ರಾಯಚೂರು: ಮೊಸಳೆಗೆ ಬಲಿಯಾಗಿದ್ದ ಬಾಲಕನ ರುಂಡ ಮಾತ್ರ ಪತ್ತೆ

By Suvarna News  |  First Published Dec 3, 2020, 10:26 AM IST

ನದಿ ದಡದಲ್ಲಿ ಬಾಲಕನ ರುಂಡ ಮಾತ್ರ ಪತ್ತೆ| ರಾಯಚೂರು ತಾಲೂಕಿನ ಡಿ ರಾಂಪೂರ ಗ್ರಾಮದಲ್ಲಿ ನಡೆದ ಘಟನೆ| ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಹೋದಾಗ ಮೊಸಳೆಗೆ ಬಲಿಯಾಗಿದ್ದ ಬಾಲಕ| 


ರಾಯಚೂರು(ಡಿ.03): ಮೊಸಳೆಗೆ ಬಲಿಯಾಗಿದ್ದ ಬಾಲಕನ ಅರ್ಧ ದೇಹ ಮಾತ್ರ ಪತ್ತೆಯಾದ ಘಟನೆ  ತಾಲೂಕಿನ ಡಿ ರಾಂಪೂರ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ನದಿ ದಡದಲ್ಲಿ ಬಾಲಕನ ರುಂಡ ಮಾತ್ರ ಪತ್ತೆಯಾಗಿದೆ. 
ಬುಧವಾರ ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಹೋದಾಗ ಬಾಲಕ ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾಗಿದ್ದ ಎಂದು ತಿಳಿದು ಬಂದಿದೆ.

ಬಾಲಕನ ಶವಕ್ಕಾಗಿ ನಿನ್ನೆ ಸಂಜೆಯವರೆಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. 

Tap to resize

Latest Videos

ದಾಖಲೆ ಬಿಡುಗಡೆ ಮಾಡ್ತಾರಂತೆ: ಕುಮಾರಸ್ವಾಮಿಗೆ ಶುರುವಾಯ್ತು ಸಂಕಷ್ಟ..!

ಆದ್ರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಾಲಕ ತಲೆಯ ಭಾಗ ಮಾತ್ರ ಪತ್ತೆಯಾಗಿದೆ. ಉಳಿದ ಭಾಗವನ್ನ ಮೊಸಳೆ ತಿಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಬಾಲಕನ ಶವ ಪತ್ತೆಯಾಗುತ್ತಿದ್ದಂತೆ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 
 

click me!