ಟಾರ್ಗೆಟ್ ರೀಚ್ ಮಾಡಲು ಹೋಗಿ ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆಯು ಮಹಾ ಎಡವಟ್ಟು ಮಾಡಿಕೊಂಡಿದೆ. ಸತ್ತವರಿಗೂ ಇಲಾಖೆಯು ಕೊವೀಡ್ ಲಸಿಕೆ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಮೇ.11): ಟಾರ್ಗೆಟ್ ರೀಚ್ ಮಾಡಲು ಹೋಗಿ ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆಯು ಮಹಾ ಎಡವಟ್ಟು ಮಾಡಿಕೊಂಡಿದೆ. ಸತ್ತವರಿಗೂ ಇಲಾಖೆಯು ಕೊವೀಡ್ ಲಸಿಕೆ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಸತ್ತ ವ್ಯಕ್ತಿಗಳಿಗೆ ಅದು ಹೇಗೆ ಲಸಿಕೆ ನೀಡುತ್ತಿದ್ದಾರೆ ಎಂಬುದು ಮೃತ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
undefined
ಮೃತಪಟ್ಟ 1 ವರ್ಷದ ಬಳಿಕ ಬಂತು ಬೂಸ್ಟರ್ ಡೋಸ್ ಮೆಸೇಜ್: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮುರಾರಿರಾವ್ ಶಿಂಧೆ ಎಂಬ ವ್ಯಕ್ತಿ ಕೋವಿಡ್ ನಿಂದ ಕಲಬುರಗಿಯ ಜೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತ ಪಟ್ಟ ವ್ಯಕ್ತಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ಮೆಸೇಜ್ ಬಂದಿದ್ದು ಮೃತ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೊವೀಡ್ ಲಸಿಕೆ ನೀಡಿದ್ದ ಬಗ್ಗೆ ಟಾರ್ಗೆಟ್ ರೀಚ್ ಮಾಡಲು ಆರೋಗ್ಯ ಇಲಾಖೆಯು ಮುಂದಾಗಿದ್ದು, ನಿಜವಾಗಿ ಕೋವಿಡ್ ಲಸಿಕೆ ನೀಡಿ ಗುರಿ ಸಾಧಿಸಬೇಕಾದ ಆರೋಗ್ಯ ಇಲಾಖೆಯು ಲಸಿಕೆ ನೀಡದೇ ಟಾರ್ಗೆಟ್ ರೀಚ್ ಮಾಡುವ ಸಾಹಸಕ್ಕೆ ಕೈಹಾಕಿದೆ.
ಟಾರ್ಗೆಟ್ ರೀಚ್ ಗಾಗಿ ಅಡ್ಡದಾರಿ ಹಿಡಿತಾ ಆರೋಗ್ಯ ಇಲಾಖೆ: ಕೊವೀಡ್ ಲಸಿಕೆಗೆಂದೆ ಕೇಂದ್ರ ಸರಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ, ಆರೋಗ್ಯ ಇಲಾಖೆಯು ತಪ್ಪು ಮಾಡುತ್ತಿದೆ. ಕೊವೀಡ್ ಎರಡನೇ ಡೋಸ್ ಲಸಿಕೆ ನೀಡುವ ವೇಳೆಯು ಎಡವಟ್ಟು ಮಾಡಿತ್ತು ಈಗ ಮತ್ತೆ ಬೂಸ್ಟರ್ ಡೋಸ್ ನೀಡುವಲ್ಲಿ ತಪ್ಪು ಮಾಡುತ್ತಿದೆ. ಎಲ್ಲೋ ಕಚೇರಿಯಲ್ಲಿ ಕುಳಿತು ಸಿಕ್ಕ ಸಿಕ್ಕವರ ಮೊಬೈಲ್ ನಂಬರ್ ಪಡೆದು ಲಸಿಕೆ ನೀಡಿದ್ದ ಬಗ್ಗೆ ದಾಖಲೆ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
SHAURYA PURASKAR ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ
ಮುರಾರಿ ರಾವ್ ಶಿಂಧೆ ಅವರು ಕಳೆದ ವರ್ಷ ಮೇ 23 ರಂದು ಕೊವೀಡ್ ನಿಂದ ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಯ ಜೀಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮೃತ ಪಟ್ಟ ಮೂರು ತಿಂಗಳಲ್ಲಿಯೇ ಮುರಾರಿ ರಾವ್ ಅವರಿಗೆ ಕೊವೀಡ್ ಎರಡನೇ ಡೋಸ್ ಲಸಿಕೆ ನೀಡಿದ್ದ ಬಗ್ಗೆ ಮೆಸೇಜ್ ಬಂದಿತ್ತು. ಈ ಬಗ್ಗೆ ಮೃತ ಮುರಾರಿ ಅವರ ಪುತ್ರ ವಿಶಾಲ್ ಶಿಂಧೆ ಅವರು ಈ ಬಗ್ಗೆ ದೂರು ನೀಡಿದ್ದರು ತಪ್ಪಿತಸ್ಥರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.
