Multidimensional Poverty Index: ರಾಜ್ಯದ ಅತಿ ಬಡ ಜಿಲ್ಲೆಗಳ ಪಟ್ಟಿ ಬಿಡುಗಡೆ: ಯಾದಗಿರಿ ಮೊದಲ ಸ್ಥಾನ!

By Kannadaprabha News  |  First Published Nov 27, 2021, 8:04 AM IST

*ಯಾದಗಿರಿ ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆ
*ನಂತರದ ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ 
* ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಅತಿ ಕಮ್ಮಿ ಬಡವರು


ನವದೆಹಲಿ(ನ.27): ನೀತಿ ಆಯೋಗದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’ (Multidimensional Poverty Index) ಶುಕ್ರವಾರ ಪ್ರಕಟಗೊಂಡಿದ್ದು, ಕರ್ನಾಟಕದ ಜಿಲ್ಲೆಗಳಲ್ಲಿ ಯಾದಗಿರಿ (Karnataka-Yadgiri) ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆ ಎಂಬ ಹಣೆಪಟ್ಟಿಗೆ ಭಾಜನವಾಗಿದೆ. ನಂತರದ ಸ್ಥಾನಗಳಲ್ಲಿ ರಾಯಚೂರು (Raichur), ಕೊಪ್ಪಳ (Koppal), ಬಳ್ಳಾರಿ (Ballary), ವಿಜಯಪುರ (Vijayapur) ಹಾಗೂ ಕಲಬುರಗಿ (Kalburgi) ಇವೆ. ಈ ಪಟ್ಟಿಗಮನಿಸಿದಾಗ ಹಿಂದೆ ಹೈದರಾಬಾದ್‌ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ‘ಕಲ್ಯಾಣ ಕರ್ನಾಟಕ’ದ ಜಿಲ್ಲೆಗಳು ಹಾಗೂ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ‘ಕಿತ್ತೂರು ಕರ್ನಾಟಕ’ದ ಬಹುತೇಕ ಜಿಲ್ಲೆಗಳು ತೀರಾ ಹಿಂದುಳಿದಿವೆ ಎಂಬುದು ಸಾಬೀತಾಗಿದೆ.

ನಂ.1 ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.41.67ರಷ್ಟುಜನ ಬಡವರಾಗಿದ್ದಾರೆ. ನಂತರದ 9 ಸ್ಥಾನದಲ್ಲಿ ರಾಯಚೂರು (ಶೇ.32.19 ಬಡವರು), ಕೊಪ್ಪಳ (ಶೇ.24.6), ಹೊಸದಾಗಿ ಸ್ಥಾಪನೆಯಾದ ವಿಜಯನಗರ ಸೇರಿದಂತೆ ಬಳ್ಳಾರಿ (ಶೇ.23.4), ವಿಜಯಪುರ (ಶೇ.22.4) ಹಾಗೂ ಕಲಬುರಗಿ (ಶೇ.21.8), ಗದಗ (ಶೇ.20.27), ಬಾಗಲಕೋಟೆ (ಶೇ.20.23), ಬೀದರ್‌ (ಶೇ.19.42) ಹಾಗೂ ಚಾಮರಾಜನಗರ (ಶೇ.18.91) ಇವೆ.

Tap to resize

Latest Videos

undefined

ಹಳೆ ಮೈಸೂರಲ್ಲಿ ಬಡವರು ಕಮ್ಮಿ:

ಹಳೆ ಮೈಸೂರು ಭಾಗಗಳು ‘ಸಂಪದ್ಭರಿತ’ ಎಂದು ಮೊದಲಿನಿಂದಲೂ ಜನಮಾನಸದಲ್ಲಿದೆ. ಇದಕ್ಕೆ ಪೂರಕವಾಗಿ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಅತಿ ಕಮ್ಮಿ ಬಡವರು (ಶೇ.2.31) ಇದ್ದಾರೆ. ಮಂಡ್ಯ (ಶೇ.6.62 ಬಡವರು) ಹಾಸನ (ಶೇ.6.64), ದಕ್ಷಿಣ ಕನ್ನಡ (ಶೇ.6.69). ಮೈಸೂರು (ಶೇ.7.79), ಬೆಂಗಳೂರು ಗ್ರಾಮಾಂತರ (ಶೇ.8.39), ಕೊಡಗು (ಶೇ.8.74), ರಾಮನಗರ (ಶೇ.8.77), ಧಾರವಾಡ (ಶೇ.9.65) ಹಾಗೂ ಉಡುಪಿ (ಶೇ.10.32) ಇವೆ.

