Bengaluru Bike Stunts: ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಸವಾರರ ಬಂಧನ!

By Suvarna News  |  First Published Feb 5, 2022, 1:29 PM IST

*ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಆರೋಪಿ ಬಂಧನ
*ನಗರದ ಗೋವಿಂದ ಪುರ ಜಂಕ್ಷನ್ ಹಾಗೂ ಹಲಸೂರು ಬಳಿ ವೀಲಿಂಗ್
*ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಜಪ್ತಿ
 


ಬೆಂಗಳೂರು(ಫೆ. 05): ದ್ವಿಚಕ್ರ ವಾಹನಗಳಲ್ಲಿ ರಸ್ತೆಗಳ ಮೇಲೆ ವ್ಹೀಲಿಂಗ್‌ ಮಾಡುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಬೈಕ್‌ ವೀಲಿಂಗ್‌ ಸವಾರನ ಜೀವಕ್ಕೆ ಪಾಯ ತರುವುದಷ್ಟೇ ಅಲ್ಲದೇ ಸಾರ್ವಜನಿಕರ ಅಮೂಲ್ಯಜೀವದ ಜೊತೆ, ಇತರ ವಾಹನ ಸವಾರರ ಜೀವಕ್ಕೂ ಕುತ್ತು ತುರುತ್ತದೆ. ಈಗ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪಾಯಕಾರಿ  ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರರನ್ನು ಪೋಲಿಸರು ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಿದ್ದಾರೆ. 

ಕೆ.ಜಿ.ಹಳ್ಳಿ ಸಂಚಾರಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಬಂಧಿಸಿದ್ದಾರೆ.
ನಗರದ ಗೋವಿಂದ ಪುರ ಜಂಕ್ಷನ್ ಬಳಿ ಯುವಕ ವೀಲಿಂಗ್ ಮಾಡು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು.  ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು  ಆರೋಪಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಜತೆಗೆ ವೀಲಿಂಗ್ ಮಾಡಿದ್ದ ದ್ವಿ ಚಕ್ರ ವಾಹನ ಕೂಡ ಜಪ್ತಿ ಮಾಡಲಾಗಿದೆ. ಕೆ.ಜಿ.ಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tap to resize

Latest Videos

ಇದನ್ನೂ ಓದಿಸರ್ಕಸ್‌ ಮಾಡುವ ವೇಳೆ ಗುರಿ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಸ್ಟಂಟ್‌ಮನ್

ಇನ್ನು ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಬ್ ಜಂಕ್ಷನ್ ಬಳಿ  ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ. ಈ ಬಗ್ಗೆ ಬೆಂಗಳುರು ಸಂಚಾರ ಪೂರ್ವ ವಿಭಾಗ ಟ್ವೀಟರ್‌ನಲ್ಲಿ ಮಾಹಿತಿ ನೀಡಲಾಗಿದ್ದು ವಾಹನ ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವ್ಹೀಲಿಂಗ್‌ ಮಾಡುವವರಿಗೆ ವಾರ್ನಿಂಗ್: "ಕೆ.ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದಪುರ ಜಂಕ್ಷನ್ ಬಳಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಯಿತು." ಹಾಗೂ "ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಬ್ ಜಂಕ್ಷನ್ ಬಳಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಯಿತು." ಎಂದು ಮಾಹಿತಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಟ್ವೀಟರ್‌ನಲ್ಲಿ ""If You Are Wheeling, We're Waiting to Book Case Against You". (ನೀವು ವ್ಹೀಲಿಂಗ್ ಮಾಡುತ್ತಿದ್ದರೆ, ನಿಮ್ಮ ವಿರುದ್ಧ ಕೇಸ್ ಬುಕ್ ಮಾಡಲು ನಾವು ಕಾಯುತ್ತಿದ್ದೇವೆ) ಎಂದು ಹೇಳುವ ಮೂಲಕ ಅಪಾಯಕಾರಿ ಬೈಕ್‌ ಸ್ಟಂಟ್‌ ಮಾಡುವವರಿಗೆ ಖಡಕ್‌ ವಾರ್ನಿಂಗ್ ಕೊಟ್ಟಿದ್ದಾರೆ. 

 

" If you are wheeling, We are waiting to book case against you ".

ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಬ್ ಜಂಕ್ಷನ್ ಬಳಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಯಿತು. pic.twitter.com/DkktLxFfEy

— DCP Traffic East (@DCPTrEastBCP)

 

click me!