ನಮ್ಮ ಭಾವನೆಗಳಿಗೆ ಧಕ್ಕೆ ಎಂದು ಕುಟುಂಬಸ್ಥರ ನೋವು: ಈಗ ಮತ್ತೆ ಮೇ 9 ರಂದು ಬೂಸ್ಟರ್ ಡೋಸ್ ಲಸಿಕೆ ಪಡೆಯಲಾಗಿದೆ ಎಂದು ಮೃತ ಮುರಾರಿ ರಾವ್ ಅವರ ಪುತ್ರ ವಿಶಾಲ್ ಶಿಂಧೆ ಅವರ ಮೊಬೈಲ್ ಗೆ ಮೆಸೇಜ್ ಬಂದಿದ್ದು, ಇದರಿಂದ ಕುಟುಂಬಸ್ಥರನ್ನು ನೋವಿಗೆ ದುಡಿದಂತಾಗಿದೆ. ಪದೇ ಪದೇ ನೋವು ಕೊಡುತ್ತಿರುವ ಆರೋಗ್ಯ ಇಲಾಖೆ ವಿರುದ್ಧ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ತಂದೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮವು ಮೇ 23 ರಂದು ಇದ್ದು , ಪದೇ ಪದೇ ಲಸಿಕೆ ನೀಡಿರುವ ಬಗ್ಗೆ ಮೆಸೇಜ್ ಹಾಕಿ ನಮಗೆ ನೋವು ಕೊಡುತ್ತಿದ್ದಾರೆ. ತಂದೆಯವರ ಸಾವಿನ ನೋವು ಮರೆಯಬೇಕೆಂದರೆ ಪದೇ ಪದೇ ನೋವು ಕೊಡುತ್ತಿದ್ದಾರೆ.
ವಿನಯ ಕುಲಕರ್ಣಿ ಪೋಟೋ ಹಾಕಿಲ್ಲವೆಂದು ಪಂಚಮಸಾಲಿ ಮುಖಂಡರ ಪ್ರತಿಭಟನೆ
ಸುವರ್ಣ ನ್ಯೂಸ್ ನೊಂದಿಗೆ ನೋವು ತೋಡಿಕೊಂಡ ವಿಶಾಲ್ ರಾವ್ ಶಿಂಧೆ: ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ, ನಮ್ಮ ತಂದೆ ಕೊವೀಡ್ ನಿಂದ ಮೃತಪಟ್ಟಿದ್ದಾರೆ. ಆದರೆ, ನಮ್ಮ ತಂದೆಯವರಿಗೂ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ಮೆಸೇಜ್ ಬಂದಿದೆ. ಪದೇ ಪದೇ ನಮಗೆ ಆರೋಗ್ಯ ಇಲಾಖೆಯು ನೋವು ಕೊಡುತ್ತಿದೆ. ಈ ಬಗ್ಗೆ ನಾನು ಕೋರ್ಟ್ ಮೊರೆ ಹೋಗುತ್ತೆನೆ. ತಪ್ಪಿತಸ್ಥರು ಯಾರೆ ಇರಲಿ ಗೊಳ್ಳಬೇಕಿದೆ ಎಂದರು. ಲಸಿಕೆ ನೀಡಿರುವ ಬಗ್ಗೆ ಎಡವಟ್ಟು ಮಾಡಿದ್ದ ಆರೋಗ್ಯ ಇಲಾಖೆಯು ಟಾರ್ಗೆಟ್ ರೀಚ್ ಮಾಡಲು ಎಡವಟ್ಟು ಮಾಡದಂತೆ ಎಚ್ಚರ ವಹಿಸಬೇಕಾಗಿದೆ.