ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ ಜೈಲ್‌ಗೆ ಕಳಿಸ್ತೇನೆ, ಒಬ್ರನ್ನ ಕಾಡಿಗೆ ಕಳಿಸ್ತೇನೆ -ಯತ್ನಾಳ್ ಕಿಡಿ

By Ravi Janekal  |  First Published Sep 19, 2022, 10:53 AM IST
  • ಉತ್ತರ ಪ್ರದೇಶದಲ್ಲಿ ಯೋಗಿ ಬಾಬಾ ಬುಲ್ಡೋಜರ್ ಕಳಿಸ್ತಾರೆ. 
  • ನಮ್ಮಲ್ಲಿ "ಕಠಿಣ ಕ್ರಮ ಕೈಗೊಳ್ಳಲಾಗುವುದು" ಅಂತಾರೆ.
  • ಏನ್ ಮಾಡೋದು ನಮ್ಮನ್ನ ಮುಖ್ಯಮಂತ್ರಿ ಮಾಡಲ್ಲ
  • : ನಾನು ಮತ್ತೊಬ್ಬ ಯೋಗಿ ಬಾಬಾ ಆಗ್ತಾನೆ ಅನ್ನೋ ಭಯ ಅವರಿಗೆ
  •  ಸ್ವಪಕ್ಷದ ಕೆಲ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ ಯತ್ನಾಳ್

ದಗ (ಸೆ.19) : ಹಿಂದೂ ಮಹಾ ಗಣಪತಿ ಧರ್ಮ ಸಭೆಯಲ್ಲಿ‌ ಭಾಗವಹಿಸಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್, ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯವೈಖರಿ ಬಗ್ಗೆ ಟೀಕಿಸಿದ್ರು. ಅಲ್ದೆ, ನಾನು ಸಿಎಂ ಆದ್ರೆ  ಬದಲಾವಣೆ ಮಾಡ್ತೀನಿ ಅಂತಾ ಹೇಳುವ ಮೂಲಕ ಸಿಎಂ ಆಗುವ ಆಸೆಯನ್ನ ಮತ್ತೊಮ್ಮೆ ಬಹಿರಂಗ ಪಡೆಸಿದ್ರು.‌

ಹಿಂದುತ್ವ ಪ್ರತಿಪಾದಕರಿಗೆ ಮತ ಹಾಕಿ, ತಾಕತ್ತು ತೋರಿಸಿ: ಯತ್ನಾಳ್‌

Latest Videos

undefined

ಉತ್ತರ ಪ್ರದೇಶ ಮಾದರಿ(Uttara Pradesh Model)ಯಲ್ಲಿ ಬುಲ್ಡೊಜರ್(Bulldozer) ಪ್ರಯೋಗಿಸಿ ಅಂದ್ರೆ ನಮ್ಮಲ್ಲಿ ಸಾಧ್ಯವಿಲ್ಲ ಅಂತಾರೆ.. ಸಾಧ್ಯವಿಲ್ಲ ಅಂದ್ರೆ ಯಾತಕ್ಕೆ ಇದ್ದೀರಿ.. ಮನೆಗೆ ಹೋಗ್ರಿ ಅಂತಾ ಚಾಟಿ ಬೀಸಿದ್ರು. ಯತ್ನಾಳ್ ಹಂಗೆ ಹೇಳ್ತಾರೆ ಅಂತಾ ಕೇಳಿದ್ರೆ, ಯತ್ನಾಳ್ ಪ್ರಶ್ನೆಗೆ ಉತ್ತರ ಕೊಡಲ್ಲ ಅಂತಾ ಜಾರಿಕೊಳ್ತಾರೆ ಅಂದ್ರು.. ಹಾಡಹಗಲೇ ಹಿಂದೂಗಳನ್ನ ಹೊಡೀತಾರೆ.. ಹುಬ್ಬಳ್ಳಿ(Hubballi)ಯಲ್ಲಿ ಪೊಲೀಸ್ ಸ್ಟೇಷನ್(Police station) ಗೆ ಬೆಂಕಿ ಹಚ್ಚಿದ್ರು.. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದೀರಿ.. ಆದ್ರೆ, ಹೊಡೀಬೇಡ ಅಂತಾರೆ. ನಾನು ಮುಖ್ಯಮಂತ್ರಿ ಆಗಿದ್ರೆ.. ಮೊದಲು ಹೊಡಿರಿ ಅಂತಿದ್ದೆ. ಹೊಡೆದವರಿಗೆ ಪ್ರಮೋಷನ್(Promotion) ಕೊಡ್ತಿದ್ದೆ.. ಪಿಸಿ ಇದ್ದವನನ್ನ ಎಎಸ್ ಐ, ಪಿಎಸ್ ಐ ಇದ್ದವನನ್ನ ಸಿಪಿಐ ಮಾಡ್ತಿದ್ದೆ. ಅಲ್ದೆ, ಕರ್ನಾಟಕದ ತುಂಬ ಎನ್ಕೌಂಟರ್ ಸ್ಪೆಷಲಿಸ್ಟ್(Encounter Specialist) ಗಳನ್ನ ಇಡುತ್ತಿದ್ದೆ.. 

