ಬೈಕ್‌ ಸವಾ​ರರ ಮೇಲೆ ಒಂಟಿ ಸಲ​ಗ ದಾಳಿ

By Kannadaprabha News  |  First Published May 14, 2020, 9:44 AM IST

ಬೈಕ್‌ ಸವಾರರಿಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಯಡವನಾಡು ಮೀಸಲು ಅರಣ್ಯ ಸಮೀಪದ ಕಾರೇಕೊಪ್ಪ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.


ಸೋಮವಾರಪೇಟೆ(ಮೇ 14): ಬೈಕ್‌ ಸವಾರರಿಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಯಡವನಾಡು ಮೀಸಲು ಅರಣ್ಯ ಸಮೀಪದ ಕಾರೇಕೊಪ್ಪ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಕೆಂಚಮ್ಮನ ಬಾಣೆಯ ನಿವಾಸಿ ಕೃಷ್ಣ ಎಂಬವರಿಗೆ ಕಾಲು ಮುರಿದಿದ್ದು, ಕುಶಾಲ ಎಂಬವರ ತಲೆಗೆ ತೀವ್ರ ತರಹದ ಪೆಟ್ಟಾಗಿದೆ. ಗಾಯಾಳುಗಳಿಬ್ಬರೂ ಕುಶಾಲನಗರದಿಂದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ರಾತ್ರಿ 9. 15 ಸಮಯದಲ್ಲಿ ಮುಖ್ಯ ರಸ್ತೆಯಲ್ಲೇ ಕಾಡಾನೆ ದಾಳಿ ನಡೆಸಿದೆ. ಸ್ಕೂಟಿಯನ್ನು ತುಳಿದು ಜಖಂಗೊಳಿಸಿದೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಡಿಆರ್‌ಎಫ್‌ಒ ಮನು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

Latest Videos

undefined

ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಯಾನಿಗಳ ಪರದಾಟ, ಜಿಲ್ಲಾಡಳಿತ ವಿರುದ್ಧ ಗರಂ

ಬೇಳೂರು, ಕಾರೇಕೊಪ್ಪ, ಕುಸುಬೂರು, ಕೆಂಚಮ್ಮನಬಾಣೆ, ಐಗೂರು, ಯಡವಾರೆ, ಕಾಜೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿವೆ. ಯಡವನಾಡು ಮೀಸಲು ಅರಣ್ಯದಲ್ಲಿರುವ ಕಾಡಾನೆಗಳು ರಾತ್ರಿ ಸಮಯದಲ್ಲಿ ಗ್ರಾಮಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ತಿಂದು ಹಾನಿ ಪಡಿಸುತ್ತಿವೆ. ಸೋಮವಾರಪೇಟೆ, ಕುಶಾಲನಗರ ಮಾರ್ಗದ ರಾಜ್ಯ ಹೆದ್ದಾರಿಯನ್ನು ಕಾಡಾನೆಗಳು ದಾಟಿ, ಗ್ರಾಮಗಳನ್ನು ಪ್ರವೇಶಿಸಬೇಕು. ರಸ್ತೆ ದಾಟುವ ಸಂದರ್ಭದಲ್ಲಿ ಎದುರಿಗೆ ಸಿಕ್ಕ ವಾಹನಗಳ ಮೇಳೆ ದಾಳಿ ಮಾಡುತ್ತಿವೆ.

click me!