ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಅಶ್ಲೀಲ ಫೋಟೋ : ಯುವ​ಕನ ಅರೆಸ್ಟ್

Published : Dec 06, 2019, 11:06 AM IST
ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಅಶ್ಲೀಲ ಫೋಟೋ  : ಯುವ​ಕನ ಅರೆಸ್ಟ್

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ನಕಲಿ ಫೊಟೊಗಳನ್ನು ಅಪ್ಲೋಡ್ ಮಾಡಿದ್ದ ಯುವಕನ ಅರೆಸ್ಟ್ ಮಾಡಲಾಗಿದೆ.

ಶಿವಮೊಗ್ಗ [ಡಿ.06] : ಫೇಸ್‌ಬುಕ್‌ನಲ್ಲಿ ನಕಲಿ ಅಕೌಂಟ್‌ ತೆರೆದು ಮಹಿಳೆಯೊಬ್ಬ​ರ ಅಶ್ಲೀಲ ಫೋಟೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ ಯುವಕನನ್ನು ಸಿಇಎನ್‌ ಪೊಲೀಸರು ಬಂಧಿ​ಸಿ​ದ್ದಾರೆ. 

ಹರಮಘಟ್ಟದ ಉಮೇಶ ಬಿನ್‌ ಹನುಮಂತಪ್ಪ (19) ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋ​ಪಿ ಮಹಿಳೆಯ ಫೋಟೋಗಳೊಂದಿಗೆ ಅಶ್ಲೀಲ ಫೋಟೋಗಳನ್ನು ಎಡಿಟ್‌ ಮಾಡಿ ಅದನ್ನು ಅಪ್‌ಲೋಡ್‌ ಮಾಡಿ ಕಿರುಕುಳ ನೀಡುತ್ತಿದ್ದ. 

ಈ ಬಗ್ಗೆ ನೊಂದ ಮಹಿಳೆ ನೀಡಿದ ದೂರಿನ ಅನ್ವಯ ಶಿವಮೊಗ್ಗ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾ​ಗಿತ್ತು. ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯ ಪಿ.ಐ. ಗುರುರಾಜ್‌ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚಣೆ ನಡೆಸಿದ್ದು, ಸದರಿ ತಂಡ ಆರೋಪಿಯನ್ನು ಬಂಧಿ​ಸಿ​ದೆ.

ಈ ಹಿಂದೆಯೂ ಕೂಡ ಶಿವಮೊಗ್ಗದಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಯುವಕನೋರ್ವನನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಂದು ಇಂತಹದ್ದೇ ಪ್ರಕರಣ ನಡೆದಿದೆ. ಇದೀಗ ಯುವಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

PREV
click me!

Recommended Stories

Chamarajanagar: ಕರ್ನಾಟಕಕ್ಕೆ ಆಗಮಿಸುತ್ತಿದ್ದ ತಮಿಳುನಾಡಿನ ಹಸುಗಳಿಗೆ ನಿರ್ಬಂಧ, ಬರಪರಿಸ್ಥಿತಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ!
ದಸರಾ ಉದ್ಘಾಟನೆ ತಿರಸ್ಕರಿಸಿದ ಗವಿಮಠ ಶ್ರೀ ಪೋಸ್ಟ್; ಸುಳ್ಳು ಸುದ್ದಿ ಹರಡಿದ ಟಿವಿ ಚಾನೆಲ್ ವಿರುದ್ಧ FIR