
ಬೆಂಗಳೂರು(ಮೇ.12): ರಾಜಧಾನಿ ಬೆಂಗಳೂರಿನ(Bengaluru) ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವುದಕ್ಕೆ ಕಳೆದ ಐದು ವರ್ಷದಲ್ಲಿ ವೆಚ್ಚವಾದ ಹಣ ಬರೋಬ್ಬರಿ 215 ಕೋಟಿ. ಆದರೂ ಇನ್ನೂ ರಸ್ತೆಗಳು ಮಾತ್ರ ಗುಂಡಿ ಮುಕ್ತವಾಗಿಲ್ಲ. ಕಳಪೆ ಕಾಮಗಾರಿಯಿಂದ ಸ್ವಲ್ಪ ಮಳೆ ಬಂದರೂ ಸಾಕು ಮತ್ತೆ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಬಿಎಂಪಿಯು(BBMP) ರಾಜ್ಯ ಸರ್ಕಾರಕ್ಕೆ(Government of Karnataka) ನೀಡಿರುವ ಮಾಹಿತಿ ಪ್ರಕಾರ 2017-18ರಿಂದ 2021-22ರವರೆಗೆ ಪಾಲಿಕೆಯು ವ್ಯಾಪ್ತಿಯ ರಸ್ತೆಗಳಲ್ಲಿ ಸೃಷ್ಟಿಯಾಗುವ ಗುಂಡಿಗಳನ್ನು ಮುಚ್ಚುವುದಕ್ಕೆ .215 ಕೋಟಿ ವೆಚ್ಚ ಮಾಡಲಾಗಿದೆ. ಈ ಪೈಕಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗವು .50 ಕೋಟಿ ವೆಚ್ಚ ಮಾಡಿದೆ. ಉಳಿದ .165 ಕೋಟಿ ವಲಯಗಳ ವ್ಯಾಪ್ತಿಯಲ್ಲಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಆದರೂ ನಗರದಲ್ಲಿ ರಸ್ತೆ ಗುಂಡಿಗಳು(Pothole) ಸಮಸ್ಯೆ ಕಮ್ಮಿಯಾಗಿಲ್ಲ. ಸ್ವಲ್ಪ ಮಳೆ ಬಂದರೂ ಸಾಕು ರಸ್ತೆ ಗುಂಡಿಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ. ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಪಡೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ನಗರ ರಸ್ತೆಗಳು ಗುಂಡಿ ಮುಕ್ತವಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
Potholes: ಬೆಂಗ್ಳೂರಿನ ಗುಂಡಿ ಮುಚ್ಚುವ ಆದೇಶಕ್ಕೆ ಇಂದೇ ಡೆಡ್‌ಲೈನ್..!
ಸಭೆ, ಪರಿಶೀಲನೆಯಿಂದ ಫಲವಿಲ್ಲ
ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಅಧಿಕಾರಿಗಳು ಸಭೆ ಸಭೆ ನಡೆಸುತ್ತಿದ್ದಾರೆ. ಪರಿಶೀಲನೆ ಹೆಸರಿನದಲ್ಲಿ ನಗರ ಸುತ್ತುತ್ತಿದ್ದಾರೆ. ಆದರೂ ನಗರದ ರಸ್ತೆ ಗುಂಡಿ ಮುಕ್ತವಾಗುತ್ತಿಲ್ಲ. ಹೈಡೆನ್ಸಿಟಿ ಕಾರಿಡಾರ್ ಸೇರಿದಂತೆ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ರಸ್ತೆ ಗುಣಮಟ್ಟತೃಪ್ತಿಕರವಾಗಿದ್ದರೂ ವೈಟ್‌ಟಾಪಿಂಗ್ ಕಾಮಗಾರಿ ಸೇರಿದಂತೆ ಇನ್ನಿತರೆ ಕಾಮಗಾರಿ ನಡೆಯುತ್ತಿರುವ ರಸ್ತೆಗಳ ಸ್ಥಿತಿ ಗಂಭೀರವಾಗಿದೆ.
ಇನ್ನು ವಾರ್ಡ್ ಮಟ್ಟದ ಮುಖ್ಯ ರಸ್ತೆಗಳು, ಸಣ್ಣ ರಸ್ತೆಗಳಲ್ಲಿ ಭಾರೀ ಸಂಖ್ಯೆಯ ಗುಂಡಿಗಳಿದ್ದು, ಈ ಕಡೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸಾರ್ವಜನಿಕರು ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ನಡುವೆ ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ ಮತ್ತು ಮೆಟ್ರೋ ಸೇರಿ ವಿವಿಧ ಖಾಸಗಿ ಒಎಫ್‌ಸಿ ಕೇಬಲ್ ಸಂಸ್ಥೆಗಳು ರಸ್ತೆಯನ್ನು ಅಗೆದು ಹಾಕುತ್ತಿವೆ. ಇದನ್ನು ಪುನರ್ ಅಭಿವೃದ್ಧಿ ಮಾಡುವಲ್ಲಿ ಸಮನ್ವಯ ಕೊರತೆ ಕಾಡುತ್ತಿದ್ದು, ಗುಂಡಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿವೆ.
ಯಾವ ವರ್ಷ ಎಷ್ಟು ವೆಚ್ಚ?
ವರ್ಷ ವೆಚ್ಚ (ಕೋಟಿ .)
2017-18 147.8
2018-19 49.2
2019-20 54.8
2020-21 16.4
2021-22 47
BBMP: ಹೈಕೋರ್ಟ್ ತರಾಟೆಗೆ ತೆಗೆದುಕೊಂಡ್ರೂ ರಸ್ತೆ ದುರಸ್ತಿಗೆ ಬಿಬಿಎಂಪಿ ನಕಾರ..!
2 ದಿನದಲ್ಲಿ 1,312 ಗುಂಡಿ ಭರ್ತಿ
ನಗರದಲ್ಲಿ ಎರಡು ದಿನದಲ್ಲಿ 1,312 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(Tushar Giri Nath) ಹೇಳಿದ್ದಾರೆ.
ರಸ್ತೆ ಗುಂಡಿಗಳನ್ನು ಸಮೀಕ್ಷೆಯಿಂದ ಗುರುತಿಸಿ ಅವುಗಳನ್ನು ಮುಚ್ಚಲು ನೆರವಾಗುವಂತೆ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಮಂಗಳವಾರ ಸಂಜೆಯಿಂದ ಅಧಿಕಾರಿಗಳ ಬಳಕೆಗೆ ನೀಡಲಾಗಿದೆ. ಬುಧವಾರ ಸಂಜೆ ವೇಳೆಗೆ (ಒಂದು ದಿನ) ಒಟ್ಟು 1,312 ರಸ್ತೆ ಗುಂಡಿಗಳನ್ನು ಆ್ಯಪ್ ಮೂಲಕ ಗುರುತಿಸಿ ಮುಚ್ಚಲಾಗಿದೆ. ಈ ಬಗ್ಗೆ ಗುರುವಾರ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಮೇ 16ರಿಂದ ಆ್ಯಪನ್ನು ಸಾರ್ವಜನಿಕರ ಬಳಕೆಗೂ ಮುಕ್ತಗೊಳಿಸಲಾಗುವುದು. ಸಾರ್ವಜನಿಕರು ರಸ್ತೆಯಲ್ಲಿರುವ ಗುಂಡಿಗಳನ್ನು ಆ್ಯಪ್ ಮೂಲಕ ಅಪ್‌ಲೋಡ್ ಮಾಡಿ ಬಿಬಿಎಂಪಿ ಗಮನಕ್ಕೆ ತರಬಹುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.