
ಕನಕಗಿರಿ(ಜೂ.27): ಕನ್ಯೆ ಹುಡುಕಿ ಕೊಡುವಂತೆ ಯುವ ರೈತನೊಬ್ಬ ಜನಸ್ಪಂದನಾ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ಪಟ್ಟಣದ ನಿವಾಸಿ ಸಂಗಪ್ಪ ಎಂಬುವರೇ ಡೀಸಿಗೆ ಮನವಿ ಮಾಡಿಕೊಂಡ ರೈತ.
ಕಳೆದ 10 ವರ್ಷಗಳಿಂದ ಕನ್ಯ ಹುಡುಕುತ್ತಿದ್ದು, ಕನ್ಯ ನೋಡುವುದಕ್ಕಾಗಿ ಸಾವಿರಾರು ರು.ಖರ್ಚು ಮಾಡಿದ್ದೇನೆ. ನಾನು ಕೃಷಿಕ ಎಂದಾಕ್ಷಣ ನನಗೆ ಕನೈ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ನಾನು ಕೃಷಿ ಕೆಲಸ ಬಿಟ್ಟು ಕನಕಗಿರಿಯ ಖಾಸಗಿ ಕಾಲೇಜಿನಲ್ಲಿ ಮೂರ್ನಾಲ್ಕು ವರ್ಷಗಳಿಂದ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗಲಾದರೂ ಕನ್ಯ ಕೊಡಬಹುದು ಎನ್ನುವ ಆಸೆ ಇತ್ತು. ಈಗಲೂ ಕನ್ಯ ಕೊಡಲಿಲ್ಲ. ಹುಡುಗಿಯ ಕೈ ಕಾಲು ಗಟ್ಟಿಯಾಗಿದ್ದರೆ ಸಾಕು. ನಾನೇ ದುಡಿದು ಸಾಕುತ್ತೇನೆ ಎಂದ.
ಇಲ್ಲಿ ಹೆಂಡತಿ ಬಾಡಿಗೆಗೆ ಸಿಗುತ್ತಾಳೆ: ಹೀಗೂ ಒಂದು ಪದ್ಧತಿ ಇದೆ!
ಮನವಿಗೆ ಪ್ರತಿಕ್ರಿಯಿಸಿದ ಡಿಸಿ ನಳಿನ್ ಅತುಲ್, ಊರಿನ ಹಿರಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಮದುವೆಯಾಗು ಎಂದು ತಿಳಿ ಹೇಳಿದ್ದಾರೆ.