ಮಳೆ ಅವಾಂತರಕ್ಕೆ ಯಳಂದೂರು ತತ್ತರ: ಪೊಲೀಸ್‌ ಠಾಣೆ, ಶಾಲಾ-ಕಾಲೇಜು ಮುಳುಗಡೆ

By Govindaraj S  |  First Published Sep 7, 2022, 2:29 PM IST

ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಯಳಂದೂರು ಪಟ್ಟಣ ಮತ್ತು ತಾಲೂಕಿನ ಹಲವು ಭಾಗ ತತ್ತರಿಸಿ ಹೋಗಿದ್ದು, ಹಲವು ಕಟ್ಟಡಗಳು ಜಲಾವೃತವಾಗಿದೆ. ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಆತಂಕಕ್ಕೆ ಒಳಗಾದರು.


ಚಾಮರಾಜನಗರ (ಸೆ.07): ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಯಳಂದೂರು ಪಟ್ಟಣ ಮತ್ತು ತಾಲೂಕಿನ ಹಲವು ಭಾಗ ತತ್ತರಿಸಿ ಹೋಗಿದ್ದು, ಹಲವು ಕಟ್ಟಡಗಳು ಜಲಾವೃತವಾಗಿದೆ. ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಆತಂಕಕ್ಕೆ ಒಳಗಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು, ಬಸ್‌ಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂತು. ಆದರೆ, ಅಗರದಿಂದ ಉತ್ತಂಬಳ್ಳಿ ಹೋಗುವ ಸಂಪರ್ಕ ಕಡಿತಗೊಂಡಿದೆ. 

ಯಳಂದೂರಿನಲ್ಲಿರುವ ವಲಯ ಅರಣ್ಯ ಇಲಾಖೆ, ಚೆಸ್ಕಾಂ ಇಲಾಖೆ, ಪದವಿ ಪೂರ್ವ ಕಾಲೇಜು, ಮಾರಮ್ಮನ ದೇವಾಲಯ, ಪೊಲೀಸ್‌ ವಸತಿ ಗೃಹ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸಿ ಮಂದಿರ ಪ್ರವಾಸಿ ಮಂದಿರದ ವಸತಿಗೃಹ ಸಂಪೂರ್ಣ ಜಲಾವೃತಗೊಂಡಿದ್ದು ಯಾರೂ ಕಾಲಿಡಲಾಗದ ಸ್ಥಿತಿ ಇದೆ. ತೆಪ್ಪದ ಮೂಲಕ ಸಿಬ್ಬಂದಿ ಹೊರಕ್ಕೆ: ಮಾಂಬಳ್ಳಿ ಠಾಣೆ ಮುಳುಗಡೆಯಾಗಿದ್ದು, ಪಿಎಸ್‌ಐ ಸೇರಿದಂತೆ ಸಿಬ್ಬಂದಿ ತೆಪ್ಪದ ಮೂಲಕ ಠಾಣೆಯಿಂದ ಹೊರಬಂದಿದ್ದಾರೆ. ಠಾಣೆಯಲ್ಲಿಟ್ಟಿದ್ದ ಕಡತಗಳನ್ನು ಮೊದಲನೇ ಅಂತಸ್ತಿನಲ್ಲಿಟ್ಟಿದ್ದಾರೆ ಎಂದು ತಿಳಿದುಬಂದಿದೆ. 

Tap to resize

Latest Videos

undefined

ಬಿಜೆಪಿಯವರು ಜೆಡಿಎಸ್‌ಗೆ ಒಳ್ಳೆ ಮಕ್ಮಲ್ ಟೋಪಿ ಹಾಕಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಬದುಕು ಮೂರಾಬಟ್ಟೆ: ಮಳೆ ಅಭಾವ, ನಾಲೆಗಳಲ್ಲಿ ನೀರಿನ ಕೊರತೆ ನಡುವೆಯೂ ಸಾವಿರಾರು ಅಡಿ ಆಳ ಕೊರೆದಾಗ ಸಿಕ್ಕಿರುವ ಹನಿ ನೀರನ್ನೇ ಬಳಸಿಕೊಂಡು ಕೃಷಿ ಮಾಡಿಕೊಂಡು ರೈತರ ಬದುಕನ್ನು ಅಧಿಕ ಮಳೆ ಮತ್ತು ಪ್ರವಾಹ ಮೂರಾಬಟ್ಟೆ ಮಾಡಿದೆ. ಚಾಮರಾಜನಗರ, ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳ ಬಹುಪಾಲು ಜಮೀನುಗಳು ಜಲಾವೃತಗೊಂಡು ಕೆರೆಯಂತಾಗಿವೆ. ರಭಸವಾಗಿ ನೀರು ಹರಿಯುವ ಕಡೆಗಳಲ್ಲಿ ಬೆಳೆ ಕೊಚ್ಚಿ ಹೋಗಿವೆ. 