ಏನ್ ಮಾಡೋದು ನಮ್ಮನ್ನ ಮುಖ್ಯಮಂತ್ರಿ ಮಾಡಲ್ಲ: ನಾನು ಮತ್ತೊಬ್ಬ ಯೋಗಿ ಬಾಬಾ ಆಗ್ತಾನೆ ಅನ್ನೋ ಭಯ ಅವರಿಗೆ ಅನ್ನೋ ಮೂಲಕ ಹೆಸರು ಪ್ರಸ್ತಾಪಿಸಿದೆ ಸ್ವಪಕ್ಷದ ಕೆಲ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ್ರು. ನಾನು ತಪ್ಪಿ ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ, ಒಬ್ಬರನ್ನ ಕಾಡಿಗೆ ಕಳಸ್ತೇನೆ ಅಂತಾ ಹೇಳಿದ್ರು.. ಮೊನ್ನೆ ಮಹಾರಾಷ್ಟ್ರದಲ್ಲಿ ಪೊಲೀಸರು ಡಿಜೆ ಎದ್ರು ಕುಣಿದಿದಾರೆ..ಮುಂದೆ ನಾನು ಮುಖ್ಯಮಂತ್ರಿಯಾದ್ರೆ ಎಲ್ಲರೂ ಕುಣಿಯೋಣ ಅಂತಾ ಹೇಳಿ ಮುಖ್ಯಮಂತ್ರಿ ಆಗುವ ಆಸೆಯನ್ನ ಮತ್ತೊಮ್ಮೆ ಹೇಳಿಕೊಂಡ್ರು.‌

ಸಾವರ್ಕರ್(Savarkar) ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಟೀಕೆ ಮಾಡ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂಗಳು ಒಗ್ಗಟ್ಟಾಗಲು ಗಣೇಶ ಉತ್ಸವ(Ganesh Utsav)ಮಾಡಲಾಗ್ತಿತ್ತು. ಭಾರತಾದ್ಯಂತ ಗಣೇಶ ಉತ್ಸವ ಆಚರಣೆ ವಿಸ್ತರಿಸಿದ್ದು ವೀರ ಸಾವರ್ಕರ್.. ಆದ್ರೆ, ಸಾವರ್ಕರ್ ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಟೀಕೆ ಮಾಡ್ತಿದ್ದಾರೆ. ಕೇವಲ ಮಹಾತ್ಮಾ ಗಾಂಧಿಯವರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ, ಆಜಾದ್, ಭಗತ್ ಸಿಂಗ್, ರಾಜಗುರು ಎಲ್ಲರ ಪರಿಶ್ರಮ ದಿಂದ ಸ್ವಾತಂತ್ರ್ಯ ಸಿಕ್ಕಿದೆ..  ಯಾರೋ ಉಪವಾಸ ಕೂತಿದ್ದಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತಾ ಬರೆದರು  ಗಾಂಧಿ, ನೆಹರು ಅವರಿಗೆ ಜೈಲು ಅಂದ್ರೆ ಆರಾಮವಾಗಿರುತ್ತಿತ್ತು. ಸಾವರ್ಕರ್ ಅವರಿಗೆ ಕಠಿಣ ಶಿಕ್ಷೆ ಇತ್ತು. ಇವತ್ತು ಅವರು ಕ್ಷಮೆ ಕೇಳಿದ್ರು ಅಂತಾರೆ.. ಮಹಾತ್ಮಾ ಗಾಂಧಿ ಅವರು ಹೀಸ್ ಹೈನೆಸ್ ಅಂತಾ ಬರೆದಿದಾರೆ. ಅದು ಸಾಮಾನ್ಯವಾಗಿತ್ತು ಅಂದ್ರು.‌

