ಮಳೆಗಾಲಕ್ಕೂ ಮುನ್ನ ಮಡಿಕೇರಿಯ ಮಹಾಮಳೆ ಸಂತ್ರಸ್ತರಿಗೆ ಸೂರುಭಾಗ್ಯ!

By Kannadaprabha News  |  First Published May 14, 2020, 9:59 AM IST

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ.


ಮಡಿಕೇರಿ(ಮೇ 14): ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ.

ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಹಾಗೂ ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ಈಗಾಗಲೇ 463 ಮನೆಗಳು ನಿರ್ಮಾಣವಾಗುತ್ತಿದ್ದು, ಮೇ ಅಂತ್ಯದೊಳಗೆ ಸಂತ್ರಸ್ತರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಮೇ 29ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಕೊಡಗು ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದ್ದು, ಜಿಲ್ಲೆಯ ಮದೆ ಹಾಗೂ ಜಂಬೂರು ಗ್ರಾಮಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನಿರ್ಮಿಸಲಾಗಿರುವ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Latest Videos

undefined

ಬೈಕ್‌ ಸವಾ​ರರ ಮೇಲೆ ಒಂಟಿ ಸಲ​ಗ ದಾಳಿ

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವರಾಗಿರುವ ವಿ. ಸೋಮಣ್ಣ ಅವರು, ಮೇ 22ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂದು ಜಿಲ್ಲೆಯ ಮದೆ, ಬಿಳಿಗೇರಿ, ಗಾಳಿಬೀಡು ಹಾಗೂ ಜಂಬೂರು ಗ್ರಾಮಗಳಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಕಾಮಗಾರಿಗಳ ಬಗ್ಗೆ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಜಂಬೂರಿನಲ್ಲಿ 383 ಮನೆಗಳು ಹಾಗೂ ಮದೆನಾಡಿನಲ್ಲಿ 80 ಮನೆಗಳು ಮಳೆಗಾಲದ ಮುಂಚಿತವಾಗಿ ಹಸ್ತಾಂತರವಾಗಲಿದೆ.

ಸರ್ಕಾರದಿಂದ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಸಂತ್ರಸ್ತರಿಗೆ 35 ಮನೆಗಳು ಮಾತ್ರ ಹಸ್ತಾಂತರವಾಗಿದೆ. ತಾಲೂಕಿನ ಮದೆನಾಡು ಗ್ರಾಮದಲ್ಲಿ ಈಗಾಗಲೇ 80 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜಂಬೂರು ಗ್ರಾಮದಲ್ಲಿ ಮನೆಗಳ ನಿರ್ಮಾಣವಾಗುತ್ತಿದ್ದು, ಸಂತ್ರಸ್ತ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗಿದೆ. ಆದರೆ ಇನ್ನೂ ಹಸ್ತಾಂತರ ಮಾಡಿಲ್ಲ. ರಾಜೀವ್‌ ಗಾಂ​ಧಿ ಗ್ರಾಮೀಣ ವಸತಿ ನಿಗಮದಿಂದ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಮಳೆಯಿಂದ ಪ್ರಕೃತಿ ವಿಕೋಪದಿಂದ ಒಟ್ಟು 842 ಸಂತ್ರಸ್ತರನ್ನು ಗುರುತಿಸಲಾಗಿದ್ದು, ನಂತರ ಪುನಃ ಸಂತ್ರಸ್ತರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಕೆಲವು ಗುಡ್ಡಗಳಲ್ಲಿ ಮನೆ ಕಟ್ಟಿಕೊಂಡು ಇರುವವರನ್ನು ಅಪಾಯಕಾರಿಯಾದ ಕಾರಣ ಜಿಲ್ಲಾಡಳಿತ ಅವರಿಗೆ ಮನೆ ತೆರವು ಮಾಡುವಂತೆ ಸೂಚಿಸಿ ಸಂತ್ರಸ್ತರ ಸಂಖ್ಯೆಯನ್ನೂ 925ಕ್ಕೆ ಏರಿಸಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಯಾನಿಗಳ ಪರದಾಟ, ಜಿಲ್ಲಾಡಳಿತ ವಿರುದ್ಧ ಗರಂ

2018ರಲ್ಲಿ ಸರ್ಕಾರ ಸಂತ್ರಸ್ತರಿಗೆ ತಲಾ 9.45 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಉತ್ತಮ ಮನೆಗಳನ್ನು ಕಟ್ಟಿಕೊಡಲು ತೀರ್ಮಾನಿಸಿ ಮನೆ ನಿರ್ಮಾಣ ಕಾರ್ಯ ಕಳೆದ ಎರಡು ವರ್ಷದಿಂದಲೂ ನಡೆಯುತ್ತಿದೆ. ಈಗ ಮಡಿಕೇರಿ ತಾಲೂಕಿನ ಬಿಳಿಗೇರಿ, ಮದೆ, ಗಾಳಿಬೀಡು, ಕಣಂರ್‍ಗೇರಿ ಮತ್ತು ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ.

