ಮದುವೆ ಮನೆಯವರಿಂದ ವಿನೂತನ ಕೋರಿಕೆ| ಲಗ್ನಪತ್ರಿಕೆ ತಲುಪಿದ್ದರೂ ಅಲ್ಲಿಂದಲೇ ಶುಭಾಶಯ ಹೇಳಿ| ಕೋವಿಡ್ ನಿಂದಾಗ ಮದುವೆ ಮನೆಯವರ ಹೊಸ ವರಸೆ| ಕೋವಿಡ್ ನಿಯಮದಂತೆ ನಡೆಯಲಿರುವ ಮದುವೆ|
ಕೊಪ್ಪಳ(ಏ.25): ನಮ್ಮ ಮನೆಯಲ್ಲಿ ಲಗ್ನ ನಿಶ್ಚಯ ಮಾಡಿದ್ದೇವೆ. ತಮಗೆ ಮದುವೆ ಅಮಂತ್ರಣವೂ ಬಂದಿರಬಹುದು. ಆದರೆ, ಕೋವಿಡ್ ನಿಯಮದಂತೆ ಕೇವಲ 50 ಜನರು ಸೇರಿ, ನಮ್ಮೂರಿನಲ್ಲಿಯೇ ನೆರವೇರಿಸುತ್ತೇವೆ. ಆದ್ದರಿಂದ ತಾವು ಇದ್ದಲ್ಲಿಂದಲೇ ಆಶೀರ್ವಾದ ಮಾಡಿ! ಇಂಥದ್ದೊಂದು ಸಂದೇಶವನ್ನು ಈಗ ವೀರಯ್ಯ ಸ್ವಾಮಿ ಎನ್ನುವವರು ರವಾನೆ ಮಾಡಿದ್ದಾರೆ.
ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದ ವೀರಯ್ಯ ತಮ್ಮ ಮಗಳ ಮದುವೆಯನ್ನು ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧಾರ ಮಾಡಿದ್ದರು. ಆದರೆ, ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಈಗ ಮನೆಯ ಮುಂದೆ ಮಾಡಲು ನಿರ್ಧರಿಸಿದ್ದಾರೆ. ಅದು ಕೇವಲ 50 ಜನರಿಗೆ ಮಾತ್ರ ವ್ಯವಸ್ಥೆ ಮಾಡಿಕೊಂಡಿರುವುದರಿಂದ ದಯಮಾಡಿ ಯಾರೂ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲರೂ ಮುನ್ನೆಚ್ಚರಿಕೆ ವಹಿಸೋಣ. ಮನೆಯಿಂದಲೇ ನೀವು ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡಿದ್ದು, ಸಕತ್ ವೈರಲ್ ಆಗಿದೆ.
ಭುಗಿಲೆದ್ದಿದೆ ಆಂಜನೇಯ ಜನ್ಮ ಸ್ಥಳ ವಿವಾದ : ಯಾಕೆ ಕಿತ್ತಾಟ..?
ಕೋವಿಡ್ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದಕ್ಕಾಗಿ ನಾನೇ ಬಹಿರಂಗವಾಗಿಯೇ ವಿನಂತಿ ಮಾಡಿಕೊಂಡು, ತಾವಿದ್ದಲ್ಲಿಂದಲೇ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ಚಿಕ್ಕಬೊಮ್ಮನಾಳ ಗ್ರಾಮದ ವೀರಯ್ಯ ಸ್ವಾಮಿ ತಿಳಿಸಿದ್ದಾರೆ.