’ಭಾರತ ಹಿಂದೂ ರಾಷ್ಟ್ರ’ ಎಂದಿದ್ದಕ್ಕೆ ಯುವಕನ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಟ್ವಾಳ ಮೂಲದ ಯುವಕನ ಮೇಲೆ ಮಂಗಳೂರಿನ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರು(ಸೆ.26): ಮಂಗಳೂರಿನ ಸೌಹಾರ್ದತೆಯ ಸ್ಟೋರಿಯೊಂದು ವೈರಲ್ ಆಗುತ್ತಿರುವ ಸಮಯದಲ್ಲೇ ಅಲ್ಲಿನ ಸ್ಥಳೀಯ ಯುವಕರ ಗುಂಪುಗಳ ನಡುವಿನ ಘರ್ಷಣೆಯ ಘಟನೆ ವಿಡಿಯೋ ವೈರಲ್ ಆಗುತ್ತಿದೆ.
’ಭಾರತ ಹಿಂದೂ ರಾಷ್ಟ್ರ’ ಎಂದಿದ್ದಕ್ಕೆ ಯುವಕನ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಟ್ವಾಳ ಮೂಲದ ಯುವಕನ ಮೇಲೆ ಮಂಗಳೂರಿನ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'ಸಲಾಂ ಬಾಬಣ್ಣ': ಮಂಗಳೂರಿನ ಸೌಹಾರ್ದತೆಯ ಸ್ಟೋರಿ ವೈರಲ್
ಬಂಟ್ವಾಳ ಮೂಲದ ಮಂಜುನಾಥ್ ಅವರು ಮಂಗಳೂರಿನ ಮಾಲ್ ಒಂದರಲ್ಲಿ ಹಲ್ಲೆಗೊಳಗಾಗಿದ್ದಾರೆ. ಮಾಲ್‌ಗೆ ಬಂದಿದ್ದ ಮಂಜುನಾಥ್ ಹಾಗೂ ಅಲ್ಲಿದ್ದ ಕೆಲವು ಸ್ಥಳೀಯ ವಿದ್ಯಾರ್ಥಿಗಳ ನಡುವೆ ಗಲಾಟೆ ಉಂಟಾಗಿದೆ. ಭಾರತ ಹಿಂದೂ ರಾಷ್ಟ್ರ ಎಂದು ಯುವಕ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಗಣೇಶ-ಮೊಹರಂ ಒಂದೇ ರಸ್ತೆಯಲ್ಲಿ: ಸೌಹಾರ್ದತೆ ಬೆರೆತಿದೆ ಭಾರತೀಯನ ರಕ್ತದಲ್ಲಿ!
ಯುವಕ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ಉಂಟಾಗಿ ಕೊನೆಗೆ ಗಲಾಟೆಯಲ್ಲಿ ಕೊನೆಗೊಂಡಿದೆ. ಭಾರತ ಹಿಂದೂ ರಾಷ್ಟ್ರ ಎಂದು ಯುವಕ ಹೇಳುತ್ತಿದ್ದಂತೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸ್ ಆಯುಕ್ತ ಡಾ. ಪಿ. ಎಸ್. ಹರ್ಷ ಅವರು ಹೇಳಿದ್ದಾರೆ.
ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!