ಮಳೆಗಾಲದ ಮುಂಚಿತವಾಗಿ ಸಂತ್ರಸ್ತರಿಗೆ ಮದೆನಾಡಿನಲ್ಲಿ 80 ಮನೆಗಳು ಹಸ್ತಾಂತರಕ್ಕೆ ಸಜ್ಜುಗೊಂಡಿದೆ. ಮಾದಾಪುರ ಸಮೀಪದ ಜಂಬೂರಿನಲ್ಲಿ 383 ಮನೆಗಳು ಮುಕ್ತಾಯದ ಹಂತದಲ್ಲಿದೆ. ಮೇ 29ಕ್ಕೆ ಮುಖ್ಯಮಂತ್ರಿಗಳ ಕಾರ್ಯಕ್ರಮವಿದೆ. ಅದಕ್ಕೂ ಮುಂಚಿತವಾಗಿ ಮನೆಗಳ ಸಂಪೂರ್ಣ ಕೆಲಸ ಪೂರ್ಣವಾಗಲಿದೆ. ಈಗಾಗಲೇ ಕಾಂಕ್ರೀಟ್‌ ರಸ್ತೆ, ಕುಡಿಯುವ ನೀರಿನ ಟ್ಯಾಂಕ್‌, ಚರಂಡಿ ವ್ಯವಸ್ಥೆ, ವಿದ್ಯುತ್‌ ಸೌಲಭ್ಯ ಸಿದ್ಧವಾಗಿದೆ. ಮನೆಗಳ ಹಸ್ತಾಂತರ ಮಾಡಲಾಗುತ್ತದೆ ಎಂದು ಮನೆಗಳನ್ನು ನಿರ್ಮಿಸುತ್ತಿರುವ ರಾಜೀವ್‌ ಗಾಂ​ಧಿ ವಸತಿ ನಿಗಮ ಪ್ರಮುಖರು ತಿಳಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸ:

2018 ಹಾಗೂ 2019ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಇಂದಿಗೂ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಈವರೆಗೆ ಕೇವಲ 35 ಮನೆಗಳ ಹಸ್ತಾಂತರ ಮಾತ್ರವಾಗಿದೆ. ವಿಕೋಪದಲ್ಲಿ ಸಂಪೂರ್ಣ ಮನೆಗಳ ಹಾನಿಯಾಗಿರುವವರಿಗೆ ಮಾತ್ರ ಬಾಡಿಗೆ ಹಣವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಆದರೆ ಹಲವಾರು ಮಂದಿ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಬಾಡಿಗೆ ಹಣ ಸಿಗುತ್ತಿಲ್ಲ ಎಂದು ಕೆಲವು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಳ್ಳಾರಿ: ಕೊರೋನಾ ಸೋಂಕಿತರ ಗುಣಮುಖ ಬೆನ್ನಲ್ಲೇ ಹೊಸ ಪ್ರಕರಣಗಳು ಪತ್ತೆ..!

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕಿನ ಜಂಬೂರು ಹಾಗೂ ಮದೆನಾಡಿನಲ್ಲಿ ಒಟ್ಟು 463 ಮನೆಗಳು ಹಸ್ತಾಂತರವಾಗಲಿದೆ. ಮುಖ್ಯಮಂತ್ರಿಗಳು ಬರುವುದು ಇನ್ನೂ ಖಚಿತವಾಗಿಲ್ಲ. ವಸತಿ ಸಚಿವರು ಭೇಟಿ ನೀಡಿ ಮೇ 22ರಂದು ಚರ್ಚೆ ನಡೆಸಲಿದ್ದು, ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮಳೆಗಾಲದ ಒಳಗಾಗಿ ಸಂತ್ರಸ್ತರಿಗೆ ಮನೆಗಳ ಹಸ್ತಾಂತರವಾಗಲಿದೆ ಎಂದು ಜಿಲ್ಲಾಧಿ​ಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮದೆನಾಡಿನಲ್ಲಿ 80 ಮನೆಗಳು ಹಸ್ತಾಂತರಕ್ಕೆ ಸಜ್ಜುಗೊಂಡಿದೆ. ಮದಾಪುರದ ಜಂಬೂರಿನಲ್ಲಿ 383 ಮುಕ್ತಾಯದ ಹಂತದಲ್ಲಿದೆ. ಮೇ 29ರಂದು ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ನೀಡುವ ಕಾರ್ಯಕ್ರಮವಿದೆ. ಮುಖ್ಯಮಂತ್ರಿಗಳು ಬರುವಷ್ಟರಲ್ಲಿ ಸಂಪೂರ್ಣ ಕೆಲಸ ಪೂರ್ಣಗೊಳ್ಳಲಿದ್ದು, ಮಳೆಗಾಲದ ಮುಂಚಿತವಾಗಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ರಾಜೀವ್‌ ಗಾಂ​ಧಿಗ್ರಾಮೀಣ ವಸತಿ ನಿಗಮ ಯೋಜನಾ ನಿರ್ದೇಶಕರು ಶ್ರೀನಿವಾಸ್‌ ತಿಳಿಸಿದ್ದಾರೆ.

ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ

2018ರಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿದ್ದು, ಇಲ್ಲಿಯವರೆಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಇದೀಗ ಜಂಬೂರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಲ್ಲಿ 2ನೇ ಪಟ್ಟಿಯಲ್ಲಿ ನಮ್ಮ ಹೆಸರಿದೆ. ಆದರೆ ಯಾವಾಗ ಮನೆ ನಮಗೆ ಸಿಗುತ್ತದೆಯೋ ಗೊತ್ತಿಲ್ಲ. ಎರಡು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಬಾಡಿಗೆ ಸಿಕ್ಕಿದೆ. ಈ ಮಳೆಗಾಲದ ಒಳಗಾಗಿ ಮನೆ ಸಿಗುವ ಲಕ್ಷಣವಿಲ್ಲ ಸಂತ್ರಸ್ತರು ಕರ್ಣಂಗೇರಿ ಗ್ರಾಮ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!