ಗದಗ: ನಟ ಯಶ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಪ್ರಕರಣ, ಗಾಯಾಳು ಅಭಿಮಾನಿ ನಿಖಿಲ್ ಸಾವು

By Girish Goudar  |  First Published Jan 9, 2024, 9:51 AM IST

ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಗಾಯಳು ನಿಖಿಲ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಿಖಿಲ್ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಯಶ್ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಪಾಸು ಹೋಗುವಾಗ ಘಟನೆ ನಡೆದಿತ್ತು. 


ಗದಗ(ಜ.09):  ಸ್ಯಾಂಡಲ್‌ವುಡ್‌ ನಟ ಯಶ್   ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ಬೆನ್ನಲ್ಲೇ ನಟ ಯಶ್‌ ಗದಗ ಭೇಟಿ ವೇಳೆ ಮತ್ತೊಬ್ಬ ಅಭಿಮಾನಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ನಟ ಯಶ್‌ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯುತ್ ಸ್ಪರ್ಶದಿಂದ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳ ಆರೋಗ್ಯ ವಿಚಾರಿಸಿದ ವಾಪಸ್ ಆಗುತ್ತಿದ್ದಾಗ ಯಶ್ ಬೆಂಗಾವಲು ಪೊಲೀಸ್ ವಾಹನಕ್ಕೆ ಗದಗ ಮುಳುಗುಂದ ರಸ್ತೆಯಲ್ಲಿ ಬೈಕ್​ ಡಿಕ್ಕಿಯಾಗಿ ಮತ್ತೊಬ್ಬ ಅಭಿಮಾನಿ ಮೃತಪಟ್ಟಿದ್ದಾನೆ. ಘಟನೆ ನಡೆದ ತಕ್ಷಣ ಗಾಯಾಳು ನಿಖಿಲ್‌ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Tap to resize

Latest Videos

ಬರ್ತ್‌ಡೇ ಯಾಕಾದ್ರೂ ಬರುತ್ತೆ ಅನ್ಸುತ್ತೆ, ಪ್ಲೀಸ್‌ ಹೀಗೆಲ್ಲ ಮಾಡ್ಕೋಬೇಡಿ! 

ಜಿಮ್ಸ್ ಆಸ್ಪತ್ರೆಯಿಂದ  ಗಾಯಳು ನಿಖಿಲ್ ನನ್ನು ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ಶಿಫ್ಟ್ ಮಾಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಖಿಲ್ ಸಾವನ್ನಪ್ಪಿರುವ ಬಗ್ಗೆ ಕುಟುಂಬ ಮೂಲದವರು ಮಾಹಿತಿ ನೀಡಿದ್ದಾರೆ.

 ನಿಖಿಲ್ ಲಕ್ಷ್ಮೇಶ್ವರ ಅಗಡಿ ಇಂಜಿನಿಯರ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಯಾಗಿದ್ದ, ವಿಶ್ವೇಶ್ವರಯ್ಯ ಯುನಿವರ್ಸಿಟಿಗೆ ಟಾಪರ್ ಆಗಿದ್ದ ನಿಖಿಲ್ ಕ್ಯಾಂಪಸ್ ಇಟ್ರ್ಯೂವಿನಲ್ಲಿ ಆಯ್ಕೆಯಾಗಿದ್ದ. ಆರ್ಮಿ ಆಯ್ಕೆಯಾಗಿದ್ದ ಈತ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ರಿಜೆಕ್ಟ್ ಆಗಿತ್ತು.  ತಾಯಿ ಡಾ. ಸೋನಿಯಾ ಕರೂರ, ತಂದೆ ಡಾ. ಸೋಮರೆಡ್ಡಿ ಅವರ ಇಬ್ಬರು ಮಕ್ಕಳಲ್ಲಿ ಮೊದಲನೇ ಪುತ್ರ ನಿಖಿಲ ರೆಡ್ಡಿ.

ಮೃತ ಯುವಕರ ಕುಟುಂಬಸ್ಥರಿಗೆ ಯಶ್‌ ಸಾಂತ್ವನ, ಕಣ್ಣೀರಿಟ್ಟ ರಾಕಿಂಗ್‌ ಸ್ಟಾರ್‌!

ಗದಗ: ರಾಕಿಂಗ್‌ ಸ್ಟಾರ್‌ ಯಶ್‌ ಅವರ ಜನ್ಮದಿನದ ನಿಮಿತ್ತ ಬೃಹತ್‌ ಕಟೌಟ್‌ ಹಾಕುವ ವೇಳೆ ವಿದ್ಯುತ್‌ ತಗುಲಿ ದಾರುಣ ಸಾವು ಕಂಡಿದ್ದ ಮೂವರು ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿದ್ ಯಶ್‌ ಅವರಿಗೆ ಸಂತೈಸಿದ್ದರು.
ಹುಬ್ಬಳ್ಳಿಗೆ ವಿಮಾನದಲ್ಲಿ ಪ್ರಯಾಣಿಸಿದ ಯಶ್‌, ಅಲ್ಲಿಂದ ಸೂರಣಗಿಗೆ ರಸ್ತೆ ಮಾರ್ಗದಲ್ಲಿ ತೆರಳಿದರು. ಸಂಜೆಯ ವೇಳೆಗೆ ಘಟನೆ ನಡೆದ ಊರಿಗೆ ತಲುಪಿದ ಯಶ್‌, ಮೂರೂ ಕುಟುಂಬದವನ್ನು ಭೇಟಿ ಮಾಡಿ ಅವರಿಗೆ ಸಂತೈಸಿದ್ದರು..

ಈ ವೇಳೆ ಘಟನೆಯ ವಿವರಗಳನ್ನು ಪಡೆದು ಯಶ್‌ ಭಾವುಕರಾದರು.ಮೃತ ಅಭಿಮಾನಿ ಹನುಮಂತ ಹರಿಜನ, ಮುರಳಿ ಹಾಗೂ ನವೀನ್‌ ಅವರು ಕುಟುಂಬಕ್ಕೆ ಯಶ್‌ ಭೇಟಿ ನೀಡಿದ್ದರು. ಈ ವೇಳೆ ಘಟನೆಯ ವಿವರಗಳನ್ನು ಅವರು ಪಡೆದುಕೊಂಡಿದ್ದರು. 

click me!