ಹಾಸನದಿಂದ ಧರ್ಮಸ್ಥಳ ಪಾದಯಾತ್ರೆಯಲ್ಲಿ ಶ್ವಾನವೊಂದು ಭಾಗಿಯಾಗಿದೆ. ಹಾಸನದಲ್ಲಿ ಪಾದಯಾತ್ರೆ ಆರಂಭವಾದಲ್ಲಿಂದ ನಾಯಿ ಪಾದಯಾತ್ರಿಗಳನ್ನು ಹಿಂಬಾಲಿಸುತ್ತಲೇ ಇದೆ.
ಚಿಕ್ಕಮಗಳೂರು(ಫೆ.19): ಹಾಸನದಿಂದ ಧರ್ಮಸ್ಥಳ ಪಾದಯಾತ್ರೆಯಲ್ಲಿ ಶ್ವಾನವೊಂದು ಭಾಗಿಯಾಗಿದೆ. ಹಾಸನದಲ್ಲಿ ಪಾದಯಾತ್ರೆ ಆರಂಭವಾದಲ್ಲಿಂದ ನಾಯಿ ಪಾದಯಾತ್ರಿಗಳನ್ನು ಹಿಂಬಾಲಿಸುತ್ತಲೇ ಬಂದಿರುವುದು ವಿಶೇಷ.
ಪಾದಯಾತ್ರೆಯಲ್ಲಿ ಶ್ವಾನ ಭಾಗಿಯಾಗಿದ್ದು, ಹಾಸನದಿಂದ ಧರ್ಮಸ್ಥಳದತ್ತ ಶ್ವಾನ ನಡೆದುಕೊಂಡು ಬಂದಿದೆ. ಮನೆ ಮಾಲೀಕನ ಜೊತೆಗೆ ಹೆಜ್ಜೆ ಹಾಕುತ್ತಿರುವ ಶ್ವಾನ ಹಾಸನ, ಕೊಟ್ಟಿಗೆಹಾರದ ಮೂಲಕ ಧರ್ಮಸ್ಥಳಕ್ಕೆ ಹೊರಟಿದೆ.
ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ
ಶಿವರಾತ್ರಿ ಹಬ್ಬಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ ಕೈಗೊಳ್ಳುವುದು ಸಾಮಾನ್ಯ. ಭಕ್ತರು ಪಾದಯಾತ್ರೆ ಮೂಲಕ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಕೊಟ್ಟಿಗೆಹಾರದಲ್ಲಿ ಭಕ್ತರು ಕೆಲ ಕಾಲ ವಿಶ್ರಾಂತಿ ಪಡೆದು ಚಾರ್ಮಾಡಿ ಘಾಟ್ ರಸ್ತೆ ಮೂಲಕ ಧರ್ಮಸ್ಥಳಕ್ಕೆ ಸಾಗಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಪಾದಯಾತ್ರೆ ಕೈಗೊಂಡಿದ್ದು, ಸ್ಥಳೀಯರು ಪಾದಯಾತ್ರೆಯಲ್ಲಿ ಬರುವ ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದರು.