ಹೈನುಗಾರರಿಗೆ ಇನ್ಮುಂದೆ ಸಿಗುತ್ತೆ ಪಿಂಚಣಿ

By Kannadaprabha NewsFirst Published Dec 19, 2019, 12:36 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರಿಗೆ ಇಲ್ಲಿದೆ ಗುಡ್ ನ್ಯೂಸ್, ಹಾಲು ಉತ್ಪಾದಕರು ಹಾಗೂ ಸಂಘಟನೆಗಳ ನೌಕರರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 

ಮೂಲ್ಕಿ [ಡಿ.19]:  ಜಿಲ್ಲಾ ಒಕ್ಕೂಟವು ಹೈನುಗಾರರು ಮತ್ತು ಸಂಘಗಳ ನೌಕರರಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಈಗಾಗಲೇ ನೌಕರರಿಗೆ ಒಕ್ಕೂಟದಿಂದ 35 ಕೋಟಿ ರುಪಾಯಿ ಅನುದಾನವನ್ನು ವಿವಿಧ ರೂಪಗಳಲ್ಲಿ ನೀಡಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ನೆಲೆಗಳಲ್ಲಿ ಸಹಕಾರ ನೀಡುತ್ತಿದ್ದು ಹೈನುಗಾರರೊಂದಿಗೆ ಸಂಘದ ನೌಕರರಿಗೂ ಪಿಂಚಣಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲಾಗುತ್ತಿದೆ ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು.

ಮೂಲ್ಕಿ ಬಪ್ಪನಾಡು ದೇವಳದ ಶ್ರೀ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಶೇಕರ್‌ ಟಿ. ತಾಕೊಡೆ ವಹಿಸಿದ್ದರು. ಹೈನುಗಾರ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದ ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿಮಾತನಾಡಿ, ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯವಿದೆ. ಹೈನುಗಾರರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಒಲವು ತೋರಬೇಕಿದೆ ಎಂದರು.

ದಿನಕ್ಕೆ 32.066 ಲೀಟರ್ ಹಾಲು ಕೊಡುವ ಮೂಲಕ ವಿಶ್ವ ದಾಖಲೆ ಬರೆದ ಎಮ್ಮೆ!...

ಕರ್ನಾಟಕ ಹಾಲು ಮಂಡಳಿ ಬೆಂಗಳೂರು ಇದರ ನಿರ್ದೇಶಕ ಕಾಪು ದಿವಾಕರ ಶೆಟ್ಟಿಮಾತನಾಡಿದರು. ದ.ಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ. ಹೆಗಡೆ ಹೈನುಗಾರರು ಹಾಗೂ ಸಂಘದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ 2019ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಒಕ್ಕೂಟದ ಕಾರ್ಯ ನಿರ್ವಹಣಾಧಿಕಾರಿ ಎಸ್‌. ದಯಾನಂದ ರಾವ್‌ ಅವರನ್ನು ಸನ್ಮಾನಿಸಲಾಯಿತು.

click me!