ಇನ್ನೊಂದು ಐದು ವರ್ಷ ತಡೀರಿ; ಪಾಕಿಸ್ತಾನದಲ್ಲೂ ಗಣಪತಿ ಕೂರಸ್ತೇವೆ:

ಕಳೆದ ಎರಡು ವರ್ಷದಿಂದ ಮೂರು ದಿನ ಗಣೇಶ ಕೂರಿಸುವ ನಿರ್ಬಂಧವನ್ನ ಹೇರಿತ್ತು. ಮೂರು ದಿನ ಕೂರಿಸಬೇಕು.. ಐದೇ ಜನ ಇರಬೇಕು ಅಂತಾ ನಿಯಮ ಇತ್ತು. ನಾನು ಬೊಮ್ಮಾಯಿ(Basavaraj Bommai)ಯವರಿಗೆ ಈ ಬಾರಿ ಹೇಳಿದೆ.. 21 ದಿನ ಕೂರಸ್ತೇನಿ ಅಂದೆ.. ನನ್ನ ತಲೆಯಲ್ಲಿ ಬಂದ್ರೆ ಒಂದ್ ವರ್ಷನೂ ಕೂರಿಸ್ತೇನೆ, ಡಿಜೆ ಹಚ್ತೇನೆ ಅಂದೆ. ಕರ್ನಾಟಕ, ಭಾರತದಲ್ಲಿದೆಯೊ ಪಾಕಿಸ್ತಾನದಲ್ಲಿದೆಯೊ..? ಇನ್ನೊಂದು ಐದು ವರ್ಷ ತಡೀರಿ, ಪಾಕಿಸ್ತಾನದಲ್ಲೂ ಗಣಪತಿ ಕೂರಸ್ತೇವೆ ಅಂತ ಹೇಳಿದ್ರು.. ನಮ್ಮ ಸರ್ಕಾರ, ರಾಷ್ಟ್ರ ಪತಿ ನಮ್ಮವರು, ಉಪರಾಷ್ಟ್ರಪತಿ ನಮ್ಮವರು..‌ ಪ್ರಧಾನಿ ನಮ್ಮವರು, ಮುಖ್ಯಮಂತ್ರಿ ನಮ್ಮವರು.. ಯಾಕೆ ಪರ್ಮಿಷನ್ ತುಗೋಬೇಕು?

