ಪ್ರಾಚಾರ್ಯರ ಕಿರುಕುಳಕ್ಕೆ ತರಗತಿ ಕೋಣೆಯಲ್ಲಿಯೇ ಕುಸಿದು ಬಿದ್ದ ಕಾಲೇಜು ಪ್ರಾಧ್ಯಾಪಕಿ

Published : Oct 21, 2023, 11:34 AM IST
ಪ್ರಾಚಾರ್ಯರ ಕಿರುಕುಳಕ್ಕೆ ತರಗತಿ ಕೋಣೆಯಲ್ಲಿಯೇ ಕುಸಿದು ಬಿದ್ದ ಕಾಲೇಜು ಪ್ರಾಧ್ಯಾಪಕಿ

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸರ್ಕಾರಿ ಕಾಲೇಜು ಪ್ರಾಚಾರ್ಯದ ಕಿರುಕುಳದಿಂದ ಮಾನಸಿಕ ಒತ್ತಡಕ್ಕೊಳಗಾಗಿ ಸಹಾಯಕ ಪ್ರಾಧ್ಯಾಪಕಿ ತರಗತಿ ಕೋಣೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ಉತ್ತರಕನ್ನಡ (ಅ.21): ರಾಜ್ಯದ ಕರಾವಳಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರ ನಡುವಿನ ಕಚ್ಚಾಟದಲ್ಲಿ ಸಹಾಯಕ ಪ್ರಾಧ್ಯಾಪಕಿಗೆ ನಿರಂತರವಾಗಿ 10 ಮೆಮೋ ನೀಡಲಾಗಿದೆ. ಇದರಿಂದ ತೀವ್ರ ಮನನೊಂದಿದ್ದ ಸಹಾಯಕ ಪ್ರಾಧ್ಯಾಪಕಿ ಪಾಠವನ್ನು ಮಾಡಲಾಗದೇ ತರಗತಿ ಕೊಠಡಿಯಲ್ಲಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದೆ. ತರಗತಿಯಲ್ಲಿ ಪಾಠ ಮಾಡುತ್ತಿರುವ ವೇಳೆಯೇ ಸಹಾಯಕ ಪ್ರಾಧ್ಯಾಪಕಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಸುರೇಖಾ ತಡವಲ ಎಂಬವರೇ ಅಸ್ವಸ್ಥಗೊಂಡು ಕುಸಿದುಬಿದ್ದ ಸಹಾಯಕ ಪ್ರಾಧ್ಯಾಪಕಿ ಆಗಿದ್ದಾರೆ. ಸದ್ಯ ಸಹಾಯಕ ಪ್ರಾಧ್ಯಾಪಕಿ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಸಂಬಂಧಿಸಿ ಪ್ರಾಂಶುಪಾಲರ ವಿರುದ್ಧ ಧಾರವಾಡ ಜಂಟಿ ನಿರ್ದೇಶಕರಿಗೂ ಪತ್ರ ಬರೆಯಲಾಗಿದೆ.

ಉತ್ತರಕನ್ನಡ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ, ಸಮಾಜಕ್ಕೆ ಮಾದರಿಯಾದ ಪುಟ್ಟ ಬಾಲೆ..!

10 ಮೆಮೋ ನೀಡಿದ್ದ ಪ್ರಾಚಾರ್ಯರು: ಇತ್ತೀಚೆಗಷ್ಟೇ ಪ್ರಭಾರಿ ಪ್ರಾಚಾರ್ಯರಾಗಿ ಭವ್ಯಾ ಸಿ. ಎನ್ನುವವರು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಸುರೇಖಾ ತಡವಲ ಅವರಿಗೆ ಒಂದರ ಮೇಲೊಂದರಂತೆ ಒಟ್ಟು 10 ಮೆಮೋ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದರಿಂದ ಮನನೊಂದು ಊಟ ಹಾಗೂ ತಿಂಡಿಯನ್ನು ತ್ಯಜಿಸಿ ಮಾನಸಿಕವಾಗಿ ನೊಂದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಸಹಾಯಕ ಪ್ರಾಧ್ಯಾಪಕಿ ಕಾಲೇಜಿನಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಇದರಿಂದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಶಿವರಾಮ್‌ ಹೆಬ್ಬಾರ್‌ ಬುದ್ಧಿ ಹೇಳಿದರೂ ಕೇಳದ ಸಿಬ್ಬಂದಿ: ಪ್ರಭಾರಿ ಪ್ರಾಚಾರ್ಯರ ನಡೆಯ ವಿರುದ್ಧ ಇತ್ತೀಚೆಗೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೆಲ್ಲರೂ ಸೇರಿ, ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದ್ದರು. ಯಲ್ಲಾಪುರ ಪಟ್ಟಣದ ಸರಕಾರಿ ಕಾಲೇಜು ಸುಮಾರು 30 ವರ್ಷಗಳ ಇತಿಹಾಸ ಹೊಂದಿದೆ. ಆದರೆ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನಡುವೆಯೇ ಎರಡು ಬಣಗಳಾಗಿರುವ ಆರೋಪ ವ್ಯಕ್ತವಾಗಿದೆ. ಈ ಹಿಂದೆ ಸ್ವತಃ ಶಾಸಕ ಶಿವರಾಮ ಹೆಬ್ಬಾರ್ ಕಾಲೇಜಿಗೆ ತೆರಳಿ ಸಿಬ್ಬಂದಿಯ ಸಭೆ ನಡೆಸಿ ಬುದ್ಧಿ ಹೇಳಿದ್ದರು. ಆದರೆ, ಈಗ ಪ್ರಾಚಾರ್ಯರ ನಡೆಯಿಂದ ಪುನಃ ಕಾಲೇಜು ಆಡಳಿತ ಮಂಡಳಿಯ ರಾದ್ದಾಂತ ಬೀದಿಗೆ ಬಂದಿದೆ.

ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ‌ ಮಾಡಿದ ಗಂಡ

PREV
click me!

Recommended Stories

ಬೆಂಗಳೂರು ನಗರದಲ್ಲಿ 16 ಅಕ್ರಮ ಬಾಂಗ್ಲಾದೇಶದ ನಿವಾಸಿಗಳ ಬಂಧನ
ಅಕ್ರಮ ಕಟ್ಟಡ ಪರಿಶೀಲಿಸಿ ತೆರವಿಗೆ ತಂಡ ರಚಿಸಲು ಮಹೇಶ್ವರ್ ರಾವ್ ಸೂಚನೆ