ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರದ ಅಧ್ಯಕ್ಷ ವೀರೇಂದ್ರ ಹೆಗಡೆ, ಇನ್‌ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ನಟ ಯಶ್ ಅವರು ರಾಯಭಾರಿಯಾಗಿ ಈ ಯೋಜನೆಗೆ ಯಶಸ್ವಿಗೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ಸಚಿವ ಪೂಜಾರಿ ಹೇಳಿದ್ದಾರೆ.
ತುಮಕೂರು(ಫೆ.09): ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 ಎ ವರ್ಗದ ಆಯ್ದ ದೇವಾಲಯಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೆಗಡೆ, ಸುಧಾಮೂರ್ತಿ, ಯಶ್ ರಾಯಭಾರಿ
ಶ್ರೀ ಧರ್ಮಸ್ಥಳ ಕ್ಷೇತ್ರದ ಅಧ್ಯಕ್ಷ ವೀರೇಂದ್ರ ಹೆಗಡೆ, ಇನ್‌ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ನಟ ಯಶ್ ಅವರು ರಾಯಭಾರಿಯಾಗಿ ಈ ಯೋಜನೆಗೆ ಯಶಸ್ವಿಗೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ಸಚಿವ ಪೂಜಾರಿ ಹೇಳಿದ್ದಾರೆ.
ಭಯಂಕರ ಪೆಡಂಭೂತ ಬಾಲಕಿಯ ಬ್ಲಡ್ ಕ್ಯಾನ್ಸರ್ ಚಿಕಿತ್ಸೆಗೆ ಕೊಟ್ಟಿದ್ದು 3 ಲಕ್ಷ..!
ರಾಜ್ಯದಲ್ಲಿ 36 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಇವುಗಳ ಆಸ್ತಿ ಸರ್ವೆ ಕಾರ್ಯ ನಡೆಯುತ್ತಿದೆ. ಆಸ್ತಿಗಳ ಸಂಪೂರ್ಣ ಸರ್ವೆ ನಡೆದ ನಂತರ ಗಣಕೀಕರಣಗೊಳಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ 190 ದೇವಾಲಯಗಳಿವೆ. ಹಾಗೆಯೇ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ 33 ಸಾವಿರ ದೇವಾಲಯಗಳಿವೆ ಎಂದ ಅವರು, ಸಣ್ಣ ದೇವಾಲಯಗಳ ಅರ್ಚಕರಿಗೆ ಇಂತಿಷ್ಟುಎಂದು ತಸ್ತಿಕ್ ನಿಗದಿಪಡಿಸಲಾಗಿದೆ ಎಂದರು.
ಮುಂಜಾವ 3 ಗಂಟೆಗೇ ಮದುವೆ ಹೆಣ್ಣು ಎಸ್ಕೇಪ್, ನಷ್ಟ ಪರಿಹಾರ ಕೇಳಿದ ವರ
ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಹಾಗೂ ಬಡವರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ಜಾರಿಗೊಳಿಸಿರುವ ಈ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ಜತೆ ಹೆಚ್ಚಿನ ಸಂಖ್ಯೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.