ಮೊದಲು ಮಸೀದಿ ಮೇಲಿನ ಸ್ಪೀಕರ್ ತೆರವುಗೊಳಿಸಿ ಆಮೇಲೆ ಡಿಜೆ ಬಂದ್ ಮಾಡ್ತೇವೆ. ಒಂದ್ ವೇಳೆ ಗಣಪತಿ ಇಟ್ಟರೆ ಏನ್ ಮಾಡ್ತಿರಾ.. ಜೈಲಿಗೆ ಹಾಕ್ತೀರಾ.. ಲಾಠಿ ಚಾರ್ಜ್ ಮಾಡ್ತಿರಾ.. ಗುಂಡು ಹಾಕ್ತೀರಾ.. ಹರ್ಷ ಕೊಲೆ ಮಾಡಿದವರಿಗೆ ಗುಂಡು ಹಾಕಬೇಕಿತ್ತು, ಪ್ರವೀಣ್ ಹತ್ಯೆ ಮಾಡಿದವರಿಗೆ ಹಾಕ್ಬೇಕಿತ್ತು.. ಅದು ಬಿಟ್ಟು ಹಿಂದೂಗಳು ಸಂಭಾವಿತರು ಅಂತಾ ಡಿಜೆ ಹಚ್ಚಬೇಡಿ ಅಂತಿರಾ? ಇದೇ ರೂಟ್ ಗೆ ಹೋಗು ಅನ್ನೊ ನಿಯಮ ಹಾಕ್ತೀರಾ..? ನಾನೇನಾದ್ರೂ ಇದ್ರೆ ಬೇಕಾದ್ ರೂಟ್ ಗೆ ಹೋಗಿ ಅಡ್ಡಾಡಿ ಬನ್ನಿ ಅಂತಿದ್ದೆ. ಆ ಕಾಲ ಬರುತ್ತೆ ಅನ್ನೋ ಮೂಲಕ ಮುಖ್ಯಮಂತ್ರಿ ಆಗುವ ಬಯಕೆಯನ್ನ ಯತ್ನಾಳ್ ಬಿಚ್ಚಿಟ್ಟರು.

 

ನಾನೂ ಎಲ್ಲರ ಜತೆ ಅಡ್ಜಸ್ಟ್ ಆಗಿದ್ದರೆ ನೀವ್ಯಾರೂ ಸಿಎಂ ಆಗುತ್ತಿರಲಿಲ್ಲ, ಬಸನಗೌಡ ಯತ್ನಾಳ್!

ನಮ್ಮವರು ನನ್ನ ಹೊರಗಡೆ ಬಿಡುತ್ತಿಲ್ಲ. ಎಲ್ಲ ಅವೇ ಮಾರಿಗಳನ್ನ ತೆಗೆದುಕೊಂಡು ಅಡ್ಡಾಡುತ್ತಿದ್ದಾರೆ.. ಎರಡನೇ ಹಂತದ ನಾಯಕರು.. ಒಬ್ಬರಿಗೂ ಚಪ್ಪಾಳೆ ಹೊಡೆಯುವವರಿಲ್ಲ. ಯತ್ನಾಳನನ್ನ ಮುಂದೆ ಬಿಟ್ರೆ ಮುಂದೆ ನಂಬರ್ 1 ಆಗ್ತಾನೆ.. ಬೇಡ ಅಂತಾರೆ. ಅದ್ಕೆ ಸಂಚಾರ ಬಿಟ್ಟಿದಿನಿ.. ಗಣಪತಿಗಾಗಿ ಅಡ್ಡಾಡುತ್ತಿದ್ದೇನೆ. ಇವನನ್ನ ಹೊರಗೆ ಹಾಕಲಿಕ್ಕೆ ಆಗ್ತಿಲ್ಲ. ಇಟ್ಕೊಳೋದಕ್ಕೂ ಆಗ್ತಿಲ್ಲ ಅಂತಾ ಅಂತಿದಾರೆ.. ನಾನು, ಹಿಂದೂ ಪರವಾಗಿ ಮಾತ್ನಾಡುತ್ತಿದ್ದೇನೆ.. ಸಶಕ್ತ ಪ್ರಧಾನಿಯ ಕೈಯಲ್ಲಿ ನಮ್ಮ ದೇಶ ಇದೆ.. ಅಮೆರಿಕಾದ ಅಧ್ಯಕ್ಷರೂ ಒಂದು ಮೆಟ್ಟಿಲು ಇಳಿದು ಪ್ರಧಾನಿಗೆ ಗೌರವ ಕೊಡ್ತಾರೆ. ಹಿಂದೆ 'ಮೌನ ಸಿಂಗ್' ಪ್ರಧಾನಿಯಾಗಿದ್ದಾಗ ಗೌರವ ಸಿಗುತ್ತಿರಲಿಲ್ಲ.. ಈಗ ಅಮೆರಿಕಾ ಅಧ್ಯಕ್ಷರೇ ಓಡಿ ಬರ್ತಾರೆ.. ಅದು ನಮ್ಮ ತಾಕತ್ತು ಎಂದರು.

click me!