್ನ ತಂದು ಮತಾಂತರ *  ಪಾದ್ರಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ   

ಹುಬ್ಬಳ್ಳಿ(ಅ.17):  ಕ್ರೈಸ್ತ ಸಮುದಾಯದವರಿಂದ(Christian community) ಮತಾಂತರ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು(Hindu Activists) ಚರ್ಚ್‌ಗೆ ನುಗ್ಗಿದ ಘಟನೆ ಭೈರಿದೇವರಕೊಪ್ಪದ 'ಆಲ್ ಅಸೆಂಬ್ಲಿ ಆಫ್ ಗಾಡ್' ಚರ್ಚ್‌ನಲ್ಲಿ ಇಂದು(ಭಾನುವಾರ) ನಡೆದಿದೆ.

ಪ್ರಾರ್ಥನೆ(Prayer) ಹೆಸರಲ್ಲಿ ಹಿಂದೂಗಳನ್ನ ತಂದು ಮತಾಂತರ(Conversion) ಗೊಳಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಆಕ್ರೋಷಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಚರ್ಚ್‌(Church) ಹೊರಗಡೆ ಕುಳಿತು ಭಜನೆ ಮಾಡಲು ಆರಂಭಿಸಿದ್ದಾರೆ. 

ಮತಾಂತರಗೊಂಡಿದ್ದ 4 ಕುಟುಂಬಗಳು ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಘರ್​ ವಾಪಸಿ

ಈ ವೇಳೆ ಪಾದ್ರಿ(Pastor) ಮತ್ತು ಹಿಂದೂ(Hindu) ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ನವನಗರದ ಎಪಿಎಂಸಿ ಠಾಣೆ ಪೊಲೀಸರು(Police) ಆಗಮಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. 
 

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?