ಗುಡ್ ನ್ಯೂಸ್ : KSRTC ಪ್ರಯಾಣ ದರ ಭರ್ಜರಿ ಇಳಿಕೆ

Published : Dec 03, 2020, 10:15 AM ISTUpdated : Dec 03, 2020, 10:45 AM IST
ಗುಡ್ ನ್ಯೂಸ್ :  KSRTC ಪ್ರಯಾಣ ದರ ಭರ್ಜರಿ ಇಳಿಕೆ

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್ ದರದಲ್ಲಿ ಭಾರೀ ಇಳಿಕೆಯಾಗಿದೆ. ಇಳಿಕೆಯಾದ ದರವೆಷ್ಟು  ಇಲ್ಲಿದೆ ಮಾಹಿತಿ..

ತುಮಕೂರು (ಡಿ.03): ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ  ತುಮಕೂರು ಮಧುಗಿರಿ ಹಾಗೂ ತುಮಕೂರು ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ. 

ಈ ಬಗ್ಗೆ ನಿಗಮದ  ವಿಭಾಗೀಯ  ಸಂಚಾರನಿಯಂತ್ರಣಾಧಿಕಾರಿ ಫಕೃದ್ದೀನ್ ತಿಳಿಸಿದ್ದಾರೆ.

ಈ ಪರಿಷ್ಕೃತ ದರ ಡಿಸೆಂಬರ್ 4 ರಿಂದ ಜಾರಿಗೆ ಬರಲಿದೆ. ಪರಿಷ್ಕರಣೆಯಾಗಿರುವ ದರದನ್ವಯ ತುಮಕೂರು- ಮಧುಗಿರಿ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ  ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 42 ರು.ಗಳ ಪ್ರಯಾಣ ದರವನ್ನು 35 ರು.ಗಳಿಗೆ ಇಳಿಸಲಾಗಿದೆ. 

ಬಿಎಂಟಿಸಿ ಪ್ರಯಾಣಿಕರಿಗೆ ಖುಷ್ ಖಬರ್; ಟಿಕೆಟ್ ದರ ಇಳಿಕೆ

ಅದೇ ರೀತಿ  ತುಮಕೂರು ಪಾವಗಡ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ ನಿಗಧಿತ ನಿಲುಗಡೆಯಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 47 ರು.ಗಳನ್ನು 40 ರು.ಗಳಿಗೆ  ಇಳಿಸಲಾಗಿದೆ. 

ಸಾರ್ವಜನಿಕ ಪ್ರಯಾಣಿಕರು ಪರಿಸ್ಕೃತ ಸಾರಿಗೆ ದರ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ

PREV
click me!

Recommended Stories

ಕುಮಾರ್ ಬಂಗಾರಪ್ಪಗೆ ಟಿಕೆಟ್ ಕೊಟ್ಟಿದ್ರೆ ಇವರೆಲ್ಲಿ ಇರ್ತಿದ್ರು? ಬಿ.ವೈ ರಾಘವೇಂದ್ರ ವಿರುದ್ಧ ಬೇಳೂರು ಗರಂ
ಬೇಡ್ತಿಯ ದಿಕ್ಕು ಬದಲಿಸಿದರೆ ಕಾದಿದೆ ಅಪಾಯ, ಪರಿಸರ ನಾಶ ಮಾಡಿ ಸಾಧಿಸುವುದೇನು?