ಸ್ಮಶಾನದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

Published : Jul 21, 2019, 01:22 PM IST
ಸ್ಮಶಾನದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

ಸಾರಾಂಶ

ಸ್ಮಶಾನದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವಕ| ವಿಜಯಪುರದ ರುದ್ರಭೂಮಿಯಲ್ಲಿ ರಾತ್ರಿ ವೇಳೆ ಕೇಕ್ ಕಟ್ಟಿಂಗ್

ವಿಜಯಪುರ[ಜು.21]: ವಿಜಯಪುರದ ಯುವಕನೊಬ್ಬ ಬಾಗಲಕೋಟೆಯ ಸ್ಮಶಾನದಲ್ಲಿ ಕೇಕ್ ಕಟ್ ಮಾಡುವ ಮೂಲಕ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಯುವಕ ಸುಖದೇವ ಕಟ್ಟಿಮನೀ(36), ಬಾಗಲಕೋಟೆ ಜಿಲ್ಲೆಯ ಬೀಳಗಿ ಸ್ಮಶಾನದಲ್ಲಿ ಸ್ನೇಹಿತರೊಂದಿಗೆ ಸೇರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾನೆ. ರುದ್ರಭೂಮಿಯಲ್ಲಿಯೇ ಕೇಕ್ ಕತ್ತರಿಸಿದ ಸುಖದೇವ ಕಟ್ಟಿಮನಿಗೆ ಸ್ನೇಹಿತರಯು ಸಾಥ್ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಗುತ್ತಿಗೆ ಶಿಕ್ಷಕನಾಗಿರುವ ದಲಿತ ಯುವಕ ಸುಖದೇವ ಕಟ್ಟಿಮನಿ ಡಿಎಸ್‌ಎಸ್‌ ಮುಖಂಡ ಕೂಡಾ ಹೌದು. ಈತ ತನ್ನ ಸಮಾಜಮುಖಿ ಕಾರ್ಯಕ್ರಮದಿಂದ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ

PREV
click me!

Recommended Stories

'Obbru obbru 100 kg edare thuu..' ಲಿಫ್ಟ್‌ ನಲ್ಲಿ ಸಿಲುಕಿದ ಮುಸ್ಲಿಂ ಮಹಿಳೆಗೆ ಅವಮಾನಕಾರಿ ಕಾಮೆಂಟ್‌: KPTCL ನೌಕರಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಯುವತಿಗೆ ಡಬಲ್ ಜಾಕ್‌ಪಾಟ್‌; ಯಾರಿಗುಂಟು ಈ ಅದೃಷ್ಟ?