ಕೊಪ್ಪಳ: ಅನಾರೋಗ್ಯಕ್ಕೆ ಯುವಕ ಬಲಿ, ಡೆಂಗ್ಯೂ ಶಂಕೆ

Kannadaprabha News   | Asianet News
Published : Sep 20, 2021, 11:25 AM IST
ಕೊಪ್ಪಳ: ಅನಾರೋಗ್ಯಕ್ಕೆ ಯುವಕ ಬಲಿ, ಡೆಂಗ್ಯೂ ಶಂಕೆ

ಸಾರಾಂಶ

*   ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದ ಘಟನೆ *   ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೃತ ಯುವಕ *   ಚಿಕಿತ್ಸೆ ಫಲಿಸದೆ ಸಾವು 

ಕನಕಗಿರಿ(ಸೆ.20):  ಅನಾರೋಗ್ಯಕ್ಕೆ ತುತ್ತಾಗಿ ಪಟ್ಟಣದ ಯುವಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಕಿರಣ್‌ ಹನುಮಂತಪ್ಪ ತಾವರಗೇರಿ (18) ಮೃತ ಯುವಕ. ಸೆ. 15ರಂದು ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿದ್ದ ಕಿರಣ್‌ ಅವರಿಗೆ ಮರುದಿನ ಮತ್ತೆ ಆರೋಗ್ಯ ಸಮಸ್ಯೆಯಾಗಿದ್ದು, ಶನಿವಾರ ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. 

ಡೆಂಗ್ಯೂ : ಈ ರೋಗಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ

ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಎಸ್‌ಡಿಎಂ ಆಸ್ಪತ್ರೆಗೆ ಹೋಗಿದ್ದೆವು. ಚಿಕಿತ್ಸೆ ಫಲಿಸದೆ ನಮ್ಮ ಮಗ ಮರಣ ಹೊಂದಿದ್ದಾನೆ ಎಂದು ಮೃತ ಕಿರಣ್‌ ಕುಟುಂಬಸ್ಥರು ತಿಳಿಸಿದ್ದಾರೆ.
 

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!