ಬರೀ 20 ರೂ. ಆಸೆಗೆ ಬಾವಿಗೆ ನೂಕಿ ಮಗುವನ್ನೇ ಕೊಂದ ಪಾಪಿ ಯುವತಿ..!

Kannadaprabha News   | Asianet News
Published : May 14, 2020, 10:00 AM IST
ಬರೀ 20 ರೂ. ಆಸೆಗೆ ಬಾವಿಗೆ ನೂಕಿ ಮಗುವನ್ನೇ ಕೊಂದ ಪಾಪಿ ಯುವತಿ..!

ಸಾರಾಂಶ

20 ರುಪಾಯಿ ಆಸೆಗಾಗಿ ನಾಲ್ಕು ವರ್ಷದ ಮಗುವನ್ನು ಬಾವಿಗೆ ನೂಕಿ ಕೊಲೆ| ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಹೊರವಲಯದ ತೋಟದಲ್ಲಿ ನಡೆದ ಘಟನೆ| ಬಾಲಕಿಯ ತಾಯಿ 20 ಕೊಟ್ಟು ಹತ್ತಿರದ ಅಂಗಡಿಯಿಂದ ಬಿಸ್ಕತ್ತು ತರಲು ಕಳಿಸಿದ್ದಳು| ಬಾಲಕಿಯ ಕೈಯಲ್ಲಿ 20 ರು. ಇರುವುದನ್ನು ನೋಡಿದ ಆರೋಪಿ ಯುವತಿ ಮಗು ಕೈಯಿಂದ ಹಣ ಕಸಿದುಕೊಂಡು ಬಾವಿಗೆ ನೂಕಿ ಕೊಲೆ| 

ಚಿಕ್ಕೋಡಿ(ಮೇ.14):  ಯುವತಿಯೊಬ್ಬಳು 20 ರುಪಾಯಿ ಆಸೆಗಾಗಿ ನಾಲ್ಕು ವರ್ಷದ ಮಗುವನ್ನು ಬಾವಿಗೆ ನೂಕಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಹೊರವಲಯದ ತೋಟದಲ್ಲಿ ಬುಧವಾರ ನಡೆದಿದೆ. 

ದಿವ್ಯಾ ವಿನೋದ ಉಗಡೆ (4) ಮೃತಪಟ್ಟಿರುವ ಮಗು. ಮೂಲತಃ ಮಹಾರಾಷ್ಟ್ರದ ಪೂಜಾ ದತ್ತರಾವ್‌ ಕಾಂಬಳೆ (25) ಕೊಲೆ ಆರೋಪಿ. ಬಾಲಕಿಯ ತಾಯಿ 20 ಕೊಟ್ಟು ಹತ್ತಿರದ ಅಂಗಡಿಯಿಂದ ಬಿಸ್ಕತ್ತು ತರಲು ಕಳಿಸಿದ್ದಳು. ಬಾಲಕಿಯ ಕೈಯಲ್ಲಿ 20 ರು. ಇರುವುದನ್ನು ನೋಡಿದ ಆರೋಪಿ ಯುವತಿ ಮಗು ಕೈಯಿಂದ ಹಣ ಕಸಿದುಕೊಂಡಿದ್ದಾಳೆ. 

ತಂಗಿ ಜೊತೆ ಕ್ಲೋಸ್ ಆಗಿದ್ದ ಕಾರಣಕ್ಕೆ ಗೆಳೆಯನನ್ನೇ ಕೊಂದ..!

ಆಗ ಬಾಲಕಿ ಅಳಲು ಪ್ರಾರಂಭಿಸಿದಾಗ ಕುಪಿತಳಾದ ಯುವತಿ ಸಮೀಪದ ಬಾವಿಗೆ ಮಗುವನ್ನು ಎಸೆದಿದ್ದಾಳೆ. ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಪಾಲಕರು ಬರುವಷ್ಟರಲ್ಲಿ ಮಗು ಆಗಲೇ ಅಸುನೀಗಿದೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!