ಇತ್ತೀಚೆಗಷ್ಟೇ ಉಡುಪಿಯಲ್ಲಿ ಅಪರೂಪದ ದೆವ್ವ ಮೀನು ಬಲೆಗೆ ಬಿದ್ದಿತ್ತು. ಇದೀಗ ಕಾರವಾರದಲ್ಲಿ ಸುಂದರವಾದ ಅಪರೂಪದ ಹಳದಿ ಮೀನೊಂದು ಮೀನುಗಾರರ ಬಲೆಗೆ ಬದ್ದಿದೆ.
ಕಾರವಾರ(ಫೆ.19): ಇತ್ತೀಚೆಗಷ್ಟೇ ಉಡುಪಿಯಲ್ಲಿ ಅಪರೂಪದ ದೆವ್ವ ಮೀನು ಬಲೆಗೆ ಬಿದ್ದಿತ್ತು. ಇದೀಗ ಕಾರವಾರದಲ್ಲಿ ಸುಂದರವಾದ ಅಪರೂಪದ ಹಳದಿ ಮೀನೊಂದು ಮೀನುಗಾರರ ಬಲೆಗೆ ಬದ್ದಿದೆ. ಚಂದದ ಹಳದಿ ಬಣ್ಣದ ಪುಟ್ಟ ಪುಟ್ಟ ಬೊಟ್ಟುಗಳಿರುವ ಮೀನನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಯೆಲ್ಲೋ ಫಿನ್ ಟೂನಾ ಎಂದು ಕರೆಯಲಾಗುವ ಈ ಮೀನು ಸುಮಾರು 150ರಿಂದ 200ಕೆಜಿ ತೂಗುತ್ತದೆ. ಸುಮಾರು 9 ವರ್ಷ ಬದುಕುವ ಈ ಮೀನು ನೋಡುವುದಕ್ಕೆ ಆಕರ್ಷಕವಾಗಿದ್ದು, ಗಾತ್ರದಲ್ಲಿ ದೊಡ್ಡದಾಗಿದೆ.
ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು
ಥನ್ನಸ್ ಅಲ್ಬಕರೆಸ್ ಇದರ ವೈಜ್ಞಾನಿಹ ಹೆಸರು. ಎರಡು ಮೀಟರ್ ಉದ್ದಕ್ಕೆ ಬೆಳೆಯುವ ಮೀನು ಸುಮಾರು 200 ಕೆಜಿ ತೂಗುತ್ತದೆ. ಇದು ಆಳ ಸಮುದ್ರದಲ್ಲಿ ಬದುಕುವುದಾದರೂ ಸೂಕ್ತ ಹವಾಮಾನವಿದ್ದಾಗ ತೀರಕ್ಕೆ ಬರುತ್ತದೆ. ಈ ಮೀನನ್ನು ಸೇವಿಸಬಹುದಾಗಿದ್ದು, ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ.
ತೀರಕ್ಕೆ ಬಂದು ಬಿತ್ತು ಪುರುಷರ ಶಿಶ್ನದಂತೆ ಕಾಣುವ 'ಪೆನಿಸ್ ಫಿಶ್' ಏನ್ ಕತೆ?