ಸರಿಯಾದ ಸಮಯಕ್ಕೆ ಸಿಗದ ಆಂಬುಲೆನ್ಸ್‌: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

Suvarna News   | Asianet News
Published : Dec 19, 2019, 01:02 PM ISTUpdated : Dec 19, 2019, 01:06 PM IST
ಸರಿಯಾದ ಸಮಯಕ್ಕೆ ಸಿಗದ ಆಂಬುಲೆನ್ಸ್‌: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಸಾರಾಂಶ

ಸರಿಯಾದ ಸಮಯಕ್ಕೆ ದೊರಕದ ವೆಂಟಿಲೇಟರ್ ಇರುವ ಆಂಬುಲೆನ್ಸ್‌| ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು|  ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆ| ವೆಂಟಿಲೇಟರ್ ಅಂಬುಲೆನ್ಸ್ ಪೂರೈಸದೇ ಇರುವುದೇ ಸಿದ್ದಪ್ಪನ ಸಾವನ್ನಪ್ಪಿದ್ದಾನೆ ಎಂದು ಮೃತನ ಸಂಭಂದಿಕರ ಆರೋಪ|

ಗದಗ(ಡಿ.19): ವೆಂಟಿಲೇಟರ್ ಇರುವ ಆಂಬುಲೆನ್ಸ್‌ ಸರಿಯಾದ ಸಮಯಕ್ಕೆ ದೊರೆಯದ ಕಾರಣದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಯುವಕನನ್ನು ಸಿದ್ದಪ್ಪ ಗುಡ್ಡಣ್ಣವರ (20) ಎಂದು ಗುರುತಿಸಲಾಗಿದೆ. 

ಸಿದ್ದಪ್ಪ ಗುಡ್ಡಣ್ಣವರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು, ಈ ವೇಳೆ ಯುವಕನ ಪೋಷಕರು ಆಂಬುಲೆನ್ಸ್ ಕರೆ ಮಾಡಿದ್ದಾರೆ. ಆದರೆ, ಗದಗ ಜಿಲ್ಲೆಗೆ ಒಂದೇ ವೆಂಟಿಲೇಟರ್ ಹೊಂದಿರುವ ಆಂಬ್ಯುಲೆನ್ಸ್ ವಾಹನ ಇರುವ ಕಾರಣ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಲಭ್ಯವಾಗಿಲ್ಲ. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಸಿದ್ದಪ್ಪ ಕೊನೆಯುಸಿರೆಳೆದಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವೆಂಟಿಲೇಟರ್ ಅಂಬುಲೆನ್ಸ್ ಪೂರೈಸದೇ ಇರುವುದರಿಂದ ಸಿದ್ದಪ್ಪ ಸಾವನ್ನಪ್ಪಿದ್ದಾನೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ದಿನ ನಿತ್ಯ ನೂರಾರು ಘಟನೆಗಳ ನೆಡೆಯುತ್ತಿವೆ ಆದ್ರೆ ಒಂದೇ ವೆಂಟಿಲೇಟರ್ ಆಂಬ್ಯುಲೆನ್ಸ್ ಇದೆ. ಇದರಿಂದ ಬಡ ರೋಗಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಈಗಾಗಲೇ ಒಬ್ಬ ಯುವಕ ಸಾವನ್ನಪ್ಪಿದ್ದಾನೆ ಮುಂದೆ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಮೃತ ಯುವಕನ ಸಂಬಂಧಿಕರು ಎಚ್ಚರಿಕೆ ನೀಡಿದ್ದಾರೆ. 
 

PREV
click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!