ಸೂಚ್ಯಂಕದ ಮಾನದಂಡ:

ಜಾಗತಿಕ ಮನ್ನಣೆ ಪಡೆದ ಆಕ್ಸ್‌ಫರ್ಡ್‌ ಬಡತನ ಹಾಗೂ ಮಾನವ ಅಭಿವೃದ್ಧಿ ಉಪಕ್ರಮ ಹಾಗೂ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯ ಸಮೀಕ್ಷಾ ಮಾನದಂಡಗಳನ್ನು ಆಧರಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ಹೇಳಿದೆ. ಆರೋಗ್ಯ, ಶಿಕ್ಷಣ ಹಾಗೂ ಜೀವನ ಗುಣಮಟ್ಟ- ಎಂಬ 3 ಮಾನದಂಡ ಆಧರಿಸಿ ಬಡತನ ಅಳೆಯಲಾಗಿದೆ. ಇವುಗಳಲ್ಲಿ ಪೌಷ್ಟಿಕತೆ, ಶಿಶುಮರಣ, ಶಾಲೆಗೆ ಮಕ್ಕಳ ಹೋಗುವಿಕೆ, ಅಡುಗೆಗೆ ಬಳಸುವ ಇಂಧನ, ನೈರ್ಮಲ್ಯ, ಕುಡಿವ ನೀರು, ಮನೆ, ವಿದ್ಯುತ್‌, ಬ್ಯಾಂಕ್‌ ಖಾತೆ ಇತ್ಯಾದಿಗಳಿವೆ.

Karnataka politics: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಕುಮಾರಸ್ವಾಮಿ

5 ಕಡು ಬಡ ಜಿಲ್ಲೆಗಳು

1) ಯಾದಗಿರಿ 41.67%,  2) ರಾಯಚೂರು 32.19%, 3) ಕೊಪ್ಪಳ 24.6%,  4) ಬಳ್ಳಾರಿ 23.4%,  5) ವಿಜಯಪುರ 22.4%

5 ಶ್ರೀಮಂತ ಜಿಲ್ಲೆಗಳು

1) ಬೆಂಗಳೂರು 2.31%, 2) ಮಂಡ್ಯ 6.62%,  3) ಹಾಸನ 6.64%,  4) ದಕ್ಷಿಣ ಕನ್ನಡ 6.69% 5) ಮೈಸೂರು 7.79%

ಯಾವ ಜಿಲ್ಲೆಯಲ್ಲಿ ಎಷ್ಟುಬಡವರು?

ಜಿಲ್ಲೆ (ಬಡವರ ಸಂಖ್ಯೆ) : ಯಾದಗಿರಿ (41.67%),  ರಾಯಚೂರು (32.19%), (ಕೊಪ್ಪಳ 24.6%),  (ಬಳ್ಳಾರಿ 23.4%), ವಿಜಯಪುರ (22.4%), 
ಕಲಬುರಗಿ (21.8%),  ಗದಗ (20.27%), ಬಾಗಲಕೋಟೆ (20.23%),  ಬೀದರ್‌ (19.42%),  ಚಾಮರಾಜನಗರ (18.91%), ಚಿತ್ರದುರ್ಗ (15.79%),  ಹಾವೇರಿ (15.61%),  ಚಿಕ್ಕಬಳ್ಳಾಪುರ (15.16%), ತುಮಕೂರು (14.00%),  ಉತ್ತರ ಕನ್ನಡ (13.21%),  ಶಿವಮೊಗ್ಗ (12.72%),  ಬೆಳಗಾವಿ (12.26%), ದಾವಣಗೆರೆ (11.71%),  ಚಿಕ್ಕಮಗಳೂರು (11.19%), ಉಡುಪಿ (10.32%),  ಕೋಲಾರ (10.30%), ಧಾರವಾಡ (9.65%),   ರಾಮನಗರ (8.77%), ಕೊಡಗು (8.74%),  ಬೆಂಗಳೂರು ಗ್ರಾಮಾಂತರ (8.39%), ಮೈಸೂರು (7.79%), ದಕ್ಷಿಣ ಕನ್ನಡ (6.69%), ಹಾಸನ (6.64%), ಮಂಡ್ಯ (6.62%), ಬೆಂಗಳೂರು (2.31%)

click me!