ಮದುವೆಯಾದರೂ ಬಿಡದ ಪರ ಪುರುಷನ ಸಂಗ: ಗಂಡನನ್ನೇ ಕೊಂದ ಹೆಂಡ್ತಿ!

Suvarna News   | Asianet News
Published : Dec 19, 2019, 12:36 PM IST
ಮದುವೆಯಾದರೂ ಬಿಡದ ಪರ ಪುರುಷನ ಸಂಗ: ಗಂಡನನ್ನೇ ಕೊಂದ ಹೆಂಡ್ತಿ!

ಸಾರಾಂಶ

ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ ಪತ್ನಿ| ತಾಲೂಕಿನ ಬೇವೂರ ಗ್ರಾಮದಲ್ಲಿ ನಡೆದ ಘಟನೆ| ಆರೋಪಿಗಳಾದ ಮಲ್ಲಪ್ಪ ಹಾಗೂ ಯಲ್ಲವ್ವಳನ್ನು ವಶಕ್ಕೆ ಪಡೆದ ಪೊಲೀಸರು| ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು|

ಬಾಗಲಕೋಟೆ(ಡಿ.19): ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಬೇವೂರ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ ವಡ್ಡರ(35) ಎಂದು ಗುರುತಿಸಲಾಗಿದೆ. ಯಲ್ಲವ್ವ ಹಾಗೂ ಮಲ್ಲಪ್ಪ ಹೊದ್ಲೂರು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. 

ಏನಿದು ಪ್ರಕರಣ?

ಬಾಗಲಕೋಟೆ ತಾಲೂಕಿನ ಸಂಗಾಪೂರ ಗ್ರಾಮದ ಮೃತ ಮಂಜುನಾಥ್ ವಡ್ಡರ ಎಂಬುವನಿಗೆ ಯಲ್ಲವ್ವಳನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಆದರೆ, ಮದುವೆಯಾದರೂ ಕೂಡ ಯಲ್ಲವ್ವ ಮಲ್ಲಪ್ಪ ಹೊದ್ಲೂರು ಎಂಬಾತನ ಜತೆ ಅನೈತಿಕ ಸಂಬಂಧ ಸಂಬಂಧ ಇಟ್ಟುಕೊಂಡಿದ್ದಳು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದರೆ, ಯಲ್ಲವ್ವ ತನ್ನ ತವರು ಮನೆ ಬೇವೂರ ಗ್ರಾಮದಲ್ಲಿ ವಾಸವಾಗಿದ್ದಳು. ಬುಧವಾರ ಬೇವೂರು ಗ್ರಾಮಕ್ಕೆ ಬಂದಿದ್ದ ಪತಿ ಮಂಜುನಾಥ ಆಗಮಿಸಿದ್ದನು. ಈ ವೇಳೆ ಯಲ್ಲವ್ವ ತನ್ನ ಪ್ರಿಯಕರ ಮಲ್ಲಪ್ಪ ಹೊದ್ಲೂರು ಜತೆ ಸೇರಿಕೊಂಡು ಮಂಜುನಾಥನನ್ನು ಮುಗಿಸಲು ಸ್ಕೆಚ್ ರೂಪಿಸಿದ್ದಳು. 

ಅದರಂತೆ ಹೊಂಚು ಹಾಕಿ ಕೂತಿದ್ದ ಯಲ್ಲವ್ವ ಹಾಗೂ ಮಲ್ಲಪ್ಪ ಇಬ್ಬರೂ ಸೇರಿ ಮಂಜುನಾಥನ ಕತ್ತು ಕಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಮಲ್ಲಪ್ಪ ಮೃತದೇಹವನ್ನು ಬೇವೂರು ಗ್ರಾಮದಿಂದ ಸಂಗಾಪೂರ ಗ್ರಾಮಕ್ಕೆ  ತಂದು ಹಾಕಿದ್ದಾನೆ.  ಆರೋಪಿಗಳಾದ ಮಲ್ಲಪ್ಪ ಹಾಗೂ ಯಲ್ಲವ್ವಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಚಿತ್ರ: ಕೊಲೆಯಾದ ಮಂಜುನಾಥ)
 

PREV
click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!