ಕೆಲವು ಕಡೆಗಳಲ್ಲಿ ಭೂಮಿಯಿಂದ ಮೇಲೆದ್ದು ನೀರಿನಲ್ಲೇ ತೇಲುತ್ತಿವೆ. ಶೀತ ಭೂಮಿಯಲ್ಲಂತೂ ಕೊಳೆತು ಹೋಗಿದೆ. ಚಂದಕವಾಡಿ, ಆಲೂರು, ಹೊಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಬ್ಬು, ಅರಿಶಿಣ, ಅಡಿಕೆ, ತೆಂಗು, ಎಲೆಕೋಸು ಮತ್ತು ಬೆಳೆಗಳು ನಾಶವಾಗಿವೆ. ಎತ್ತ ನೋಡಿದರೂ ನೀರು ತುಂಬಿರುವ ಜಮೀನುಗಳೇ ಕಾಣುತ್ತಿವೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಅಘಾತ ನೀಡಿರುವ ಮಳೆ ಭಾರಿ ನಷ್ಟಉಂಟಾಗಿದೆ.

ರಸ್ತೆಗಳು ಮುಳುಗಡೆ: ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ಪಕ್ಕದ ರಸ್ತೆಗಳಿಗೆ ಹರಿಯುತ್ತಿರುವ ನೀರು ಸಂಪರ್ಕ ಕಡಿತಗೊಳಿಸಿದೆ. ಆಲೂರಿನಿಂದ ಯಳಂದೂರು ತಾಲೂಕಿನ ಅಂಬಳೆ ಗ್ರಾಮಕ್ಕೆ ಹೋಗುವ ದಾರಿಯ ಮೂರು-ನಾಲ್ಕು ಕಡೆಗಳಲ್ಲಿ ರಸ್ತೆ ಮುಳುಗಡೆಯಾಗಿದೆ. ಗ್ರಾಮಸ್ಥರು ಸೊಂಟದ ಮಟ್ಟದವರೆಗೆ ನೀರು ಬಂದರೂ ನಿಧಾನವಾಗಿ ದಾಟುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.

ಹಂದಿ ಜೋಗಿಗಳ ರಕ್ಷಣೆ: ಕಣ್ಣೇಗಾಲ ಗ್ರಾಮದ ಹೊರ ವಲಯದಲ್ಲಿ ಜಲಾವೃತಗೊಂಡಿರುವ ಹಂದಿಜೋಗಿ ಜನಾಂಗದ 20 ಜನರನ್ನು ರಕ್ಷಣೆ ಮಾಡಲಾಯಿತು. ಮುಳ್ಳಿನ ಗಿಡಗಳು ಬೆಳೆದುಕೊಂಡಿರುವುದರಿಂದ ಸ್ಥಳಕ್ಕೆ ಹೋಗಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೋಮವಾರ ರಾತ್ರಿ ಬೋಟ್‌ ಮೂಲಕ ರಕ್ಷಣೆಗೆ ಯತ್ನ ನಡೆದರೂ ಅಲ್ಲಿಗೆ ಬೋಟ್‌ ಹೋಗಲು ಸಾಧ್ಯವಾಗದೆ ಸ್ಥಳಾಂತರ ಮಾಡಲು ಕಷ್ಟವಾಗಿತ್ತು.ಅಗ್ನಿಶಾಮಕ ದಳ ಸಿಬ್ಬಂದಿ ಜನರನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು. ಮಾನವೀಯತೆ ಮೆರೆದ ಯುವಕರು: ಹೊಂಗನೂರಿನಲ್ಲಿ ಹಾಸ್ಟೆಲ್‌ ಸೇತುವೆ ಸಿದ್ದಯ್ಯನಪುರದ ಬೈಕ್‌ ಸವಾರರು ಸೆಳೆತಕ್ಕೆ ಕೊಚ್ಚಿ ಹೋಗುವ ಪರಿಸ್ಥಿತಿ, ಗ್ರಾಮದ ಯುವಕರು ನೀರಿಗೆ ಧುಮುಕಿ ಹಗ್ಗ ಕಟ್ಟಿಬೈಕ್‌ ಸವಾರರನ್ನು ರಕ್ಷಿಸಿದರು.

Chamarajanagar: ಕಟ್ಟೆ ಗಣಿಗನೂರು ಸಣ್ಣ ನೀರಾವರಿ ಕಾಲುವೆ ಕಳಪೆ ಪ್ರಕರಣ ಮುಚ್ಚಿ ಹಾಕಲು ಯತ್ನ

ವಿದ್ಯುತ್‌ ಪ್ರವಹಿಸಿ ವ್ಯಕ್ತಿ ಸಾವು: ಅಟ್ಟುಗುಳಿಪುರದ ರೈತ ಶಿವಬಸಪ್ಪ ವಿದ್ಯುತ್‌ ಪ್ರವಹಿಸಿ ಸೋಮವಾರ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸುವರ್ಣಾವತಿ ಜಲಾಶಯದ ಬಳಿ ಇದ್ದ ಜಮೀನ ಬಳಿ ಹಳ್ಳದಲ್ಲಿ ನೀರು ನಿಂತಿತ್ತು. ವಿದ್ಯುತ್‌ ತಂತಿ ನೀರಿಗೆ ತಗುಲಿ ಹಳ್ಳ ದಾಟುತ್ತಿದ್ದ ಶಿವಬಸಪ್ಪಗೆ ಶಾಕ್‌ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

click me!